ನವದೆಹಲಿ: ಇಂದು ಇಡೀ ವಿಶ್ವಕ್ಕೆ ಪ್ರೇಮಿಗಳ ದಿನ, ಆದರೆ ಭಾರತಕ್ಕೆ ಮಾತ್ರ ಕರಾಳ ದಿನ. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಬರೋಬ್ಬರಿ 40 ಮಂದಿ ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದರು ಇಂದಿಗೆ ಆ ದುರ್ಘಟನೆಗೆ ಒಂದು ವರ್ಷ.
ಹೌದು. ಇಡೀ ವಿಶ್ವ ಇಂದು ಸಂಭ್ರಮದಿಂದ ಪ್ರೇಮಿಗಳ ದಿನ ಆಚರಿಸುತ್ತಿದೆ. ಆದರೆ ಭಾರತಕ್ಕೆ ಕರಾಳ ದಿನವಾಗಿ ಬದಲಾಗಿದೆ. ದೇಶ ಕಾಯುವ ಕಾಯಕದಲ್ಲಿದ್ದ 40 ಮಂದಿ ಸಿಆರ್‌ಪಿಎಫ್ ಯೋಧರಿದ್ದ ಬಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಇಂದಿಗೆ ಆ ದುರ್ಘಟನೆ ಸಂಭವಿಸಿ ಒಂದು ವರ್ಷವಾಗಿದೆ. ಇದನ್ನೂ ಓದಿ: ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ
Advertisement
Advertisement
ಕಳೆದ ವರ್ಷ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಆತ್ಮಾಹುತಿ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್ ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ಬಸ್ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.
Advertisement
ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ ಕಾರಿನಲ್ಲಿ 300 ಕೆಜಿ ಗೂ ಹೆಚ್ಚು ಸ್ಫೋಟಕಗಳನ್ನು ತುಂಬಿಕೊಂಡು ಬಸ್ ಮೇಲೆ ದಾಳಿ ಮಾಡಿದ್ದ ಎಂದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿತ್ತು. ಇದನ್ನೂ ಓದಿ: ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ನೂರಕ್ಕೂ ಅಧಿಕ ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್
Advertisement
ಘಟನೆಯ ಬಳಿಕ ಪ್ರತಿಕಾರದ ದೊಡ್ಡ ಕೂಗೇ ಕೇಳಿ ಬಂದಿತು. ಪಾಕ್ ಆಕ್ರಮಿತ ಕಾಶ್ಮೀರ ದಾಟಿ ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡುವ ಮೂಲಕ ಭಾರತೀಯ ಸೇನೆ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. 300ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದು ನಮ್ಮ ಯೋಧರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲಾಗಿದೆ. ಏನೆ ಆದರೂ ಉಗ್ರರ ಸಂಚಿಗೆ 40 ಮಂದಿ ಯೋಧರು ಹುತ್ಮಾತ್ಮರಾಗಿದ್ದು ಭಾರತ ಮಾತೆಗೆ ತುಂಬಲಾರದ ನಷ್ಟ. ಇಂದು ಅವರಿಗೆ ಒಂದು ಸೆಲ್ಯೂಟ್ ಮಾಡುತ್ತಾ ಅವರಿಗಾಗಿ ಈ ದಿನವನ್ನು ಸಮರ್ಪಿಸೋಣ.
"तुम्हारे शौर्य के गीत, कर्कश शोर में खोये नहीं।
गर्व इतना था कि हम देर तक रोये नहीं।"
WE DID NOT FORGET, WE DID NOT FORGIVE: We salute our brothers who sacrificed their lives in the service of the nation in Pulwama. Indebted, we stand with the families of our valiant martyrs. pic.twitter.com/GfzzLuTl7R
— ????????CRPF???????? (@crpfindia) February 13, 2020