ಪುಣೆ: ಪೋರ್ಶೆ ಕಾರು ಅಪಘಾತ (Pune Porsche accident) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇನ್‌ಸ್ಪೆಕ್ಟರ್ ರಾಹುಲ್ ಜಗದಾಳೆ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಶ್ವನಾಥ ತೋಡ್ಕರಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು. ಇವರಿಬ್ಬರು ಯರವಾಡ ಪೊಲೀಸ್ ಠಾಣೆಯವರಾಗಿದ್ದಾರೆ.
- Advertisement -
- Advertisement -
ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಮೇಲೆ ಶುಕ್ರವಾರ ಅಮಾನತುಗೊಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನೋಜ್ ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿಯಲು 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ ಕಿಲ್ಲರ್ ಬಾಯ್ – ಮುಂದಾಗಿದ್ದೇನು ಗೊತ್ತೇ?
- Advertisement -
- Advertisement -
ಅಪ್ರಾಪ್ತನೋರ್ವ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರು ಎಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದನು. ನಗರದ ಕಲ್ಯಾಣಿನಗರದಲ್ಲಿ ಕಾರು ಅಪಘಾತವಾಗಿ ಭಾರೀ ಪ್ರತಿಭಟನೆಯ ಬಳಿಕ ಯರವಾಡ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಳ್ಳುವಾಗ ಪೊಲೀಸ್ ಅಧಿಕಾರಿಗಳ ಲೋಪದೋಷವನ್ನು ಆಂತರಿಕ ತನಿಖೆಯು ಎತ್ತಿ ತೋರಿಸಿದೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಈ ಹಿಂದೆ ತಿಳಿಸಿದ್ದರು.
ಭಾನುವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ರಾತ್ರಿ 11 ಗಂಟೆಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಇದಲ್ಲದೆ ಅಪಘಾತ ಸಂಬಂಧ ಮೊದಲು ಐಪಿಸಿ ಸೆಕ್ಷನ್ 304 (ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ದಾಖಲಿಸಲಾಯಿತು. ಆದರೆ ಭಾರೀ ಪ್ರತಿಭಟನೆಯ ಬಳಿಕ ನಂತರ ಸೆಕ್ಷನ್ 304 (ಹತ್ಯೆ) ಸೇರಿಸಲಾಯಿತು ಎಂದು ಅಮಿತೇಶ್ ಕುಮಾರ್ ವಿವರಿಸಿದ್ದಾರೆ.