ಮುಂಬೈ: ಭಾರತೀಯ ಸ್ಪೋರ್ಟ್ಸ್ ಬೈಕ್ ಎಂದೇ ಹೆಸರು ಪಡೆದಿರುವ ಬಜಾಜ್ ಕಂಪನಿಯ ಪಲ್ಸರ್ 150 ಸಿಸಿ ಬೈಕ್ ನೂತನ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಕಳೆದ ಎರಡು ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಬಜಾಜ್ ಸಂಸ್ಥೆಯು, ತನ್ನ ಪಲ್ಸರ್ ಶ್ರೇಣಿಯ ಬೈಕುಗಳ ಮೂಲಕ ಯುವ ಸಮುದಾಯವನ್ನು ಸೆಳೆಯುವಲ್ಲಿ ಸಫಲವಾಗಿತ್ತು. ಇದೀಗ ತನ್ನ ಪಲ್ಸರ್ 150 ಬೈಕಿನಲ್ಲಿ ಟ್ವಿನ್ ಡಿಸ್ಕ್ ಹಾಗೂ ನೂತನ ವಿನ್ಯಾಸದ ಹೊಸ ಬೈಕನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
Advertisement
Advertisement
ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು ಬ್ಲಾಕ್ ಬ್ಲೂ, ಬ್ಲಾಕ್ ರೆಡ್ ಮತ್ತು ಬ್ಲಾಕ್ ಕ್ರೋಮ್ ಬಣ್ಣಗಳಲ್ಲಿ ಲಭ್ಯವಿದೆ. ಹೊಸ ಪೇಯಿಂಟ್ ಸ್ಕೀಮ್ ಮತ್ತು ಗ್ರಾಫಿಕ್ಸ್, ಸ್ಪ್ಲಿಟ್ ಸೀಟ್ಸ್ ಹಾಗು ಸ್ಪ್ಲಿಟ್ ಗ್ರ್ಯಾಬ್ ರೈಲ್‍ಗಳನ್ನು ಹೊಂದಿದೆ. ತನ್ನ ಹಳೆಯ ಮಾದರಿಯ ಪಲ್ಸರ್ 150 ಬೈಕ್‍ಗಳಿಗಿಂತ ನೂತನವಾಗಿ ಬಿಡುಗಡೆಯಾಗಿರುವ ಪಲ್ಸರ್ 150 ಬೈಕ್‍ಗಳು ಉದ್ದವಾದ ವೀಲ್‍ಬೇಸ್ ಅನ್ನು ಹೊಂದಿವೆ. ಇದರ ಜೊತೆ ಬೈಕಿನಲ್ಲಿದ್ದ ನಾಯ್ಸ್ ವೈಬ್ರೇಶನ್ ಹಾರ್ಶ್‍ನೆಸ್ ಅನ್ನು ಸಹ ಸುಧಾರಿಸಲಾಗಿದೆ.
Advertisement
ನೂತನ ಪಲ್ಸರ್ 150 ಸಿಸಿ ಟ್ವಿನ್ ಬೈಕಿನ ಬೆಲೆ ಪುಣೆಯ ಆನ್ ರೋಡ್ ದರ 96,300 ರೂಪಾಯಿ ಆಗಿದ್ದು, ತನ್ನ ಹಳೆಯ 150ಸಿಸಿ ಟ್ವಿನ್ ಮಾದರಿಗಿಂತ 1,500 ಜಾಸ್ತಿ ಇದೆ. 2019ರ ವೇಳೆಗೆ ಬೈಕುಗಳ ಗ್ರಾಹಕರ ಕೈ ಸೇರಲಿವೆ ಎಂದು ಕಂಪನಿ ತಿಳಿಸಿದೆ.
Advertisement
ನೂತನ ಪಲ್ಸರ್ 150ಸಿಸಿ ಬೈಕಿನ ಗುಣವೈಶಿಷ್ಟ್ಯಗಳು:
ಎಂಜಿನ್ ಮತ್ತು ಸಸ್ಪೆನ್ಷನ್:
149.5 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ 14 ಬಿಎಚ್‍ಪಿ ಜೊತೆ 13.4 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಜೊತೆಗೆ ಆ್ಯಂಟಿ ಫ್ರಿಕ್ಷನ್ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ನೈಟ್ರಾಕ್ಸ್ ಸಸ್ಪೆನ್ಷನ್ ನೀಡಿದೆ.
ಬ್ರೇಕ್ ಹಾಗೂ ಟೈರ್ ಗಳು:
ಮುಂದುಗಡೆ 90/90 ಅಳತೆಯ 17 ಇಂಚಿನ ಟೈರ್ ಹೊಂದಿದ್ದು, 260 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಹಿಂದುಗಡೆ 120/80 ಅಳತೆಯ 17 ಇಂಚಿನ ಟೈರ್ ಹೊಂದಿದ್ದು, 230 ಎಂಎಂ ಡಿಸ್ಕ್ ಬ್ರೇಕ್ ಸಿಸ್ಟಮ್ ಹೊಂದಿದೆ.
ಸುತ್ತಳತೆ ಹಾಗೂ ತೂಕ:
2035ಎಂಎಂ ಉದ್ದ, 765ಎಂಎಂ ಅಗಲ, 1115ಎಂಎಂ ಎತ್ತರ ಹೊಂದಿದ್ದು, ವೀಲ್‍ಬೇಸ್ 1345ಎಂಎಂ ಇದೆ. ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ ಆಗಿದೆ. ಇಂಧನ ಸಾಮಥ್ರ್ಯ 15 ಲೀಟರ್ ಇದ್ದು, ಒಟ್ಟು ತೂಕ 144 ಕೆಜಿ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv