ಕನ್ನಡದ ನಟಿ ಕೃತಿ ಕರಬಂಧ (Kriti Kharbanda) ಅವರು ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 13ಕ್ಕೆ ದಾಂಪತ್ಯ ಜೀವನಕ್ಕೆ ಕೃತಿ ಕಾಲಿಡಲಿದ್ದಾರೆ. ಮದುವೆ (Wedding) ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಟಿ ಕೃತಿ ಅವರು ಗುಟ್ಟಾಗಿ ಎಂಗೇಜ್‌ಮೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮದುವೆ ಬಗ್ಗೆ ನಟಿ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ. ಕನ್ನಡ ಸಿನಿಮಾಗಳ ನಂತರ ಕೃತಿ ಬಾಲಿವುಡ್‌ಗೆ ಕಾಲಿಟ್ಟ ಮೇಲೆ ಪುಲ್ಕಿತ್ ಪರಿಚಯವಾಯ್ತು. ಆ ಪರಿಚಯ ಪ್ರೀತಿಗೆ ತಿರುಗಿ ಪುಲ್ಕಿತ್ ಜೊತೆ 5 ವರ್ಷಗಳ ಕಾಲ ಕೃತಿ ಡೇಟಿಂಗ್ ಮಾಡಿದ್ದಾರೆ. ಬಳಿಕ ಇದೀಗ ಹೊಸ ಬಾಳಿಗೆ ಬೆಂಗಳೂರಿನ ಬೆಡಗಿ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಹೃದಯ ಸ್ತಂಭನದಿಂದ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ
ಇತ್ತೀಚೆಗೆ ಗೂಗ್ಲಿ ಬೆಡಗಿ ಕೃತಿ ಅವರು ಪುಲ್ಕಿಟ್ ಸಾಮ್ರಾಟ್ ಜೊತೆ ಇರುವ ಫೋಟೋ ಹಂಚಿಕೊಂಡು, ‘ಕೈಜೋಡಿಸಿ ಒಟ್ಟಾಗಿ ಸಾಗೋಣ’ ಎಂದು ಅಡಿಬರಹ ನೀಡಿದ್ದರು. ಅವರು ಬೇಕಂತಲೇ ‘ಮಾರ್ಚ್’ ಎಂಬ ಪದವನ್ನು ಬಳಸಿದ್ದರು. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂದು ಎನ್ನಲಾಗುತ್ತಿದೆ. ಆದರೆ ಮದುವೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಸಿಗುವುದು ಬಾಕಿ ಇದೆ.
ಯಶ್‌ಗೆ (Yash) ನಾಯಕಿಯಾಗಿ ‘ಗೂಗ್ಲಿ’ ಸಿನಿಮಾ ಮೂಲಕ ಕೃತಿ ಕರಬಂಧ (Kriti Kharbanda) ಸೌಂಡ್ ಮಾಡಿದ್ದರು. ದಳಪತಿ, ಪ್ರೇಮ್ ಅಡ್ಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.