ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಆಗಿರುವ ಮ್ಯಾಚ್ ಫಿಕ್ಸಿಂಗ್ ಎನ್ನುವ ಶಾಕಿಂಗ್ ಹೇಳಿಕೆಯನ್ನು ರಾಜ್ಯಸಭಾ ಸಂಸದ, ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪುಲ್ವಾಮಾ ದಾಳಿ ಆಕ್ಸಿಡೆಂಟ್ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು. ಈಗ ಬಿ.ಕೆ ಹರಿಪ್ರಸಾದ್ ಅವರು ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತ, ಮೋದಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಕೈಜೋಡಿಸಿದ್ದಾರೆ. ಪುಲ್ವಾಮ ದಾಳಿ ಮ್ಯಾಚ್ ಫಿಕ್ಸಿಂಗ್. ಬಿಜೆಪಿ ಹಾಗೂ ಮೋದಿಗೆ ಅವರಿಗೆ ಬೀಫ್ ಸಾಗಾಟ ಮಾಡಿದರೆ ಗೊತ್ತಾಗುತ್ತೆ ಆದರೇ ಆರ್ ಡಿಎಕ್ಸ್ ತಂದು ಸ್ಫೋಟ ಮಾಡುವಾಗ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಗೆಲ್ಲಲು ಪ್ರಧಾನಿ ಪ್ಲಾನ್ ಮಾಡುತ್ತಿದ್ದಾರೆ. ಆದಕ್ಕಾಗಿ ಒಮ್ಮೆ ಭಾರತ ಪಾಕ್ ಮೇಲೆ ದಾಳಿ ಮಾಡುತ್ತದೆ. ಮತ್ತೊಮ್ಮೆ ಪಾಕ್ ಭಾರತದ ಮೇಲೆ ದಾಳಿ ಮಾಡುತ್ತದೆ. ಅದೆಲ್ಲ ಮ್ಯಾಚ್ ಫಿಕ್ಸಿಂಗ್. ಚುನಾವಣೆ ಗೆಲ್ಲಲು ಮೋದಿ ಈ ತಂತ್ರಗಳನ್ನು ಮಾಡುತ್ತಿದ್ದಾರೆ. ಪಾಕಿಸ್ತಾನದಿಂದ ಗೋಮಾಂಸ ಭಾರತಕ್ಕೆ ತಂದರೆ ಮೋದಿ ಅವರಿಗೆ ಗೊತ್ತಾಗುತ್ತದೆ. ಆದ್ರೆ ಆರ್ ಡಿಎಕ್ಸ್ ತಂದ್ರೆ ಯಾಕೆ ಗೊತ್ತಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
https://www.youtube.com/watch?v=wtAlLNNnQKI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv