ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿಗಳ ಪೈಕಿ ಈಗಾಗಲೇ ಒಂದನ್ನು ಬಸ್ ಫ್ರೀ ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ. ಸದ್ಯ ಗೃಹ ಜ್ಯೋತಿ ಯೋಜನೆಯ ಗ್ಯಾರಂಟಿ ಜಾರಿಗೆ ಮುಂದಾಗಿದೆ.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಫ್ರೀ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ ಯೋಜನೆ ಜಾರಿ, ಅರ್ಜಿ ಸಲ್ಲಿಕೆ ಹೇಗೆ, ಯಾರ್ಯಾರು ಸಲ್ಲಿಸಬೇಕು, ಅರ್ಜಿ ಸಲ್ಲಿಕೆಗೆ ಇರುವ ನಿಯಮಗಳೇನು ಎಂಬ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
Advertisement
* ಏನಿದು ಗೃಹಜ್ಯೋತಿ ಯೋಜನೆ?: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯೂ ಒಂದಾಗಿದೆ. ಪ್ರತಿ ಮನೆಗೆ 200 ಯೂನಿಟ್ (200 Unit Electricity) ವರೆಗೆ ವಿದ್ಯುತ್ ಉಚಿತವಾಗಿ ನೀಡುವುದು ಯೋಜನೆ ಉದ್ದೇಶ. ಆಗಸ್ಟ್ 1 ರಿಂದ ಯೋಜನೆ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
Advertisement
* ಅರ್ಜಿ ಸಲ್ಲಿಕೆ ಮಾಡೋದು ಹೇಗೆ?: ಉಚಿತ್ ವಿದ್ಯುತ್‍ಗಾಗಿ ನಾಳೆಯಿಂದಲೇ ಜನರು ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಲು ಅವಕಾಶವಿದೆ. ಅದಕ್ಕಾಗಿ ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್ ಅಥವಾ ಮೊಬೈಲ್ ಂಠಿಠಿ ಮೂಲಕ ಸರ್ಜಿ ಸಲ್ಲಿಸಲು ಅವಕಾಶ ಇದೆ. ಕಚೇರಿಗಳಿಗೆ ತೆರಳಿ ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆ, ಕರೆಂಟ್ ಬಿಲ್‍ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ ಬಾಡಿಗೆ/ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆಗಸ್ಟ್ 1, 2023 ರಿಂದ (ಜುಲೈ 2023 ರ ಬಳಕೆಯ ಪ್ರಮಾಣ) ಜಾರಿಗೆ ಬರಲಿದೆ.
Advertisement
Advertisement
* ಷರತ್ತುಗಳೇನು?: ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿ ಮಾನದಂಡವಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ 10% ರಷ್ಟು ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು ಎಷ್ಟು ವಿದ್ಯುತ್ ಬಳಸುತ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ 10% ರಷ್ಟು ವಿದ್ಯುತ್ ಉಚಿತವಾಗಿ ಕೊಡಲಾಗುವುದು. ಉದಾಹರಣೆಗೆ, 70 ಯೂನಿಟ್ ಬಳಸುವವರು ಅದಕ್ಕೆ 10% (ಅಂದರೆ ಒಟ್ಟು 80%) ಬಳಕೆ ಮಾಡಬಹುದು. ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸಿದ್ದವರು ಈಗ 110 ಯೂನಿಟ್ ಬಳಸಿದ್ರೆ ವಿದ್ಯುತ್ ಉಚಿತವಾಗಿ ಸಿಗುತ್ತದೆ. ಒಂದು ವೇಳೆ 110ಕ್ಕಿಂತ ಹೆಚ್ಚು ಯೂನಿಟ್ ಬಳಸಿದ್ರೆ ಹೆಚ್ಚುವರಿ ಯೂನಿಟ್‍ಗೆ ಬಿಲ್ ಕಟ್ಟಬೇಕು. ಹೀಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವವರು ಬಿಲ್ ಕಟ್ಟುವಂತಿಲ್ಲ. 200 ಯೂನಿಟ್ ಉಚಿತ ಅಂತ ಎಲ್ಲರೂ ಬೇಕಾಬಿಟ್ಟಿ ವಿದ್ಯುತ್ ಬಳಸುವಂತಿಲ್ಲ.
* ವಿದ್ಯುತ್ ಬಿಲ್ ಬಾಕಿ ಇರೋರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾ?: ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡವರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಆದರೆ ಬಾಕಿ ಬಿಲ್ ಪಾವತಿಗೆ ಮೂರು ತಿಂಗಳ ಗಡುವು ಇದೆ. ಸೆಪ್ಟೆಂಬರ್ ವರಗೆ ಹಿಂಬಾಕಿ ಕಟ್ಟಲು ಇಂಧನ ಇಲಾಖೆ ಅವಕಾಶ ಕೊಟ್ಟಿದೆ. ಈ ಬಾರಿ ದುಪ್ಪಟ್ಟು ಬಿಲ್ ಬಂದಿದೆ. ಹೀಗಾಗಿ ಮೂರು ತಿಂಗಳ ಗಡುವು ನೀಡಲಾಗಿದೆ.
* ವಿದ್ಯುತ್ ಬಿಲ್ ನಿಧನರಾದವರ ಹೆಸರಿನಲ್ಲಿ ಇದ್ರೆ ನೋಂದಣಿ ಹೇಗೆ?: ವಿದ್ಯುತ್ ಬಿಲ್ ನಿಧನರಾದವರ ಹೆಸರಿನಲ್ಲಿ ಬಂದಿದ್ರೇ ಗೃಹಜ್ಯೋತಿಗೆ ಬೇರೆಯವರು ನೋಂದಣಿ ಮಾಡಿಕೊಳ್ಳಬಹುದು. ವಿದ್ಯುತ್ ಸಂಪರ್ಕವನ್ನು ಅರ್ಜಿ ಸಲ್ಲಿಕೆ ಮಾಡುವ ಹೆಸರಿಗೆ ವರ್ಗಾವಣೆ ಮಾಡಲೇಬೇಕು. ಅದಾದ ಬಳಿಕ ಅರ್ಜಿ ಸಲ್ಲಿಕೆ ಮಾಡಬಹುದು. ಎಲ್ಲಾ ಎಸ್ಕಾಂ ಉಪವಿಭಾಗಗಳಲ್ಲಿ ಹೆಸರಿನ ಬದಲಾವಣೆಯನ್ನು ಮಾಡಿಕೊಡ್ತಾರೆ.
* ಬಾಡಿಗೆದಾರ ಫಲಾನುಭವಿ ಆಗಬಹುದಾ?: ಹೌದು, ಯೋಜನೆಗೆ ಫಲಾನುಭವಿ ಆಗಲು ಬಾಡಿಗೆ ಮನೆಯಲ್ಲಿ ವಾಸ ಇರುವ ಪೂರಕ ದಾಖಲಾತಿ ಅಂದ್ರೆ ಅದೇ ವಿಳಾಸದ ವೋಟರ್ ಐಡಿ, ಆಧಾರ್, ಅಥವಾ ಬಾಡಿಗೆ ಕರಾರು ಪತ್ರ ಇದ್ದರೆ ಫಲಾನುಭವಿ ಆಗಬಹುದು. ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ, ಬಾಡಿಗೆ/ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸಬೇಕು. ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.
* ಹೊಸ ಮನೆ ಮಾಡಿರುವವರಿಗೆ ಯೋಜನೆ ಲಾಭ ಸಿಗುತ್ತಾ?: ಎರಡು ತಿಂಗಳ ಹಿಂದೆ ಅಥವಾ ಹೊಸ ಮನೆ ಬದಲಾವಣೆ ಮಾಡಿರುವವರಿಗೂ ಯೋಜನೆ ಲಾಭ ಸಿಗುತ್ತೆ. ಹೊಸ ನಿವಾಸ ಹಾಗೂ 12 ತಿಂಗಳಿಗಿಂತ ಕಡಿಮೆ ವಾಸವಿರುವವರಿಗೆ ಉಚಿತ ಸೇವೆ ಸಿಗಲಿದೆ. ಸರಾಸರಿ 53 ಯೂನಿಟ್ ಜೊತೆಗೆ 10% ಅಂದ್ರೆ 58 ರಿಂದ 59 ಯೂನಿಟ್ ಮಾತ್ರ ಇವರಿಗೆ ಉಚಿತವಾಗಿ ಸಿಗಲಿದೆ. ಹೆಚ್ಚುವರಿಗೆ ಬಿಲ್ ಕಟ್ಟಬೇಕು.
* ಹೊರ ರಾಜ್ಯದ ಆಧಾರ್ ಇದ್ದು, ಕರ್ನಾಟಕದಲ್ಲಿ ವಾಸ ಆಗಿದ್ರೆ?: ಇವರಿಗೂ ಯೋಜನೆ ಅನ್ವಯ ಆಗುತ್ತೆ. ಆದರೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಾಖಲಾತಿ ಸಲ್ಲಿಸಬೇಕು.