ಕುಂಬಳಕಾಯಿ ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್ ʼಎʼಯನ್ನು ಒಳಗೊಂಡಿದೆ. ಇದನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ದೃಷ್ಟಿ ಉತ್ತಮವಾಗಿರುತ್ತದೆ. ಅಲ್ಲದೇ ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡಿ ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಬೇಕರಿಯಲ್ಲಿ ದೊರೆಯುವ ಪಂಪ್‌ಕಿನ್ ರೋಲ್ ಅಂದರೆ ಕುಂಬಳಕಾಯಿ ರೋಲ್ ಅನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಟೇಸ್ಟಿ ಚಾಟ್‌ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?
Advertisement
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 4
ಬೇಕಿಂಗ್ ಸೋಡ – 1 ಚಮಚ
ಕುಂಬಳಕಾಯಿ – ಒಂದೂವರೆ ಕಪ್
ಉಪ್ಪು – ಕಾಲು ಚಮಚ
ವೆನಿಲ್ಲಾ ಸಾರ – ಅಗತ್ಯಕ್ಕೆ ತಕ್ಕಂತೆ
ಸಕ್ಕರೆ ಪುಡಿ – ಅಗತ್ಯಕ್ಕೆ ಬೇಕಾದಷ್ಟು
ಸಕ್ಕರೆ – 2 ಕಪ್
ಮೈದಾ ಅಥವಾ ಗೋಧಿ ಪುಡಿ – ಒಂದೂವರೆ ಕಪ್
ದಾಲ್ಚಿನ್ನಿ – 1 ಚಮಚ
ಬೆಣ್ಣೆ – 1 ಚಮಚ
ಕ್ರೀಮ್ ಚೀಸ್ – 100 ಗ್ರಾಂ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೇಕಿಂಗ್ ಪ್ಯಾನ್‌ಗೆ ಒಂದು ಬಟರ್ ಪೇಪರ್ ಹಾಕಿ ಅದಕ್ಕೆ ಸ್ವಲ್ಪ ಬೆಣ್ಣೆ ಹೆಚ್ಚಿಕೊಳ್ಳಿ. ಬಳಿಕ ಅದನ್ನು 375 ಡಿಗ್ರಿ ಸೆಲ್ಸಿಯಲ್ಲಿ ಓವನ್ ಅಲ್ಲಿ ಬಿಸಿಮಾಡಿಕೊಳ್ಳಿ.
* ಈಗ ಒಂದು ದೊಡ್ಡ ಪಾತ್ರೆಯಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ಬಳಿಕ ಅದಕ್ಕೆ ರುಬ್ಬಿದ ಕುಂಬಳಕಾಯಿ ಮಿಶ್ರಣ, ಮೈದಾ ಅಥವಾ ಗೋಧಿ ಹಿಟ್ಟು, ಅಡಿಗೆ ಸೋಡಾ, ದಾಲ್ಚಿನ್ನಿ, ಉಪ್ಪು ಮತ್ತು ಸಕ್ಕರೆ ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಇದನ್ನು ಬೇಕಿಂಗ್ ಪ್ಯಾನ್ ಮೇಲೆ ಹರಡಿಕೊಳ್ಳಿ. ಬಳಿಕ ಇದನ್ನು ಓವನ್ ಅಲ್ಲಿ 15-20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ನಂತರ ಇದನ್ನು ಓವನ್‌ನಿಂದ ಆಚೆ ತೆಗೆದು ಸಕ್ಕರೆ ಪುಡಿಯನ್ನು ಸೇರಿಸಿಕೊಳ್ಳಿ. ಈಗ ಮಿಶ್ರಣವನ್ನು ಬಟರ್ ಪೇಪರ್‌ನಿಂದ ತೆಗೆದು ರೋಲ್ ಮಾಡಿಕೊಳ್ಳಿ.
* ಬಳಿಕ ಒಂದು ಚಿಕ್ಕ ಪಾತ್ರೆಯಲ್ಲಿ ಕ್ರೀಮ್ ಚೀಸ್, ವೆನಿಲ್ಲಾ ಸಾರ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿಕೊಂಡು ಚನ್ನಾಗಿ ಕಲಸಿಕೊಳ್ಳಿ.
* ನಂತರ ಈ ಮಿಶ್ರಣವನ್ನು ರೋಲ್ ಮಾಡಿದ ಕುಂಬಳಕಾಯಿ ಮಿಶ್ರಣವನ್ನು ಬಿಡಿಸಿ ಅದರ ಮಧ್ಯೆ ಹಾಕಿಕೊಂಡು ಮತ್ತೊಮ್ಮೆ ರೋಲ್ ಮಾಡಿ ಫ್ರಿಜ್ ಅಲ್ಲಿ ಇಡಿ. ಈಗ ಪಂಪ್ಕಿನ್ ರೋಲ್ ಸವಿಯಲು ಸಿದ್ಧ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ
Advertisement
Web Stories