ಹೌದು, ಮೊದಲೆಲ್ಲ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿ ದರ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಸ್ಥಿರವಾಗಿರುವಂತೆ ಭಾಸವಾಗುತ್ತಿತ್ತು. ಹೆಚ್ಚು ವ್ಯತ್ಯಾಸವೇನು ಕಂಡುಬರುತ್ತಿರಲಿಲ್ಲ. ಆದರೆ ಈಗ ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿಯ ದರವೂ ಏರಿಕೆಯಾಗುತ್ತಿದೆ. ಆದರೆ ಭಾರತಕ್ಕೆ ಬೆಳ್ಳಿ ಆಮದು ತೀರಾ ಕಡಿಮೆಯಾಗಿದೆ. ಇದರಿಂದ ಬೆಳ್ಳಿ ಕೊರತೆ ಎದ್ದು ಕಾಣುತ್ತಿದೆ. ಹಬ್ಬ ಬಂತೆಂದರೆ ಸಾಕು ಚಿನ್ನ, ಬೆಳ್ಳಿ ಖರೀದಿ ಹೆಚ್ಚಾಗುತ್ತದೆ. ಆದರೆ ಇದೀಗ ವಿಶ್ವದಲ್ಲೇ ಅತಿ ದೊಡ್ಡ ಬೆಳ್ಳಿ ಖರೀದಿ ರಾಷ್ಟ್ರವಾಗಿರುವ ಭಾರತದಲ್ಲಿ ಬೆಳ್ಳಿ ಕೊರತೆ ಉಂಟಾಗಿದೆ. ಇದರ ಪರಿಣಾಮ ವಿಶ್ವದ ಬೇರೆ ದೇಶಗಳಿಗೆ ತುಲನೆ ಮಾಡಿದಾಗ ಭಾರತದಲ್ಲಿ ಬೆಳ್ಳಿ ಬೆಲೆ ಶೇ.10 ರಷ್ಟು ಏರಿಕೆಯಾಗಿದೆ.
ಬೆಳ್ಳಿ ಕೊರತೆಗೆ ಕಾರಣ:
ಸಾಮಾನ್ಯವಾಗಿ ಹಬ್ಬಗಳು ಬಂದಾಗ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶುಭದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಭಾರತೀಯರ ಸಂಪ್ರದಾಯ ಎಂಬ ನಂಬಿಕೆಯಿದೆ. ಆದರೆ ಇದೀಗ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನರು ಬೆಳ್ಳಿ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಇನ್ನೂ ಭಾರತಕ್ಕೆ ಚಿನ್ನದ ಆಮದು ಕಡಿಮೆಯಾಗಿದ್ದು, ಶೇ.42ಗೆ ಕುಸಿತಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ವಿಶ್ವದಲ್ಲಿ ಬೆಳ್ಳಿ ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿದೆ. ಇದರಿಂದಾಗಿ ಐದು ವರ್ಷಗಳಲ್ಲಿ ಉತ್ಪಾದಿಸಲಾಗಿದ್ದ ಹೆಚ್ಚುವರಿಯೂ ಬೆಳ್ಳಿಯು ಖಾಲಿಯಾಗದೆ. ಹೀಗಾಗಿ ಈ ವರ್ಷ ಚಿನ್ನದ ಬೆಲೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಳಿಗ್ಗೆ ಹೆಚ್ಚಾಗಿದೆ. ಇದರಿಂದ ಜನರ ಬೇಡಿಕೆಯನ್ನು ಸದ್ಯದ ಪೂರೈಕೆಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಬೆಳ್ಳಿ ದರ ಏರಿಕೆಗೆ ಕಾರಣ:
ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಸಮರವನ್ನು ಆರಂಭಿಸಿದ್ದಾರೆ. ಟ್ರಂಪ್ ಆರಂಭದಲ್ಲಿ 50ಕ್ಕು ಹೆಚ್ಚು ದೇಶಗಳ ಮೇಲೆ ಸುಂಕ ಸಮರ ಹೇರಿದ್ದರು. ಅಮೆರಿಕ ಹಾಗೂ ಚೀನಾದ ನಡುವಿನ ಸುಂಕ ಸಮರದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿದೆ. ಹಿನ್ನೆಲೆ ಜನರು ಬೆಳ್ಳಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಪರಿಣಾಮ ಎರಡರ ಬೆಲೆಯೂ ಏರಿಕೆಯಾಗುತ್ತದೆ.
ಇನ್ನು ಬೆಳ್ಳಿಯಂತೆ ಚಿನ್ನದ ಉತ್ಪಾದನೆಯು ಕೆಲವು ದೇಶಗಳಲ್ಲಿ ಮಾತ್ರವಿದೆ. ಬೆರಳೆಣಿಕೆಯಷ್ಟು ಮಾತ್ರ ಕೆಲ ದೇಶಗಳು ಬೆಳ್ಳಿ ಗಣಿಗಾರಿಕೆ ಮಾಡುತ್ತವೆ. ಮೆಕ್ಸಿಕೊ, ಪೋಲ್ಯಾಂಡ್, ಯುಕೆ, ಆಸ್ಟ್ರೇಲಿಯ ಮಾತ್ರ ಬೆಳ್ಳಿ ಗಣಿಗಾರಿಕೆ ಮಾಡಲಾಗುತ್ತದೆ. ಅಲ್ಲದೆ ಸೌರ ಶಕ್ತಿ , ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಮಾಡಲಾಗುತ್ತಿರುವುದರಿಂದ, ಆ ಕ್ಷೇತ್ರಗಳಲ್ಲೂ ಕೂಡ ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಬೆಳ್ಳಿ ದರ ಏರಿಕೆಯಾಗಿದೆ.
ಬೆಳ್ಳಿ ಆಮದು ಎಷ್ಟಿದೆ?
ಕಳೆದ ಐದು ವರ್ಷಗಳ ಹಿಂದೆ ಅಂದರೆ 2020ರಿಂದ 2021ರಲ್ಲಿ 2218 ರಿಂದ 2773 ಟನ್ ಬೆಳ್ಳಿ ಭಾರತಕ್ಕೆ ಆಮದಾಗುತ್ತಿತ್ತು. 2022 ರಲ್ಲಿ ದಾಖಲೆಯ 8000 ದಿಂದ 9450 ಟನ್ ಬೆಳ್ಳಿ ಆಮದಾಗುತ್ತು. ಬಳಿಕ 2023 ರಲ್ಲಿ 3625 ಟನ್, 2024 ರಲ್ಲಿ 7000 ಟನ್ ಸದ್ಯ 2025 ರ ಅಂತ್ಯದವರೆಗೆ 5500 ರಿಂದ 6000 ಟನ್ ಆಮದಾಗುವ ನಿರೀಕ್ಷೆಯಿದ್ದು, ಆಗಸ್ಟ್ ವರೆಗೆ 3,302 ಟನ್ ಆಮದಾಗಿದ್ದು, ಭಾರತಕ್ಕೆ ಬೆಳ್ಳಿ ಆಮದು ಶೇಕಡ 42ಕ್ಕೆ ಕುಸಿದಿದೆ.
ಐದು ವರ್ಷಗಳಿಗೂ ತುಲನೆ ಮಾಡಿದಾಗ ಹೆಚ್ಚೇನು ವ್ಯತ್ಯಾಸವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಕೊರತೆ ಹೆಚ್ಚು ಕಾಣುತ್ತಿದೆ. ಅಲ್ಲದೆ ಹೆಚ್ಚಿನ ಕ್ಷೇತ್ರಗಳಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಿರುವುದರಿಂದ ಕೊರತೆ ಉಂಟಾದಂತೆ ತೋರುತ್ತಿದೆ.
ಬೆಳ್ಳಿ ಕೊರತೆಯಿಂದ ಸಾಮಾಗ್ರಿಗಳ ತಯಾರಿಕೆಗೆ ಅಥವಾ ಆಭರಣಗಳ ತಯಾರಿಕೆಗೆ ಕಷ್ಟಕರವಾಗುವ ಸಾಧ್ಯತೆಯಿದೆ. ಸದ್ಯ ಚಿನ್ನ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನ ಬೆಳ್ಳಿಯನ್ನು ಖರೀದಿಸುತ್ತಾರೆ. ಹೀಗಾಗಿ ಬೆಳ್ಳಿ ಮಾರಾಟಗಾರರಿಗೂ ಇದರಿಂದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪರದಾಡುವಂತಾಗಿದೆ. ತಮಗೂ ಪೂರೈಕೆಯಿಲ್ಲದೇ ಗ್ರಾಹಕರಿಗೂ ಪೂರೈಕೆ ಮಾಡಲು ಸಾಧ್ಯವಾಗದಂತಾಗಿದೆ.
ಸದ್ಯ ಕೆ.ಜಿಗೆ ಬೆಳ್ಳಿಯ ಬೆಲೆ 1,70,000ಕ್ಕೂ ಅಧಿಕವಾಗಿದೆ. ಇತ್ತ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದ್ದು, ಬೆಳ್ಳಿಯೂ ಅದರ ಬೆನ್ಹಿಂದೆ ಓಟಕ್ಕಿಳಿದಂತಾಗಿದೆ.