Pune Bus Rape Case | ಅಕ್ಕ ಅಕ್ಕ ಅಂತ ಕರೆದವನೇ ಅತ್ಯಾಚಾರ ಮಾಡಿಬಿಟ್ಟ

Public TV
2 Min Read
Pune Bus Rape Case

ಪುಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್‌ನೊಳಗೆ 26 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ (Pune Bus Rape Case) ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಅಕ್ಕ ಅಕ್ಕ ಎಂದು ಕರೆದವನೇ ಅತ್ಯಾಚಾರ ಮಾಡಿದ ಎಂಬ ಮನಕಲುಕುವ ವಿಷಯ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಹೌದು. ಮಂಗಳವಾರ ಮುಂಜಾನೆ 5:45 ರಿಂದ 6 ಗಂಟೆ ಸಮಯದಲ್ಲಿ 36 ವರ್ಷದ ದತ್ತಾತ್ರೆಯ ರಾಮದಾಸ್‌ ಗಾಡೆ ಈ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯು ಸತಾರಾ ಜಿಲ್ಲೆಯಲ್ಲಿರುವ ತನ್ನ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಅರೋಪಿ ಆಕೆಯನ್ನ ʻಅಕ್ಕ… ಅಕ್ಕʼ(ದೀದಿ) ಎಂದು ಕೂಗಿದ್ದಾನೆ. ನಂತರ ಆಕೆಯನ್ನ ಡಿಪೋದ ಒಂದು ಮೂಲೆಯಲ್ಲಿ ನಿಂತಿದ್ದ ಬಸ್‌ಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಆಕೆ ಬಸ್‌ ಖಾಲಿ ಇದೆಯಲ್ಲ ಎಂದು ಕೇಳಿದಾಗ.. ಇಲ್ಲ ಎಲ್ಲರೂ ಮಲಗಿದ್ದಾರೆ ಎಂದು ಸುಳ್ಳು ಹೇಳಿ ಆಕೆಯನ್ನ ಕರೆದೊಯ್ದಿದ್ದಾನೆ. ಬಸ್‌ ಹತ್ತುತ್ತಿದ್ದಂತೆ ಡೋರ್‌ ಲಾಕ್‌ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಬಸ್ಸಿನೆಡೆಗೆ ಇಬ್ಬರು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪುಣೆ ರೇಪ್‌ ಕೇಸ್‌ – ಬೇರೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ಕಾಮುಕ

PUNE RAPE CASE

ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ:
ಸದ್ಯ ಆರೋಪಿಯನ್ನ ಬಂಧಿಸಲು ತ್ವರಿತ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್‌ ಇಲಾಖೆ ಶ್ವಾನದಳದೊಂದಿಗೆ 13 ತಂಡಗಳನ್ನು ನಿಯೋಜಿಸಿದೆ. ‌ ಹೆಚ್ಚುವರಿಯಾಗಿ, ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೊಷಿಸಿದೆ. ಇದನ್ನೂ ಓದಿ: Bidar | ಮದ್ಯ ಸೇವಿಸಿ ಕಿರುಕುಳ – ಪೋಷಕರ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ

ಬೇರೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಕಾಮುಕ:
ಮಂಗಳವಾರ ಬೆಳಗ್ಗೆ ಪುಣೆ ಸ್ವರ್ಗೇಟ್ ಡಿಪೋದಲ್ಲಿ ಬಸ್‌ನಲ್ಲೇ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಬೇರೆ ಪ್ರಕರಣಗಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಎಂದು ತಿಳಿದುಬಂದಿದೆ. ಈತನ ವಿರುದ್ಧ ಶಿರೂರು ಶಿಕ್ರಾಪುರ, ಸ್ವರ್ಗೇಟ್ ಪೊಲೀಸ್‌ ಠಾಣೆಗಳಲ್ಲಿ 6 ಕೇಸ್‌ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Share This Article