ನವದೆಹಲಿ: ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರ ಹತ್ಯೆ ಪ್ರಕರಣದಲ್ಲಿ ಪಾಕ್ ಕೈವಾಡ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಪುಲ್ವಾಮಾ ದಾಳಿಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕ್ ಸಂಸದ ಮುಷಾಹಿದ್ ಹುಸೇನ್ ಸಯದ್ ಹೊಗಳಿದ್ದಾರೆ.
ಇಸ್ಲಾಮಾಬಾದ್ ರಣತಂತ್ರ ಅಧ್ಯಯನ ಸಂಸ್ಥೆ(ಐಎಸ್‍ಎಸ್‍ಐ) ಆಯೋಜಿಸಿದ್ದ ಪಾಕಿಸ್ತಾನ-ಚೀನಾ ಸಂಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ ಸದಸ್ಯರಾದ ಹುಸೇನ್, 1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದ 20 ವರ್ಷದ ಬಳಿಕ ಪುಲ್ವಾಮಾ ದಾಳಿಯು ಪಾಕಿಸ್ತಾನದ ಅತ್ಯುತ್ತಮ ಸಮಯ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
Advertisement
ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡ ಕಾರಣ ಅಂತರಾಷ್ಟ್ರೀಯ ಮಟ್ಟದಲ್ಲಿ ನಮಗೆ ಬೆಂಬಲ ಸಿಕ್ಕಿತು. ಈ ಮೂಲಕ ನಮಗೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ ಎಂದು ಕೊಚ್ಚಿಕೊಂಡಿದ್ದಾರೆ.
Advertisement
ಪುಲ್ವಾಮಾ ದಾಳಿ ನಂತರ ನಡೆದ ಭಾರತದ ವಾಯುದಾಳಿಯ ಬಳಿಕ ನಡೆದ ವಿದ್ಯಮಾನದಲ್ಲಿ ಇಡೀ ದೇಶ ಒಂದಾಗಿತ್ತು. ವಿರೋಧ ಪಕ್ಷಗಳು, ಮಾಧ್ಯಮಗಳು ಎಲ್ಲ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದವು ಎಂದು ಹೇಳಿದ್ದಾರೆ.
Advertisement
#BigExpose "Pulwama (attack) was Pakistan's finest hour after Nuclear-Test in Last 20 Yrs.''- Pakistani Think Tank Senator @Mushahid exposing Pakistan's involvement in Pulwama and rejoicing the moment. He is Chairman PCI and Senate Foreign Affairs Committee, at @ISSIslamabad. pic.twitter.com/wYOxXDaDQl
— Jammu-Kashmir Now (@JammuKashmirNow) March 14, 2019
Advertisement