ಮುಂಬೈ: ಪುಣೆಯ ಪಬ್‌ವೊಂದರಲ್ಲಿ (Pune Pub) ಹೊಸ ವರ್ಷ ಸಂಭ್ರಮಾಚರಣೆಯ ಆಹ್ವಾನಿತರಿಗೆ ಕಾಂಡೋಮ್‌ಗಳು ಮತ್ತು ಒಆರ್‌ಎಸ್‌ಗಳನ್ನು ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರದ ಯುವಕಾಂಗ್ರೆಸ್ (Youth Congress) ಘಟಕ ದೂರು ನೀಡಿದೆ.
Advertisement
ಕಾಂಡೋಮ್ (Condoms) ಮತ್ತು ಓಆರ್‌ಎಸ್ ಜ್ಯೂಸ್ ವಿತರಣೆ ಮಾಡುತ್ತಿರುವ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಪಬ್ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಯುವ ಕಾಂಗ್ರೆಸ್ ಘಟಕ ಒತ್ತಾಯಿಸಿದೆ. ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರಿಗೆ ದೂರು ನೀಡಿದೆ. ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ
Advertisement
Advertisement
ನಾವು ಪಬ್ ಮತ್ತು ರಾತ್ರಿಜೀವನಕ್ಕೆ ವಿರೋಧಿಗಳಲ್ಲ. ಆದ್ರೆ, ಯುವಸಮೂಹವನ್ನು ಆಕರ್ಷಿಸುವ ಮಾರ್ಕೆಟಿಂಗ್ ತಂತ್ರವು ಪುಣೆ ನಗರದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದು ಯುವ ಕಾಂಗ್ರೆಸ್ ಸದಸ್ಯ ಅಕ್ಷಯ್ ಜೈನ್ ಹೇಳಿದ್ದಾರೆ.
Advertisement
ಈ ಸಂಬಂಧ ದೂರು ಸ್ವೀಕರಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವಾರು ಆಹ್ವಾನಿತರ ಹೇಳಿಕೆಗಳನ್ನ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಪ್ತತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಶವ ಸ್ಕಾಟ್ಲೆಂಡ್‌ನ ನದಿಯಲ್ಲಿ ಪತ್ತೆ