ನವದೆಹಲಿ: ಪುಲ್ವಾಮದಲ್ಲಿ ಉಗ್ರರ ದಾಳಿ ವಿರುದ್ಧ ಭಾರತೀಯರ ಆಕ್ರೋಶ ಹೆಚ್ಚಾಗುತ್ತಿದ್ದು, ದೇಶದ್ಯಾಂತ ಪ್ರತಿಭಟನೆ, ಧರಣಿಗಳು ನಡೆಯುತ್ತಿದೆ. ಇದೇ ವೇಳೆ ಪಾಕಿಸ್ತಾನದ ವಿರುದ್ಧದ ಸರ್ಜಿಕಲ್ ಸ್ಟ್ರೈಕನ್ನು ಸಿನಿಮಾ ಮಾಡಿದ ಉರಿ ಚಿತ್ರತಂಡ ಸೈನಿಕರ ಕಲ್ಯಾಣ ನಿಧಿ (ಉರಿ ದಾಳಿಯಲ್ಲಿ ಹುತಾತ್ಮರಾದ ಕುಟುಂಬಸ್ಥರಿಗೆ) 1 ಕೋಟಿ ರೂ. ನೆರವು ನೀಡುವುದಾಗಿ ಚಿತ್ರತಂಡ ತಿಳಿಸಿದೆ.
ಉರಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಆರ್ ಎಸ್‍ವಿಪಿ ಪ್ರೊಡಕ್ಷನ್ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಸೈನಿಕರ ಕಲ್ಯಾಣ ನಿಧಿಗೆ ಹಣ ವರ್ಗಾವಣೆ ಮಾಡುವುದಾಗಿ ಮಾಹಿತಿ ನೀಡಿದೆ. ದೇಶದ ಯೋಧರ ಮೇಲೆ ನಡೆದ ದಾಳಿ ಹೃದಯವನ್ನು ಛಿದ್ರಗೊಳಿಸದಂತೆ ಮಾಡಿದ್ದು, ಸ್ವತಃ ಸಹೋದರನ್ನು ಕಳೆದುಕೊಂಡ ಭಾವನೆ ನನ್ನಲ್ಲಿ ಮೂಡಿದೆ ಎಂದು ಸಂಸ್ಥೆ ಮುಖ್ಯಸ್ಥ ಆದಿತ್ಯ ಧಾರ್ ತಿಳಿಸಿದ್ದಾರೆ.
Advertisement
Advertisement
ಸರ್ಜಿಕಲ್ ಸ್ಟ್ರೈಕ್ ನೈಜ ಕಥೆಯಾಧಾರಿತ ಚಿತ್ರವಾಗಿ ರೂಪುಗೊಂಡ ‘ಉರಿ: ದ ಸರ್ಜಿಕಲ್ ಸ್ಟ್ರೆಕ್’ ಚಿತ್ರ ನೋಡಲು ಹೆಚ್ಚಿನ ಜನ ಮುಂದಾಗುತ್ತಿದ್ದಾರೆ. ತೆರೆ ಕಂಡ ದಿನದಿಂದಲೂ ಯಶಸ್ವಿ ಪ್ರದರ್ಶನ ಕಾಣ್ತಿರುವ ಚಿತ್ರಕ್ಕೆ ಪುಲ್ವಾಮ ದಾಳಿ ಬಳಿಕ ಮತ್ತಷ್ಟು ಪ್ರದರ್ಶನಗಳನ್ನು ಹೆಚ್ಚಿಗೆ ಕಾಣಿಸುತ್ತಿದೆ. ಕಳೆದ ಬಾರಿ ಉಗ್ರರ ಸದೆ ಬಡೆಯಲು ನಡೆದ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಮತ್ತೊಮ್ಮೆ ದಾಳಿ ಮಾಡಬೇಕೆಂಬ ಕೂಗು ಕೂಡ ಯುವಕರಿಂದ ಕೇಳಿ ಬರುತ್ತಿದೆ.
Advertisement
RSVP &Team URI committed Rs. 1 Cr to families of URI attack /Army Welfare Fund -will ensure part goes to victims #Pulwama ..but urge more to respond -in small lots – and also our Indian “Unicorns” to donate graciously @Paytm @Olacabs @Flipkart @amazon @narendramodi @anandmahindra
— Ronnie Screwvala (@RonnieScrewvala) February 16, 2019
Advertisement
200 ಕೋಟಿ ದಾಖಲೆಯ ಪಟ್ಟಿಯಲ್ಲಿ ಉರಿ ಚಿತ್ರ ಸೇರಿಕೊಂಡಿದ್ದು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ 300 ಕೋಟಿ ರೂ. ದಾಟಬಹುದು ಎಂಬ ನಿರೀಕ್ಷಿಸಲಾಗಿದೆ. ಚಿತ್ರದಲ್ಲಿ ವಿಕ್ಕಿ ಕೌಶಾಲ, ಯಾಮಿ ಗೌತಮ್, ಕೃತಿ ಕುಲ್ಹಾರಿ ಮತ್ತು ಪರೇಶ್ ರಾವಲ್ ಮತ್ತಿತರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಬಾಲಿವುಡ್ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ಜಾವೇದ್ ಅಕ್ತರ್, ಶಬಾನಾ ಅಜ್ಮಿ, ಆಮಿರ್ ಖಾನ್, ಸಲ್ಮಾನ್ ಖಾನ್, ಶಾರೂಖ್ ಖಾನ್, ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ, ಅಕ್ಷಯ್ ಕಪೂರ್ ಮತ್ತಿತರರು ಹುತಾತ್ಮ ಯೋಧರ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದಾರೆ.
#UriTheSurgicalStrike refuses to slow down… [Week 6] Fri 1.19 cr. Total: ₹ 220.32 cr. India biz.#UriTheSurgicalStrike biz at a glance…
Week 1: ₹ 71.26 cr
Week 2: ₹ 62.77 cr
Week 3: ₹ 37.02 cr
Week 4: ₹ 29.34 cr
Week 5: ₹ 18.74 cr
860 screens in Week 6.
— taran adarsh (@taran_adarsh) February 16, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv