ಮುಂಬೈ: ಪುಣೆ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್ ಆಗುವ ಮುನ್ನ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆರೋಪಿ ಬಂಧನಕ್ಕೆ 13 ಪೊಲೀಸ್ ಟೀಂ, 500ಕ್ಕೂ ಹೆಚ್ಚು ಪೊಲೀಸರು ಡ್ರೋನ್, ಶ್ವಾನದಳ ಬಳಸಲಾಗಿತ್ತು. ಕೃತ್ಯದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಆರೋಪಿ ಮನೆಗೆ ಹೋಗಿದ್ದ. ಬಂಧನದ ವೇಳೆ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ.
Advertisement
ಶಿರೂರ್‌ನ ಗುನಾತ್ ಗ್ರಾಮದ ನಿವಾಸಿ ದತ್ತಾತ್ರಾಯ ರಾಮದಾಸ್ ಗೇಡ್ (37) ಶುಕ್ರವಾರ ಮಧ್ಯಾಹ್ನ 1:10 ರ ಸುಮಾರಿಗೆ ಅರೆಸ್ಟ್ ಆಗಿದ್ದ. ಸಾಸೂನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಬಂಧನಕ್ಕೆ ಒಳಪಡಿಸಲಾಯಿತು.
Advertisement
ಪುಣೆ ಸಿಟಿ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು, ಆರೋಪಿ ಕುತ್ತಿಗೆಯಲ್ಲಿ ಗಾಯದ ಗುರುತಿತ್ತು. ಪ್ರಾಥಮಿಕ ತನಿಖೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ಮೂಡಿದೆ ಎಂದು ತಿಳಿಸಿದ್ದಾರೆ.
Advertisement
ಆರೋಪಿಯು ಮನೆಯೊಂದಕ್ಕೆ ತೆರಳಿ ನೀರು ಮತ್ತು ಆಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ. ಆ ಕುಟುಂಬ ಆರೋಪಿ ಬಂಧನಕ್ಕೆ ಪೊಲೀಸರಿಗೆ ಸಹಕಾರ ನೀಡಿದೆ.