ಕೋಲಾರ: ಅಪ್ರಾಪ್ತೆಯೊಬ್ಬಳು ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ (Kolara Private College) ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ (PUC Student) ಕಾಲೇಜು ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಅಪ್ರಾಪ್ತೆ ಜನ್ಮ ನೀಡಿದ್ದಾಳೆ. ಈ ಸಂಭಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಮಹಿಳಾ ಪೊಲೀಸರು (Kolara Women Police) ಬಾಲಕಿ ಸ್ಥಿತಿಗೆ ಕಾರಣನಾದ ಭೂಪನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ‘ದಿ ಇಂಡಿಯಾ ಹೌಸ್’ ಸಿನಿಮಾ
ಏನಿದು ಘಟನೆ?
ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಬಾಲಕಿಯು ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಆದ್ರೆ ಆತ ಅದೇ ಕಾಲೇಜಿನ ಯುವಕನಾ ಅಥವಾ ಹೊರಗಿನವನಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬಾಲಕಿ ಸ್ಥಿತಿ ಕಾರಣನಾದ ಯುವಕನಿಗಾಗಿ ಹುಟುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್, ರಾಣಾ, ಜಿತೇಶ್ ಆಯ್ಕೆ!
ಮಂಗಳವಾರ ಶೌಚಾಲಯಕ್ಕೆ ತೆರಳಿದಾಗ ಬಾಲಕಿ ಅಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಬಾಲಕಿಯನ್ನ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲವೇ? ಅಥವಾ ಸ್ನೇಹಿತರಿಗೆ ಗೊತ್ತಿದ್ದೂ ವಿಚಾರ ಮುಚ್ಚಿಟ್ಟಿದ್ದರಾ? ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: 17% ಭಾರತೀಯರ ಬ್ಯಾಂಕಿಂಗ್ ಪಾಸ್‌ವರ್ಡ್ ಅಸುರಕ್ಷಿತವಾಗಿವೆ – ಸಮೀಕ್ಷೆ