ಯಾದಗಿರಿ: ಹೊರವಲಯದಲ್ಲಿರುವ ಭೀಮಾನದಿ ತೀರದ ರೈತರಿಗೆ ಈಗ ಕೇಬಲ್ ಕಂಟಕ ಶುರುವಾಗಿದೆ. ರೈತರು ಭೀಮಾನದಿ ತೀರದಿಂದ ತಮ್ಮ ಜಮೀನುಗಳಿಗೆ ನೀರು ಹರಿಸಲು, ಸಾವಿರಾರು ರೂಪಾಯಿ ಖರ್ಚು ಮಾಡಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡಿದ್ದಾರೆ.
Advertisement
ಈ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡುವ ಸಲುವಾಗಿ ನೂರಾರು ಮೀಟರ್ ದೂರದಿಂದ ಬೆಲೆ ಬಾಳುವ ಕೇಬಲ್‍ಗಳನ್ನು ಹಾಕಿ ಕನೆಕ್ಷನ್ ನೀಡಿದ್ದಾರೆ. ಇದನ್ನೆ ನಂಬಿಕೊಂಡು ಭತ್ತ ನಾಟಿಮಾಡಿದ್ದಾರೆ. ಈಗ ಭತ್ತಕ್ಕೆ ನೀರಿನ ಅವಶ್ಯಕತೆ ಬಹಳಷ್ಟಿದೆ. ಇಂತಹ ಹೊತ್ತಿನಲ್ಲಿ ಅಪರಿಚಿತ ಕೇಡಿಗಳು ಪಂಪ್‍ಸೆಟ್‍ಗಳ ಕೇಬಲ್ ಕಟ್ ಮಾಡಿ ಪರಾರಿ ಆಗುತ್ತಿದ್ದಾರೆ. ಇದರಿಂದಾಗಿ ಸಕಾಲಕ್ಕೆ ಬೆಳೆಗೆ ನೀರು ಸೀಗದೆ ನೂರಾರು ಎಕರೆ ಬೆಳೆ ಒಣಗುತ್ತಿದೆ. ಇದನ್ನೂ ಓದಿ: ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ
Advertisement
Advertisement
ವಾರಕ್ಕೆ ಎರಡು,ಮೂರು ಭಾರಿ ಇದೇ ತರಹ ಮಾಡುತ್ತಿರುವ ಕೀಡಿಗೇಡಿಗಳು ರೈತರಿಗೆ ವಿಪರೀತ ಕಾಟ ನೀಡುತ್ತಿದ್ದಾರೆ. ಕಟ್ ಮಾಡಿದ ಕೇಬಲ್ ಜೋಡಿಸಿ ರೈತರು ಮನೆಗೆ ತೆರಳುತ್ತಿದ್ದಂತೆ, ರಾತ್ರಿ ಪದೇ ಪದೇ ಕೇಬಲ್ ಕಟ್ ಆಗುತ್ತಿವೆ. ಇಲ್ಲಿಯವರೆಗೆ ಏನಿಲ್ಲವೆಂದರೂ ಸುಮಾರು ಐದಾರು ಬಾರಿ ಈ ರೀತಿ ಕೇಬಲ್ ಕಟ್ ಆಗುತ್ತಿವೆ. ಒಂದು ಸಲದ ಕೇಬಲ್ ಜೋಡಣೆಗೆ 15 ರಿಂದ 20 ಸಾವಿರ ಖರ್ಚು ಬರುತ್ತದೆ. ಬೆಳೆದ ಬೆಳೆಯ ಲಾಭವೆಲ್ಲಾ ಈ ಕೇಬಲ್ ಮರುಜೋಡಣೆಗೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ಇದರಿಂದಾಗಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ ರೈತರು.