ಕಾರವಾರ: ಶಂಕಿತ ಉಗ್ರನ ಪತ್ತೆಗಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ (ATS) ದಳದ ಅಧಿಕಾರಿಗಳು ಆತನ ಮನೆಗೆ ನೋಟಿಸ್ ಅಂಟಿಸಿ ಶೋಧ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ನಡೆದಿದೆ.
ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿಯಾಗಿದ್ದ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗೆ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ದರ್ಶನ್ ಕೊಲೆ ಮಾಡೋ ವ್ಯಕ್ತಿ ಅಲ್ಲ : ಮದ್ದೂರು ಎಂಎಲ್‌ಎ ಉದಯ್ ಗೌಡ ಸರ್ಟಿಫಿಕೇಟ್
ಪುಣೆಯಲ್ಲಿ ನಡೆದ ಉಗ್ರ ಕೃತ್ಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಈತ ಸಿರಿಯಾ (Syria) ಅಥವಾ ಅಫ್ಘಾನಿಸ್ತಾನದಲ್ಲಿ ಅಮೆರಿಕ (USA) ಬಾಂಬ್ ಸ್ಫೋಟದಲ್ಲಿ ಮೃತನಾಗಿರುವ ಬಗ್ಗೆ ಅಮೇರಿಕದ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೆ ಈತನ ಸಾವಿಗೆ ಯಾವುದೇ ಪುರಾವೆಗಳು ಭಾರತಕ್ಕೆ ಸಿಕ್ಕಿರಲಿಲ್ಲ.
ಈಗ ಮಹಾರಾಷ್ಟ್ರ ಕೋರ್ಟ್‌ನಿಂದ ಬಂಧಿಸಲು ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಪೊಲೀಸರ ಸಹಾಯ ಕೇಳಿದ್ದಾರೆ. ಒಂದು ವೇಳೆ ಮೃತಪಟ್ಟಿದ್ದರೆ ಕುಟುಂಬದವರು ಮಾಹಿತಿ ನೀಡುವ ಸಲವಾಗಿ ನೋಟಿಸ್ ಅಂಟಿಸಿದ್ದಾರೆ.
ಈತನ ಬಗ್ಗೆ ಕುಟುಂಬದವರು ಸಹ ಯಾವುದೇ ಮಾಹಿತಿ ನೀಡಿಲ್ಲ ಎಂಬ ವಿಚಾರ ಪೊಲೀಸರಿಂದ ತಿಳಿದುಬಂದಿದೆ.