ಇಸ್ಲಾಮಾಬಾದ್: ಪಾಕಿಸ್ತಾನದ (Pakistan) 90 ಮಂದಿ ಸೈನಿಕರನ್ನು ನಾವು ಹತ್ಯೆ ಮಾಡಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ (Pulwama) ಭಾರತದ ಸೈನಿಕರನ್ನು ಉಗ್ರರು ಹೇಗೆ ಗುರಿ ಮಾಡಿ ಕೃತ್ಯ ಎಸಗಿದ್ದರೋ ಅದೇ ರೀತಿಯಾಗಿ ಇಂದು (ಮಾ.16) ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40 ರಲ್ಲಿ ಸೈನಿಕರಿದ್ದ ಬಸ್ಸಿಗೆ ಸ್ಪೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 6 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?
🚨
Another major insurgent suicide bomber ambush reportedly targeted a military convoy in Noshki, Balochistan, this morning. The convoy consisted of eight hired civilian HMT (Heavy Mechanical Transport) vehicles carrying troops for operational deployment in the aftermath of the… pic.twitter.com/BI1kvk7dYh
— Adil Raja (@soldierspeaks) March 16, 2025
ಡಿಕ್ಕಿಯಾದ ಬೆನ್ನಲ್ಲೇ ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಬಸ್ಸಿನ ಕಿಟಕಿ ಗಾಜುಗಳು ಒಡೆದು ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಛಿದ್ರಗೊಂಡಿರುವ ಬಸ್ಸಿನ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?
ಬಲೂಚ್ ಲಿಬರೇಶನ್ ಆರ್ಮಿ ಈ ಘಟನೆಯಲ್ಲಿ 90 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದರೆ ಪಾಕ್ ಸೇನೆ 12 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಶನಿವಾರ ಬಿಎಲ್‌ಎ ಪಾಕಿಸ್ತಾನಿ ಸೇನೆಯ ಬೆಂಗಾವಲು ಪಡೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು.
ಪಾಕಿಸ್ತಾನದ ಅತಿದೊಡ್ಡ ಭೂಪ್ರದೇಶವನ್ನು ಹೊಂದಿರುವ ಬಲೂಚಿಸ್ತಾನ ಪ್ರಾಂತ್ಯ ಕಡಿಮೆ ಜನ ಸಂಖ್ಯೆ ಹೊಂದಿದೆ. ಬಲೂಚಿಸ್ತಾನ ಖನಿಜ ಸಂಪದ್ಭರಿತ ಪ್ರದೇಶವಾಗಿದ್ದು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಈ ಕಾರಣಕ್ಕೆ ಪ್ರತ್ಯೇಕತಾವಾದಿ ಹೋರಾಟ ನಡೆಯುತ್ತಿದೆ. ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಬಲೂಚ್ ಹೋರಾಟಗಾರರು ಈಗ ಯುದ್ಧಕ್ಕೆ ಧುಮುಕಿದ್ದಾರೆ.