– ಭೂಮಿಗಿಂತ 143 ಪಟ್ಟು ದೊಡ್ಡದು ಈ ಏಲಿಯನ್ ಪ್ಲಾನೆಟ್!
ಭಾರತೀಯ ವಿಜ್ಞಾನಿಗಳು (Indian Scientists) ಸೌರಮಂಡಲದಾಚೆ ಇರುವ ಏಲಿಯನ್ ಗ್ರಹವೊಂದನ್ನ (Alien Planet) ಪತ್ತೆಹಚ್ಚಿದ್ದಾರೆ. ಇದನ್ನ ಎಕ್ಸೋಪ್ಲಾನೆಟ್ (Exoplanet) ಅಂತಲೂ ಕರೆಯುತ್ತಾರೆ. ಏಲಿಯನ್ (Alien) ಎಂದಾಕ್ಷಣ ಎಲ್ಲರಿಗೂ ಥಟ್ಟನೆ ನೆನಪಾಗೋದು ಅನ್ಯಗ್ರಹ ಜೀವಿ. ನೋಡೋಕೆ ವಿಚಿತ್ರವಾಗಿದೆ, ಮನುಷ್ಯರಿಗಿಂತ ಬುದ್ಧಿಶಾಲಿ, ಹಾಗಂತೆ.. ಹೀಗಂತೆ.. ಏನೇನೋ ಕಲ್ಪನೆ ಮಾಡಿಕೊಳ್ಳೋದು ಸಹಜ. ಈ ಏಲಿಯನ್ ಪ್ಲಾನೆಟ್ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಹಾಗಾದರೆ, ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿದ ಈ ಗ್ರಹದಲ್ಲಿ ಏಲಿಯನ್‌ಗಳು ಇವೆಯೇ? ಯಾವ ಅರ್ಥದಲ್ಲಿ ವಿಜ್ಞಾನಿಗಳು ಏಲಿಯನ್ ಪ್ಲಾನೆಟ್ ಎಂದು ಹೆಸರಿಟ್ಟಿದ್ದಾರೆ?
Advertisement
ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಗುರುಗ್ರಹದಂತೆಯೇ ಇರುವ ಮತ್ತು ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಎಕ್ಸೋಪ್ಲಾನೆಟ್ ಅನ್ನು ಕಂಡುಹಿಡಿದಿದೆ. ಈ ತಂಡದ ನೇತೃತ್ವವನ್ನು ಭಾರತದ ವಿಜ್ಞಾನಿಗಳೇ ವಹಿಸಿದ್ದರೆಂಬುದು ವಿಶೇಷ. ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್‌ಎಲ್)ಯ ಎಕ್ಸೋಪ್ಲಾನೆಟ್ ರಿಸರ್ಚ್ ಗ್ರೂಪ್‌ನಲ್ಲಿ ಪ್ರೊಫೆಸರ್ ಅಭಿಜಿತ್ ಚಕ್ರವರ್ತಿ ನೇತೃತ್ವದ ತಂಡದಲ್ಲಿ ಭಾರತ, ಯುನೈಟೆಡ್ ಸ್ಟೇಟ್ಸ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌ನ ವಿಜ್ಞಾನಿಗಳು ಇದ್ದರು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ. ಅಷ್ಟೇ ಅಲ್ಲ, ಈ ಬ್ರಹ್ಮಾಂಡದಲ್ಲಿ ಇಂತಹ ಸಾವಿರಾರು ಎಕ್ಸೋಪ್ಲಾನೆಟ್‌ಗಳಿವೆ. 1990 ರ ದಶಕದಲ್ಲಿ ಮೊದಲ ಬಾರಿಗೆ ಎಕ್ಸೋಪ್ಲಾನೆಟ್ ಪತ್ತೆಹಚ್ಚಲಾಯಿತು ಎನ್ನುತ್ತೆ ಯುಎಸ್ NASA. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
Advertisement
Advertisement
ನಮ್ಮ ಗುರು ಗ್ರಹದ ವಿಶೇಷತೆ ಏನು?
ಎಕ್ಸೋಪ್ಲಾನೆಟ್‌ಗಿಂತ ಮೊದಲು ನಮ್ಮ ಸೌರಮಂಡಲದ ಗುರು ಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಭೂಮಿಯಿಂದ 890 ದಶಲಕ್ಷ ಕಿಮೀ ದೂರದಲ್ಲಿರುವ ಗುರು ಗ್ರಹವು ಸೌರಮಂಡಲದ ಅತಿ ದೊಡ್ಡ ಗ್ರಹವಾಗಿದೆ. ಗಾತ್ರದಲ್ಲಿ ಭೂಮಿಗಿಂತ 11 ಪಟ್ಟು ದೊಡ್ಡದಾಗಿದೆ. ಇಂಥ ಗುರು ಗ್ರಹಕ್ಕೆ ಮೂರು ಉಪಗ್ರಹಗಳಿವೆ. ಅವುಗಳೆಂದರೆ ಗ್ಯಾನಿಮೇಡಾ, ಯೂರೋಪ, ಕ್ಯಾಲಿಸ್ಟೊ. ಈ ಉಪಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಬಗ್ಗೆ ಪ್ರಬಲ ಶಂಕೆ ಇದೆ.
Advertisement
ಏನಿದು ಎಕ್ಸೋಪ್ಲಾನೆಟ್?
ಸೌರವ್ಯೂಹದ ಆಚೆ ನಕ್ಷತ್ರವನ್ನು ಸುತ್ತುವ ಗ್ರಹ ಎಕ್ಸೋಪ್ಲಾನೆಟ್. ನಾಸಾದ ಪ್ರಕಾರ, ರಾಕ್ಷಸ ಗ್ರಹಗಳು ಎಂದು ಕರೆಯಲ್ಪಡುವ ಬಾಹ್ಯ ಗ್ರಹಗಳು ಸಹ ಇವೆ. ಅವು ಯಾವುದೇ ನಕ್ಷತ್ರದ ಹಿಡಿತಕ್ಕೆ ಒಳಪಡುವುದಿಲ್ಲ. ಆದರೆ ಗ್ಯಾಲಕ್ಸಿಯ ಕೇಂದ್ರವನ್ನು ಸುತ್ತುತ್ತವೆ. ಇದನ್ನೂ ಓದಿ: PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?
ಎಕ್ಸೋಪ್ಲಾನೆಟ್‌ಗಳು ನಮ್ಮ ಸೌರವ್ಯೂಹದಲ್ಲಿನ ಗ್ರಹಗಳಂತೆಯೇ ಅನೇಕ ಅಂಶಗಳಿಂದ ರೂಪುಗೊಂಡಿದೆ. ಆದರೆ ಆ ಅಂಶಗಳ ಮಿಶ್ರಣಗಳು ಭಿನ್ನವಾಗಿರಬಹುದು. ಕೆಲವು ಗ್ರಹಗಳು ನೀರು ಅಥವಾ ಮಂಜುಗಡ್ಡೆಯಿಂದ ಆವೃತವಾಗಿರುತ್ತವೆ. ಇನ್ನೂ ಕೆಲವು ಕಬ್ಬಿಣ ಅಥವಾ ಇಂಗಾಲದಿಂದ ಆವೃತವಾಗಿರುತ್ತವೆ ಎಂದು ಎನ್‌ಎಎಸ್‌ಎ ಎಕ್ಸ್ಪ್ಲಾನೆಟ್ ಎಕ್ಸ್ಪ್ಲೋರೇಶನ್ ವೆಬ್‌ಸೈಟ್ ವಿಶ್ಲೇಷಿಸಿದೆ. ನಕ್ಷತ್ರಗಳ ಪ್ರಜ್ವಲಿಸುವಿಕೆಯಿಂದ ಈ ಗ್ರಹಗಳು ಮರೆಮಾಚಿಕೊಳ್ಳುತ್ತವೆ. ಹೀಗಾಗಿ ದೂರದರ್ಶಕಗಳ ಮೂಲಕ ಎಕ್ಸೋಪ್ಲಾನೆಟ್‌ಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ.
ಹೊಸ ಎಕ್ಸೋಪ್ಲಾನೆಟ್ ಹೇಗೆ ಪತ್ತೆಯಾಯಿತು?
ಪಿಆರ್‌ಎಲ್ ಸುಧಾರಿತ ರೇಡಿಯಲ್-ವೇಗ ಅಬು-ಸ್ಕೈ ಸರ್ಚ್ (ಪಿಎಆರ್‌ಎಎಸ್) ಸ್ಪೆಕ್ಟ್ರೋಗ್ರಾಫ್ ಬಳಸಿಕೊಂಡು ಈ ಎಕ್ಸೋಪ್ಲಾನೆಟ್ ಪತ್ತೆಹಚ್ಚಲಾಗಿದೆ. ಟಿಒಐ4603 ಅಥವಾ ಹೆಚ್‌ಡಿ 245134 ಎಂದು ಕರೆಯಲ್ಪಡುವ ನಕ್ಷತ್ರದ ಸುತ್ತಲೂ ಈ ಗ್ರಹ ಸುತ್ತುತ್ತದೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?
ಸ್ಪೆಕ್ಟ್ರೋಗ್ರಾಫ್ ಬಳಸಿ ಮೌಂಟ್ ಅಬುದಲ್ಲಿನ ಗುರುಶಿಖರ ವೀಕ್ಷಣಾಲಯದಲ್ಲಿ ಈ ಗ್ರಹವನ್ನು ಆವಿಷ್ಕರಿಸಲಾಯಿತು ಇಸ್ರೋ ತಿಳಿಸಿದೆ. ಈ ಎಕ್ಸೋಪ್ಲಾನೆಟ್ ಅನ್ನು ವಿಜ್ಞಾನಿಗಳು ಟಿಒಐ 4603ಬಿ ಅಥವಾ ಹೆಚ್‌ಡಿ 245134ಬಿ ಎಂದು ಹೆಸರಿಸಿದ್ದಾರೆ.
ಗುರು ಗ್ರಹಕ್ಕಿಂತ 13 ಪಟ್ಟು ದೊಡ್ಡದು!
ಹೊಸದಾಗಿ ಪತ್ತೆಯಾದ ಎಕ್ಸೋಪ್ಲಾನೆಟ್‌ನ ದ್ರವ್ಯತ್ವ (ತೂಕವು) ಗುರುಗ್ರಹಕ್ಕಿಂತ 13 ಪಟ್ಟು ಹೆಚ್ಚು. ಇದರ ಸಾಂದ್ರತೆಯು ಇಲ್ಲಿಯವರೆಗೂ ನಾವು ಗಮನಿಸಿರುವುದಕ್ಕಿಂತ ಅತ್ಯಧಿಕ ಅಂತ ಇಸ್ರೋ ಹೇಳುತ್ತೆ. 731 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ಎಕ್ಸೋಪ್ಲಾನೆಟ್ ಪ್ರತಿ 7.24 ದಿನಗಳಿಗೊಮ್ಮೆ ಉಪ-ದೈತ್ಯ ಎಫ್- ಮಾದರಿಯ ನಕ್ಷತ್ರ ಟಿಒಐ4603 ಅನ್ನು ಸುತ್ತುತ್ತದೆ.
ಈ ಆವಿಷ್ಕಾರ ಏಕೆ ಮುಖ್ಯ?
1670 ಕೆ ನ ಮೇಲ್ಮೈ ತಾಪಮಾನ ಹೊಂದಿರುವ ಎಕ್ಸೋಪ್ಲಾನೆಟ್ ಬೃಹತ್ ಗ್ರಹಗಳ ರಚನೆ ಮತ್ತು ವಿಕಾಸದ ಕಾರ್ಯವಿಧಾನಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!
ಪಿಎಆರ್‌ಎಎಸ್ ಸ್ಪೆಕ್ಟ್ರೋಗ್ರಾಫ್ ಮತ್ತು ಪಿಆರ್‌ಎಲ್ 1.2ಬಿ ದೂರದರ್ಶಕದೊಂದಿಗೆ ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿದ 3ನೇ ಎಕ್ಸೋಪ್ಲಾನೆಟ್ ಗ್ರಹವಾಗಿದೆ. ಉಳಿದೆರಡು ಎಕ್ಸೋಪ್ಲಾನೆಟ್‌ಗಳನ್ನು 2018 (ಕೆ2-236ಬಿ) ಮತ್ತು 2021 (ಟಿಒಐ-1789ಬಿ) ರಲ್ಲಿ ಆವಿಷ್ಕರಿಸಲಾಗಿದೆ.
ಎಕ್ಸೋಪ್ಲಾನೆಟ್ ಬಗ್ಗೆ ವಿಜ್ಞಾನಿಗಳು ವಿವರ ನೀಡಿದ್ದಾರೆ. ಆದರೆ ಇದಕ್ಕೆ ಏಲಿಯನ್ ಪ್ಲಾನೆಟ್ ಅಂತ ಯಾಕೆ ಹೆಸರಿಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ಈ ಗ್ರಹದಲ್ಲಿ ಏಲಿಯನ್‌ಗಳು ಇವೆಯಾ? ಅಥವಾ ಸೌರಮಂಡಲದಾಚೆ ಇರುವ ಅನ್ಯಗ್ರಹ ಎಂಬ ಕಾರಣಕ್ಕೆ ಈ ಹೆಸರನ್ನಿಟ್ಟಿದ್ದಾರಾ ಎಂಬುದು ಪ್ರಶ್ನೆಯಾಗಿದೆ.