ಪುಣೆ: 10 ವರ್ಷದ ಅವಳಿ ಸಹೋದರರು ತಮ್ಮ ತಂದೆ – ತಾಯಿ ಜೊತೆ ಸೇರಿ 13 ಸಾವಿರ ಅಡಿ ಎತ್ತರದಿಂದ ಜಿಗಿದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅವಳಿ ಮಕ್ಕಳಾದ ವೈಷ್ಣವ್ ಹಾಗೂ ವೃಷಭ್ ತನ್ನ ತಂದೆ ವೈಭವ್ ರಾಣೆ ಮತ್ತು ಶೀತಲ್ ಮಹಾಜನ್ ಅವರ ಜೊತೆ ಆಂಸ್ಟಡ್ರ್ಯಾಮ್‍ನಲ್ಲಿ 13,000 ಅಡಿ ಎತ್ತರದಿಂದ ಜಿಗಿದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Advertisement
Advertisement
ವೈಶ್ಣವ್ ಹಾಗೂ ವೈಶಭ್‍ಗೆ ತಮ್ಮ 10ನೇ ವರ್ಷದ ಹುಟ್ಟುಹಬ್ಬ ತನ್ನ ಪೋಷಕರ ಜೊತೆ ಸ್ಕೈಡೈವಿಂಗ್ ಮಾಡುವ ಮೂಲಕ ವಿಶೇಷವಾಗಿ ಆಚರಿಸಬೇಕು ಎಂದು ಕನಸು ಕಂಡಿದ್ದರು. ಹಾಗೆಯೇ ಈ ಕುಟುಂಬ ಏಪ್ರಿಲ್ 26ರಂದು ಆಂಸ್ಟಡ್ರ್ಯಾಮ್‍ಗೆ ಹೋಗಿ ಸೂಪರ್ ಕಾರವನ್ 206 ವಿಮಾನದಿಂದ ಸ್ಕೈಡೈವಿಂಗ್ ಮಾಡಿದೆ.
Advertisement
ಶೀತಲ್ ಹಾಗೂ ವೈಭವ್ ವೃತ್ತಿಪರ ಸ್ಕೈಡೈವರ್ ಗಳಾಗಿದ್ದು, ಶೀತಲ್ ಒಟ್ಟು 740 ಸ್ಕೈಡೈವಿಂಗ್ ಮಾಡಿದರೆ, ವೈಭವ್ 58 ಸ್ಕೈಡೈವಿಂಗ್ ಮಾಡಿದ್ದಾರೆ. ಅತಿ ಚಿಕ್ಕವಯಸ್ಸಿನಲ್ಲಿ ಅವಳಿ ಮಕ್ಕಳು ಸ್ಕೈಡೈವಿಂಗ್ ಮಾಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಆಗಬೇಕು ಎಂದು ಶೀತಲ್ ಅವರ ಕುಟುಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
Advertisement
ಏಪ್ರಿಲ್ 26ರಂದು ನಮ್ಮ ಮಕ್ಕಳು ತಮ್ಮ 10ನೇ ವರ್ಷದ ಹುಟ್ಟುಹಬ್ಬವನ್ನು ಸ್ಕೈಡೈವಿಂಗ್ ಮಾಡುವ ಮೂಲಕ ಆಚರಿಸಿಕೊಳ್ಳಬೇಕು ಎಂದು ಇಚ್ಛಿಸಿದ್ದರು. ಅವರ ಆಸೆಯನ್ನು ಪೂರೈಸಲು ನಾವು ಕಳೆದ ವಾರ ಜೊತೆ ಆಂಸ್ಟಡ್ರ್ಯಾಮ್‍ಗೆ ಬಂದು ಸ್ಕೈಡೈವಿಂಗ್ ಮಾಡಿದ್ದೇವೆ ಎಂದು ತಂದೆ ವೈಭವ್ ತಿಳಿಸಿದ್ದಾರೆ.
ಏಪ್ರಿಲ್ 18, 2004ರಂದು ಶೀತಲ್ ಯಾವುದೇ ತರಬೇತಿ ಪಡೆಯದೇ ಮೈನಸ್ 37 ಡಿಗ್ರಿ ಸೆಲ್ಸಿಯಸ್‍ನಲ್ಲಿ 2,700 ಅಡಿ ಎತ್ತರದಿಂದ ಜಿಗಿದು ಮೊದಲ ಸ್ಕೈಡೈವಿಂಗ್ ಮಾಡಿದ್ದರು. ಸದ್ಯ ಶೀತಲ್ 17 ರಾಷ್ಟ್ರೀಯ ದಾಖಲೆ ಹಾಗೂ 6 ವಿಶ್ವ ದಾಖಲೆಯನ್ನು ಮಾಡಿದ್ದಾರೆ.