ತಿರುವನಂತಪುರಂ: ಕೇರಳದಲ್ಲಿ 5 ಕೆ.ಜಿ ಇರುವ ಕುಂಬಳಕಾಯಿಯು(Pumpkin) 47,000 ರೂ.ಗೆ ಮಾರಾಟವಾಗುವ(Sold) ಮೂಲಕ ಸುದ್ದಿಯಾಗಿದೆ.
ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸಾರ್ವಜನಿಕ ಹರಾಜಿನಲ್ಲಿ(Bidding) ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಈ ವರ್ಷ ಚೆಮ್ಮನ್ನಾರ್‌ನಲ್ಲಿ ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿನಲ್ಲಿ ಇಟ್ಟಿದ್ದರು. ಈ ವೇಳೆ ಕುಂಬಳಕಾಯಿಯು ಭಾರೀ ಮೊತ್ತಕ್ಕೆ ಮಾರಾಟವಾಗಿ ಇತಿಹಾಸವನ್ನು ನಿರ್ಮಿಸಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯ ರಸ್ತೆ ಬದಿ ಮಣ್ಣು ಕುಸಿತ – ಘನ ವಾಹನ ಸಂಚಾರ ನಿಷೇಧ ಹೇರಲು ಆಗ್ರಹ
Advertisement
Advertisement
ಹರಾಜು ವೇಳೆ ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗೆ ಮಾರಾಟವಾಯಿತು. ಈ ವೇಳೆ ಬಿಡ್ಡಿಂಗ್‌ನಲ್ಲೇ ವಿಜೇತರು ಕುಂಬಳಕಾಯಿಯನ್ನು ಹಿಡಿದುಕೊಂಡು ಅಲ್ಲೇ ಪ್ರೇಕ್ಷಕರೆದರು ನರ್ತಿಸಿದರು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕರ್ನಾಟಕದ ಭಕ್ತರಿಂದ ರಾಮಮಂದಿರಕ್ಕೆ ಚಿನ್ನದ ಶಿಖರ: ಪೇಜಾವರ ಶ್ರೀ