ಮಂಗಳೂರು: ಕರ್ನಾಟಕದ (Karnataka) ಯುವ ಉದ್ಯಮಿಗಳು ಪುದುಚೇರಿಗೆ (Puducherry) ಬಂದು ಪ್ರವಾಸೋದ್ಯಮ, ಐಟಿ, ಎಲೆಕ್ಟ್ರಿಕ್ ವೆಹಿಕಲ್ ಮತ್ತಿತರ ಉದ್ಯಮವನ್ನು ಸ್ಥಾಪಿಸುವುದಾದರೆ ಸರ್ಕಾರ ಎಲ್ಲಾ ರೀತಿಯ ನೆರವು ಕಲ್ಪಿಸಲಾಗುವುದು ಎಂದು ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ (A. Namassivayam) ಹೇಳಿದರು.
ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕಟೀಲೇಶ್ವರಿ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು, ಕಲ್ಲಿದ್ದಲು ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು.
Advertisement
Advertisement
ಈ ವೇಳೆ ಮಾತನಾಡಿದ ಅವರು, ಪುದುಚೇರಿ ಸಣ್ಣ ರಾಜ್ಯವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಪುದುಚೇರಿ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಉಗ್ರ ಚಟುವಟಿಕೆಯ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಕ್ಕೆ ಒತ್ತು, ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಗಮನ ನೀಡಿದ್ದೇವೆ. ಅವರ ನಾಯಕತ್ವದಲ್ಲಿ ದೇಶವು ಉತ್ತಮ ಅಭಿವೃದ್ಧಿ ಹೊಂದುತ್ತಿದೆ ಎಂದು ನುಡಿದರು. ಇದನ್ನೂ ಓದಿ: ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ
ಕಟೀಲೇಶ್ವರಿ ಕೋಲ್ ಕಾರ್ಪೋರೇಷನ್ ಪಾಲುದಾರರಾದ ನಾಗರಾಜ್ ಅಮೀನ್, ಮಂಜುನಾಥ್ ನೋಟಗಾರ್, ಬಾಲಮುರಳಿ, ಗಣೇಶ್, ಅಶ್ರಫ್ ಸಿಬ್ಬಂದಿಯಾದ ಶಿವು, ಮುಹಮ್ಮದ್ ರಿಲ್ವಾನ್, ಶಿವಕುಮಾರ್ ನೋಟಗಾರ್, ಶ್ರುತಿ, ಶಬೀರ್, ದೇವು ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಕ್ಕೆ ಡಿಸೆಂಬರ್ ಡೆಡ್‌ಲೈನ್: ಪ್ರಭು ಚೌಹಾಣ್