Monday, 16th July 2018

Recent News

ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರ ನೋಡುತ್ತಿದ್ದ ವ್ಯಕ್ತಿಯಿಂದ ‘ಕಾಪಾಡಿ’ ಎಂದು ಸುಷ್ಮಾ ಸ್ವರಾಜ್‍ಗೆ ಟ್ವೀಟ್

ಮುಂಬೈ: ಬಾಲಿವುಡ್‍ನ `ಜಬ್ ಹ್ಯಾರಿ ಮೆಟ್ ಸೇಜಲ್’ ಸಿನಿಮಾ ನೋಡಿದ ವ್ಯಕ್ತಿಯೊಬ್ಬ ನನ್ನನ್ನು ಕಾಪಾಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ನಟಿ ಅನುಷ್ಕಾ ಶರ್ಮಾ ಮತ್ತು ಶಾರೂಖ್ ಖಾನ್ ನಟಿಸಿರುವ `ಜಬ್ ಹ್ಯಾರಿ ಮೆಟ್ ಸೇಜಲ್’ ಸಿನಿಮಾ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಪುಣೆಯ ವಿಶಾಲ್ ಸೂರ್ಯವಂಶಿ ಎಂಬವರು ನಾನು ಪುಣೆಯ ಹಿಂಜವಾಡಿಯ ಚಿತ್ರಮಂದಿರದಲ್ಲಿ ಜಬ್ ಹ್ಯಾರಿ ಮೆಟ್ ಸೆಜಾಲ್ ಸಿನಿಮಾ ನೋಡುತ್ತಿದ್ದೇನೆ. ಸಾಧ್ಯವಾದ್ರೆ ನನ್ನನ್ನು ರಕ್ಷಿಸಿ ಎಂದು ಎರಡು ಅಳುತ್ತಿರುವ ಎಮೋಜಿಗಳನ್ನು ಹಾಕಿ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಅನೇಕರು ಫನ್ನಿ ಫನ್ನಿಯಾಗಿ ರೀಟ್ವೀಟ್ ಮಾಡಿದ್ದಾರೆ. ಇಮ್ತಿಯಾಜ್ ಅಲೀ ಎಂಬವರು ಜಬ್ ಹ್ಯಾರಿ ಮೆಟ್ ಸೆಜಾಲ್ ಸಿನಿಮಾವನ್ನು ವೀಕ್ಷಿಸುವ ಪ್ರೇಕ್ಷಕರ ಅವಸ್ಥೆಯನ್ನು ಕಾಪಾಡಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದ ನೋಡಲು ಖರ್ಚು ಮಾಡಿದ್ದ ಹಣವನ್ನು ಹಿಂದುರುಗಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರೀಯವಾಗಿರೋ ಸುಷ್ಮಾ ಸ್ವರಾಜ್ ತೊಂದರೆಯಲ್ಲಿರುವ ಭಾರತೀಯರ ರಕ್ಷಣೆಗೆ ಸಹಾಯವನ್ನು ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ವಿಶಾಲ್ ನನ್ನನ್ನು ಈ ಸಿನಿಮಾದಿಂದ ರಕ್ಷಿಸಿ ಎಂದು ವ್ಯಂಗ್ಯವಾಗಿ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ಟ್ವೀಟ್‍ಗೆ ಸುಷ್ಮಾ ಸ್ವರಾಜ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಟ್ವಿಟ್ಟರ್ 80 ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಸುಷ್ಮಾ ಸ್ವರಾಜ್ ಬಹುತೇಕ ಮಂದಿಯ ಟ್ವೀಟ್‍ಗಳಿಗೆ ಉತ್ತರ ನೀಡುವುದಲ್ಲದೆ ಅವರಿಗೆ ಬೇಕಾದ ನೆರವು ಕೂಡ ನೀಡಿದ್ದಾರೆ. ಆದ್ರೆ ಕೆಲವೊಮ್ಮೆ ಟ್ವಿಟ್ಟರಿಗರು ವಿಚಿತ್ರವಾಗಿ ಟ್ವೀಟ್ ಮಾಡಿ ಸಚಿವೆಯನ್ನ ಟ್ಯಾಗ್ ಮಾಡಿದ್ದೂ ಇದೆ.

ಕೆಲವು ದಿನಗಳ ಹಿಂದೆ ಕರಣ್ ಎಂಬ ವ್ಯಕ್ತಿ, ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ಮಂಗಳಯಾನದ ಮೂಲಕ 987 ದಿನಗಳ ಹಿಂದೆ ಕಳಿಸಿದ್ದ ಊಟ ಇನ್ನೇನು ಖಾಲಿಯಾಗುತ್ತಾ ಬಂದಿದೆ. ಮಂಗಳಯಾನ-2 ಯಾವಾಗ ಕಳಿಸ್ತೀರಾ? ಎಂದು ಪ್ರಶ್ನಿಸಿ ಸುಷ್ಮಾ ಸ್ವರಾಜ್ ಅವರ ಖಾತೆಗೆ ಹಾಗೂ ಇಸ್ರೋ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಹಾಸ್ಯಾಸ್ಪದವಾಗಿಯೇ ಉತ್ತರ ನೀಡಿರುವ ಸುಷ್ಮಾ ಸ್ವರಾಜ್, ನೀವು ಮಂಗಳಗ್ರಹದಲ್ಲಿ ಸಿಲುಕಿದ್ರೂ ಸರಿ, ಭಾರತೀಯ ರಾಯಭಾರಿಗಳು ನಿಮಗೆ ಸಹಾಯ ಮಾಡಲು ಅಲ್ಲಿರ್ತಾರೆ ಎಂದಿದ್ದಾರೆ.

ಸಿನಿಮಾದಲ್ಲಿ ಟೂರಿಸ್ಟ್ ಗೈಡ್ ಆಗಿರುವ ಶಾರುಖ್ ಖಾನ್ ಪ್ರವಾಸಿ ಅನುಷ್ಕಾ ಶರ್ಮಾಳ ಕಳೆದುಹೋಗಿರುವ ಉಂಗುರವನ್ನು ಹುಡುಕುವ ಕಥಾಹಂದರವನ್ನು ಹೊಂದಿದೆ. ಸಿನಿಮಾ ಕಥೆಯಲ್ಲಿ ಯಾವುದೇ ಹೊಸತನವಿಲ್ಲದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸಿನಿಮಾದ ಹಾಡುಗಳು ಸಹ ನೆನಪಿನಲ್ಲಿ ಉಳಿಯುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *