ಮುಂಬೈ: ಎರಡು ದಿನದ ರಜಾ ಅರ್ಜಿಯನ್ನು ತರದಕ್ಕೆ 10 ವರ್ಷದ ಬಾಲಕಿಗೆ ಚೆನ್ನಾಗಿ ಥಳಿಸಿದ್ದ ಮುಂಬೈ ಶಾಲೆಯೊಂದರ ತರಗತಿ ಶಿಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ.
ಈ ಘಟನೆ ನಗರದ ಮುನ್ಸಿಪಲ್ ಕಾರ್ಪೋರೇಷನ್ ನಡೆಸಲ್ಪಡುವ ಸಾಯಿ ಜೀವನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದಿದೆ. ಘಟನೆಯಿಂದ ಅಮನಾತಾದ ಶಿಕ್ಷಕನನ್ನು ಶ್ರೀಕೃಷ್ಣ ಕೆಂಜಾಲೆ ಎಂದು ಗುರುತಿಸಲಾಗಿದೆ.
Advertisement
ಏನಿದು ಘಟನೆ?: 5ನೇ ತರಗತಿಯಲ್ಲಿ ಓದುತ್ತಿದ್ದ ಬಿಹಾದ ಮೂಲದ ವಿದ್ಯಾರ್ಥಿನಿ ಹೊಟ್ಟೆ ನೋವು ಅಂತ ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಆದ್ರೆ ರಜೆ ಕಳೆದು ಶಾಲೆಗೆ ಹೋಗಬೇಕಿದ್ರೆ ಆಕೆ ರಜೆಯ ಅರ್ಜಿಯನ್ನು ತೆದುಕೊಂಡು ಹೋಗಲು ಮರೆತಿದ್ದಳು. ಇದರಿಂದ ಸಿಟ್ಟುಗೊಂಡ ಶಿಕ್ಷಕ ಆಕೆಗೆ ಶಿಕ್ಷೆಯಾಗಿ ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕಿಯ ಬಲಗೈಯಲ್ಲಿ ಬಾಸುಂಡೆ ಬಂದಿದೆ.
Advertisement
Advertisement
ಬುಧವಾರ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ಕಟ್ಟಡ ಕಾರ್ಮಿಕರಾಗಿದ್ದು ಈ ವಿಚಾರವನ್ನು ಪಾಲಿಕೆ ಸದಸ್ಯ ರಾಹುಲ್ ಜಾಧವ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಜಾಧವ್ ಅವರು ಪುಣೆ ನಗರಾಯುಕ್ತರಿಗೆ ವಿಷಯ ತಿಳಿಸುತ್ತಾರೆ. ಜಾಧವ್ ಮಾಹಿತಿಯಂತೆ ಅವರು ಚಿಕಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆಯ ಬಗ್ಗೆ ಬಾಲಕಿ ಅಥವಾ ಆಕೆಯ ತಂದೆ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ವರದಿಯಾಗಿದೆ.
Advertisement
ಸದ್ಯ ಬಾಲಕಿ ನಗರದ ಯಶ್ವಂತ್ ರಾವ್ ಚೌಹಾಣ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾಳೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಅಷ್ಟಕ್ಕೂ ಈ ಘಟನೆ ನಡೆದ ದಿನ ಪ್ರಾಂಶುಪಾಲರು ಗೈರಾಗಿದ್ದರು. ಸದ್ಯ ಪ್ರಕರಣ ಸಂಬಂಧ ಶಿಕ್ಷಕನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಅಂತ ಶಿಕ್ಷಣಾಧಿಕಾರಿ ಬಿ ಎಸ್ ಅವಾರಿ ತಿಳಿಸಿದ್ದಾರೆ.