ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ ಮಾಡಿರುವುದರಿಂದ ಸ್ವಗ್ರಾಮಗಳಿಗೆ ತೆರಳಲು ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಸಾರಿಗೆ ಇಲಾಖೆ ಬಸ್‍ಗಳೆಲ್ಲಾ ಬಂದ್ ಆಗಿರುವುದರಿಂದ ಪ್ರಯಾಣಕ್ಕೆ ತೊಂದರೆಯಾಗಿದ್ದು, ವಸತಿ ನಿಲಯದಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಮನೆಗೆ ತೆರಳಲು ಪರದಾಡುತ್ತಿದ್ದಾರೆ. ರಾಯಚೂರಿನ ಪರಿಶಿಷ್ಢ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿನಿಯರು ಊರುಗಳಿಗೆ ಹೋಗಲು ಪರದಾಡಿದ್ದರಿಂದ ಪಾಲಕರನ್ನು ಕರೆಸಿ ಹಾಸ್ಟೆಲ್ ಸಿಬ್ಬಂದಿ ಮನೆಗೆ ಕಳುಹಿಸುತ್ತಿದ್ದಾರೆ.
Advertisement
Advertisement
ಇಂದು ಮುಂಜಾನೆಯಿಂದಲೇ ಪಾಲಕರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಬೈಕ್, ಖಾಸಗಿ ವಾಹನಗಳಲ್ಲಿ ಬಂದು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ದೂರದ ಊರುಗಳ ಬಡ ಪಾಲಕರು ಮಾತ್ರ ಇನ್ನೂ ಪರದಾಟ ನಡೆಸಿದ್ದಾರೆ.