ಮುಂಬೈ: ಮನೆಯಲ್ಲಿ ಪತಿಯೊಬ್ಬ ಪತ್ನಿ ಮಾಡುವ ಸಣ್ಣ ತಪ್ಪುಗಳಿಗೂ ದಂಡ ಹಾಕುವ ಮೂಲಕ ಕಿರುಕುಳ ನೀಡುತ್ತಿರುವ ವಿಚಿತ್ರ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಪತ್ನಿ ಶ್ವೇತಾ ಮಾಡುವ ಪ್ರತಿಯೊಂದು ತಪ್ಪಿಗೆ ಪತಿರಾಯ ಅನಿಲ್ ದಂಡ ಪಡೆಯುತ್ತಿದ್ದಾನೆ. ಅನಿಲ್ ಮತ್ತು ಶ್ವೇತಾ 14 ವರ್ಷಗಳ ಹಿಂದೆ ಪ್ರೇಮಿಸಿ ಮದುವೆಯಾಗಿದ್ದರು. ಪುಣೆ ಮೂಲದ ಶ್ವೇತಾ ಮದುವೆ ಬಳಿಕ ಮುಂಬೈನಲ್ಲಿ ವಾಸವಾಗಿದ್ದರು. ಮದುವೆಯಾದ 5 ವರ್ಷ ಚೆನ್ನಾಗಿಯೇ ಇದ್ದ ಅನಿಲ್ ನಂತರ ಶ್ವೇತಾರ ಪ್ರತಿಯೊಂದು ತಪ್ಪುಗಳಿಗೆ ದಂಡ ವಿಧಿಸಲು ಆರಂಭಿಸಿದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತ ಶ್ವೇತಾ ತವರು ಮನೆ ಸೇರಿದ್ದು, ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಯಾವ ತಪ್ಪಿಗೆ ಎಷ್ಟು ದಂಡ?:
1. ಮಾರುಕಟ್ಟೆಯಿಂದ ಬಾಳೆಹಣ್ಣು ತರದೇ ಇದ್ದರೆ 100 ರೂ.
2. ಮನೆಯಲ್ಲಿ ಹೆಚ್ಚಿನ ಸಮಯವರೆಗೆ ಟಿವಿ ನೋಡಿದ್ರೆ 500 ರೂ.
3. ಮಕ್ಕಳನ್ನು ಶಾಲೆಯಿಂದ ಅಥವಾ ಟ್ಯೂಶನ್ ನಿಂದ ಕರೆತರೋದು ತಡವಾದರೆ 2,000 ರೂ.
4. ಮನೆಯ ಯಾವುದೇ ಕೋಣೆಯಲ್ಲಿ ಅನಾವಶ್ಯಕವಾಗಿ ಲೈಟ್ ಹಾಕಿದರೆ 50 ರೂ.
Advertisement
Advertisement
ಹೀಗೆ ಪತ್ನಿಯ ಪ್ರತಿಯೊಂದು ಕೆಲಸದಲ್ಲಿ ಕಂಡು ಹಿಡಿದು ಅನಿಲ್ ದಂಡ ಹಾಕಲಾರಂಭಿಸಿದ್ದಾನೆ. ಶ್ವೇತಾ ಎಂಬಿಎ ಪದವೀಧರೆಯಾಗಿದ್ದು, ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡಿ ತಿಂಗಳಿಗೆ 22,000 ರೂ. ಸಂಬಳ ಪಡೆಯುತ್ತಾರೆ. ದಂಡ ಅಂತಾ ಹೇಳಿ ತಿಂಗಳ ಪೂರ್ಣ ಸಂಬಳವನ್ನು ಪಡೆದು ಕೇವಲ ಖರ್ಚಿಗೆ 500 ರೂ. ಅನಿಲ್ ನೀಡುತ್ತಾನೆ. ಹೊಸ ಬಟ್ಟೆ ಖರೀದಿಸಲು ಹಣ ನೀಡುವುದಿಲ್ಲ ಎಂದು ಶ್ವೇತಾ ಆರೋಪಿಸಿದ್ದಾರೆ.
Advertisement
ಅನಿಲ್ ಸಹ ಎಂಬಿಎ ಪದವೀಧರನಾಗಿದ್ದು ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 1 ಲಕ್ಷದ 10 ಸಾವಿರ ರೂ. ಸಂಬಳ ಪಡೆಯುತ್ತಿದ್ದಾನೆ. ಮುಂಬೈನಲ್ಲಿ ಮೂರು ಫ್ಲ್ಯಾಟ್ ಅನಿಲ್ ಹೊಂದಿದ್ದಾನೆ. ಒಂದು ಫ್ಲ್ಯಾಟ್‍ನಲ್ಲಿ ಅನಿಲ್ ವಾಸವಾಗಿದ್ದು, ಉಳಿದೆರೆಡನ್ನು ಬಾಡಿಗೆಗೆ ನೀಡಿದ್ದಾನೆ. ಎರಡು ತಿಂಗಳ ಹಿಂದೆ ಶ್ವೇತಾರ ಸಿಮ್ ಕಾರ್ಡ್, ಬ್ಯಾಗ್, ಕ್ರೆಡಿಟ್, ಡೆಬಿಟ್ ಕಾರ್ಡ್, ಪರ್ಸ್ ಎಲ್ಲವು ಪಡೆದುಕೊಂಡು ಮನೆಯಿಂದ ಹೊರ ಹಾಕಿದ್ದಾನೆ.
ತನ್ನ ತಪ್ಪಿನ ಅರಿವಾದ ಅನಿಲ್ ಪತ್ನಿಯನ್ನು ಕರೆಯಲು ಪುಣೆಗೆ ತೆರಳಿದ್ದಾನೆ. ಈ ವೇಳೆ ಕುಟುಂಬ ವೈದ್ಯರು ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ್ದಾರೆ. ಕೌನ್ಸಲಿಂಗ್ ಬಳಿಕವೂ ಶ್ವೇತಾ ಪತಿಯೊಂದಿಗೆ ಮುಂಬೈ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews