ದಾವಣಗೆರೆ: ಪಿಯುಸಿ ವಿದ್ಯಾರ್ಥಿನಿಯೊಬ್ಬಳು (PUC Student) ಹಾಸ್ಟೆಲಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.
ವರ್ಷಿತಾ (18) ಮೃತ ವಿದ್ಯಾರ್ಥಿನಿ. ವರ್ಷಿತಾ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್
ಹರಿಹರ ಪಟ್ಟಣದ ಅಂಬೇಡ್ಕರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವರ್ಷಿತಾ ಮೂಲತಃ ಮಾಯಕೊಂಡ ಹೋಬಳಿಯ ಬಸಾಪುರ ಗ್ರಾಮದ ಯುವತಿ. ಪೋಷಕರು ಬಡತನದಲ್ಲಿ ಇದ್ದು ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಹಾಗಾಗಿ ವರ್ಷಿತಾ ಹಾಸ್ಟೆಲಿನಲ್ಲಿ ಇದ್ದುಕೊಂಡೇ ಓದುತ್ತಿದ್ದಳು. ಸದ್ಯ ಹರಿಹರದ ಪಟ್ಟಣದ ಅಂಬೇಡ್ಕರ್ ಕಾಲೇಜಿನಲ್ಲಿ ಪಿಯುಸಿ ಓದುತ್ತಾ, ಸ್ನೇಹಿತೆಯರೊಂದಿಗೆ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲಿನಲ್ಲಿ (Government Hostel) ಉಳಿದುಕೊಂಡಿದ್ದಳು. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಮಂಗಳವಾರ ಬೆಳಗ್ಗೆ ಸ್ನೇಹಿತೆಯರ ಜೊತೆ ಪರೀಕ್ಷೆಗೆಂದು ಓದಿಕೊಳ್ಳುತ್ತಿದ್ದಳು. ನಂತರ ಅಂಗಡಿಯಿಂದ ಅಗತ್ಯ ಸಾಮಗ್ರಿಗಳನ್ನ ಖರೀದಿಸಿ ಮತ್ತೆ ಹಾಸ್ಟೆಲ್‌ಗೆ ವಾಪಸ್ಸಾಗಿದ್ದಳು. ನಂತರ ತನಗೆ ಪಾನಿಪುರಿ ತರುವಂತೆ ಸ್ನೇಹಿತೆಯರಿಗೆ ಹೇಳಿ ಹಾಸ್ಟೆಲ್‌ನ ರೂಮ್‌ಗೆ ಹೋಗಿದ್ದಾಳೆ. ಪಾನಿಪುರಿ ತಂದು ಸ್ನೇಹಿತೆಯರು ಆಕೆಯನ್ನ ಕೂಗಿದ್ದಾರೆ. ರೂಮ್ ಬಾಗಿಲು ಬಡಿದಿದ್ದಾರೆ. ಎಷ್ಟು ಕೂಗಿದರೂ ಬಾಗಿಲು ತೆರೆಯದೇ ಇದ್ದಾಗ ಕಿಟಿಕಿಯಲ್ಲಿ ನೋಡಿದ್ದಾರೆ. ಈ ವೇಳೆ ವರ್ಷಿತಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ವಾರ್ಡನ್‌ಗೆ ವಿಷಯ ತಿಳಿಸಿದ್ದಾರೆ.
ವರ್ಷಿತಾ ಪ್ರತಿಭಾನ್ವಿತ ವಿದ್ಯಾರ್ಥಿನಿ, ಆದ್ರೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋದು ಅಸ್ಪಷ್ಟವಾಗಿದೆ. ಸದ್ಯಕ್ಕೆ ಅದೇ ಕಾಲೇಜಿನಲ್ಲಿ ಯುವಕನೊಬ್ಬ ಈಕೆಯನ್ನ ಪ್ರೀತಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಹರಿಹರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಪೋಷಕರು ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿ ನನ್ನ ಮಗಳಿಗೆ ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.