ನವದೆಹಲಿ: ಕನ್ನಡದ (Kannada) ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ಪ್ರಧಾನಿ ಮೋದಿ (Narendra Modi) ಫಿದಾ ಆಗಿದ್ದಾರೆ. ಖ್ಯಾತ ಗಾಯಕಿಯೊಬ್ಬರು ಹಾಡಿದ ಈ ಹಾಡಿನ ತುಣುಕನ್ನು ಮೋದಿ ಎಕ್ಸ್‌ನಲ್ಲಿ (X) ಹಂಚಿಕೊಂಡಿದ್ದಾರೆ.
ಶಿವಶ್ರೀ ಸ್ಕಂದ ಪ್ರಸಾದ್ (Sivasri Skandaprasad) ಹಾಡಿರುವ ವಿಡಿಯೋವನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಶೇರ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಶಕ್ತಿಯನ್ನು ಬಿಂಬಿಸುವ, ಎತ್ತಿಹಿಡಿಯುವ ಅದ್ಭುತ ಹಾಡಿದು. ಇಂತಹ ಪ್ರಯತ್ನಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುತ್ತದೆ ಎಂದು ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೇಳಿದ ಹಾಗೆ ಕೇಳಿದ್ರೆ ನಾವು ಆಡಳಿತ ಮಾಡೋಕಾಗಲ್ಲ: ಪರಮೇಶ್ವರ್
ಟ್ವೀಟ್‌ನಲ್ಲಿ ಏನಿದೆ?
ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆಗೆ ಭಾರತ ಸಹಿ – 5 ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆಗೆ ಒಪ್ಪಂದ
ಇದೇ ಜ.22 ರಂದು ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಲಿದೆ. ಈ ಐತಿಹಾಸಿಕ ದಿನಕ್ಕಾಗಿ ಸಮಸ್ತ ರಾಮಭಕ್ತರು ಕಾದು ಕುಳಿತಿದ್ದಾರೆ. ದೇಶದೆಲ್ಲೆಡೆ ರಾಮಭಕ್ತಿ, ರಾಮಭಜನೆ, ಶ್ರೀರಾಮ ಸ್ಮರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನ ಸ್ಮರಿಸುವ ಕನ್ನಡದ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಎಂಎಸ್ ಧೋನಿಗೆ ಆಹ್ವಾನ