ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿದ ಪ್ರಕರಣ ಸಂಬಂಧ ಜಾನ್ ಬೋಲ್ಟನ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರ ಜೊತೆಗೆ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಉಗ್ರರನ್ನು ಸೆದೆಬಡಿಯಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಜಾನ್ ಬೋಲ್ಟನ್ ತಿಳಿಸಿದ್ದಾರೆ.
Advertisement
National Security Advisor Ajit Doval had a telephonic conversation with his US counterpart John Bolton on the evening of 15 Feb. The call was initiated by the US side to express condolences & outrage over #PulwamaAttack attack by Pakistan-based terrorist group JeM. (file pic) pic.twitter.com/MlB6TU0ULb
— ANI (@ANI) February 16, 2019
Advertisement
ಜೈಶ್-ಇ-ಮೊಹಮ್ಮದ್ ಹಾಗೂ ಬೇರೆ ಬೇರೆ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನವು ಸುರಕ್ಷಿತ ಪ್ರದೇಶವನ್ನು ಒದಗಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಪುಲ್ವಾಮಾ ದಾಳಿಯ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲು ಎಲ್ಲ ರೀತಿಯ ಸಹಕಾರವನ್ನು ಒಂದಗಿಸುತ್ತೇವೆ ಎಂದು ಜಾನ್ ಬೋಲ್ಟನ್ ಹೇಳಿದ್ದಾರೆ.
Advertisement
ಈ ಮೂಲಕ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ವಿರುದ್ಧ ಅಮೆರಿಕಾ ಹೊರಹಾಕಿದ್ದು, ಪುಲ್ವಾಮಾ ದಾಳಿಯ ಪ್ರತಿಕಾರಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದೆ.
Advertisement
ಭಾರತದ ಸಂರಕ್ಷಣೆ ನಾವು ಬೆಂಬಲ ನೀಡುತ್ತೇವೆ ಎಂದು ಅಜಿತ್ ದೊವಲ್ ಅವರಿಗೆ ತಿಳಿಸಿದ್ದೇನೆ. ಇಂದು ಬೆಳಗ್ಗೆ ಸೇರಿದಂತೆ ಎರಡು ಬಾರಿ ಅವರೊಂದಿಗೆ ಮಾತನಾಡಿದ್ದೇನೆ. ಉಗ್ರರ ದಾಳಿಯನ್ನು ಅಮೆರಿಕ ಖಂಡಿಸಿದೆ ಎಂದು ಬೋಲ್ಟ್ ಹೇಳಿದ್ದಾರೆ.
ದಾಳಿಯ ಸಂಬಂಧ ಪಾಕಿಸ್ತಾನದ ಜೊತೆಗೆ ಚರ್ಚೆ ಮಾಡುತ್ತೇವೆ. ಈ ದಾಳಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ನಮ್ಮ ನಿರ್ಧಾರ ಸ್ಪಷ್ಟವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಂಸ್ಥೆ ತಿಳಿಸಿದೆ.
ಭಯೋತ್ಪಾದನೆ ಎದರಿಸಲು ನಾವು ಭಾರತದ ಪರವಾಗಿದ್ದೇವೆ. ಪಾಕಿಸ್ತಾನ ಯಾವುದೇ ಕಾರಣಕ್ಕೂ ಉಗ್ರ ಸಂಘಟನೆಗಳಿಗೆ ಸುರಕ್ಷಿತ ನೆಲೆಗಳನ್ನು ಒದಗಿಸಿಕೊಡಬಾರದು ಎಂದು ಅಮೆರಿಕ ಕಾರ್ಯದರ್ಶಿ ಪೊಂಪೆಯೊ ಟ್ವೀಟ್ ಮಾಡಿದ್ದಾರೆ.
The U.S. condemns yesterday’s horrific terror attack on Indian security forces. My thoughts and prayers are with the victims and their families. We stand with #India as it confronts terrorism. Pakistan must not provide safe haven for terrorists to threaten international security.
— Secretary Pompeo (@SecPompeo) February 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv