– ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಹರು? ನೋಂದಣಿ ಯಾವಾಗಿನಿಂದ?
– ಸಂಪೂರ್ಣ ಮಾಹಿತಿ ಈ ಸುದ್ದಿ ಓದಿ..
ಕರ್ನಾಟಕ ಸರ್ಕಾರದ 5 ನೇ ಹಾಗೂ ಯುವ ಸಮುದಾಯವನ್ನು ಕೇಂದ್ರೀಕರಿಸಿರುವ ‘ಯುವನಿಧಿ’ ಗ್ಯಾರಂಟಿ ಜಾರಿಗೆ ಸಿದ್ಧತೆ ನಡೆದಿದೆ. ಯುವನಿಧಿ ಗ್ಯಾರಂಟಿಗೆ ನೋಂದಣಿ ಹಾಗೂ ಚಾಲನೆ ದಿನಾಂಕವನ್ನು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ.
Advertisement
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳ ಜಾರಿ ಕುರಿತು ಭರವಸೆ ನೀಡಿತ್ತು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ (ಶಕ್ತಿ ಯೋಜನೆ), ಮನೆ ಯಜಮಾನಿಗೆ ತಿಂಗಳಿಗೆ 2,000 ರೂ. ಸಹಾಯಧನ (ಗೃಹಲಕ್ಷ್ಮಿ), ಅನ್ನಭಾಗ್ಯ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ (ಗೃಹಜ್ಯೋತಿ) ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಿದೆ. ಉಳಿದಿದ್ದ ಕೊನೆ ಯೋಜನೆ ‘ಯುವನಿಧಿ’ (ಪದವಿ, ಡಿಪ್ಲೊಮಾ ವ್ಯಾಸಂಗ ಮಾಡಿದವರಿಗೆ ನಿರುದ್ಯೋಗ ಭತ್ಯೆ)ಯನ್ನು ಜಾರಿಗೆ ತರಲು ಸರ್ಕಾರ ತಯಾರಿ ನಡೆಸಿದೆ. ಇದನ್ನೂ ಓದಿ: ಜ.12 ಕ್ಕೆ ಯುವನಿಧಿ ಹಣ ವರ್ಗಾವಣೆ; ಡಿ.26 ರಿಂದ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್
Advertisement
Advertisement
ಏನಿದು ಯುವನಿಧಿ ಯೋಜನೆ? ಅರ್ಜಿ ಸಲ್ಲಿಕೆ ಹೇಗೆ? ಅರ್ಹ ಫಲಾನುಭವಿಗಳು ಯಾರು? ಯೋಜನೆಗೆ ಯಾರು ಅನರ್ಹರು? ಅರ್ಜಿ ಸಲ್ಲಿಕೆಗೆ ಕೊನೆ ದಿನ ಯಾವಾಗ? ಹೀಗೆ ಹಲವಾರು ಪ್ರಶ್ನೆಗಳು ಯುವಜನರನ್ನು ಕಾಡುತ್ತಿರಬಹುದು. ಯುವನಿಧಿ ಯೋಜನೆ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Advertisement
ಯುವನಿಧಿ ಯೋಜನೆ ಎಂದರೇನು?
ಕರ್ನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾದ ಕರ್ನಾಟಕ ರಹವಾಸಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆಯಾಗಿದೆ. ಪದವೀದಧರರಿಗೆ 3,000 ರೂ. ಮತ್ತು ಡಿಪ್ಲೊಮಾ ತೇರ್ಗಡೆಯಾದವರಿಗೆ 1,500 ರೂ. ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡಲಾಗುವುದು.
ಯುವನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿ ಸಲ್ಲಿಸುವುದು. https://sevasindhugs.karnataka.gov.in/
ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಹತೆಗಳೇನು?
ಪದವಿ/ಡಿಪ್ಲೊಮಾ ಕೋರ್ಸ್‌ಗಳನ್ನು 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡಿರಬೇಕು. 2023 ರಲ್ಲಿ ತೇರ್ಗಡೆಯಾಗಿದ್ದು, 180 ದಿನಗಳ ವರೆಗೆ ನಿರುದ್ಯೋಗಿಗಳಾಗಿ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಾಗಿರಬೇಕು. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ ತೆರಿಗೆ ಏರಿಕೆ, 85ಸಾವಿರ ಕೋಟಿ ಸಾಲಕ್ಕೆ ನಿರ್ಧಾರ – ಯಾವ ತೆರಿಗೆ ಎಷ್ಟು ಏರಿಕೆ?
ಯುವನಿಧಿ ಯೋಜನೆಗೆ ಯಾರು ಅನರ್ಹರು?
ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ಸ್ವ-ಉದ್ಯೋಗಿಗಳು, ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಗಳಲ್ಲದವರು ಮತ್ತು ಪದವಿ/ಡಿಪ್ಲೊಮಾ ಕೋರ್ಸನ್ನು ಕರ್ನಾಟಕ ಹೊರತಾಗಿ ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದವರು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು ಅನರ್ಹರು.
ಯುವನಿಧಿ ಯೋಜನೆಗೆ ಕರ್ನಾಟಕದ ರಹವಾಸಿ ಎಂದರೆ ಯಾರು?
ಕರ್ನಾಟಕದ ರಹವಾಸಿ ಎಂದರೆ ಕರ್ನಾಟಕದಲ್ಲಿ ಪದವಿ/ಡಿಪ್ಲೊಮಾ ವ್ಯಾಸಂಗದ ವರೆಗೆ ಕನಿಷ್ಠ 6 ವರ್ಷ ವಾಸವಿರಬೇಕು.
*ಕರ್ನಾಟಕದ ರಹವಾಸಿ ಎಂದು ಹೇಗೆ ಪರಿಶೀಲಿಸಲಾಗುವುದು?*
ಕರ್ನಾಟಕದಲ್ಲಿ 6 ವರ್ಷಗಳ ‘ವಾಸವಿರುವ ವಿದ್ಯಾರ್ಥಿ’ ಎಂದು ಈ ಕೆಳಗಿನಂತೆ ಪರಿಶೀಲಿಸಲಾಗುತ್ತದೆ:
* ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳು ಅಥವಾ
* ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಅಥವಾ
* ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣ ಪತ್ರ ಅಥವಾ
* ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ.
ಯುವನಿಧಿ ಯೋಜನೆಗೆ ಪ್ರಯೋಜನಗಳನ್ನು ಪಡೆಯುವ ಅಭ್ಯರ್ಥಿ ನೋಂದಾಯಿಸಲು 180 ದಿನಗಳು ಪೂರ್ಣಗೊಳ್ಳುವವರೆಗೆ ಕಾಯಬೇಕೆ?
ಇಲ್ಲ.. ಪದವಿ/ಡಿಪ್ಲೋಮಾ ಫಲಿತಾಂಶ ಪ್ರಕಟವಾದ ನಂತರದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಯುವನಿಧಿ ಯೋಜನೆಯಡಿ ನೋಂದಾಯಿಸಿದ ತಕ್ಷಣವೇ ಸೌಲಭ್ಯಗಳನ್ನು ಅಭ್ಯರ್ಥಿಗೆ ನೀಡಲಾಗುವುದೇ?
ನೋಂದಾಯಿತ ಅಭ್ಯರ್ಥಿಗಳು ಪದವಿ/ಡಿಪ್ಲೊಮಾ ತೇರ್ಗಡೆಯಾದ ನಂತರ 180 ದಿನಗಳನ್ನು ಪೂರೈಸಿರಬೇಕು. ಅಂತಹ ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
ಯುವನಿಧಿ ಯೋಜನೆಯಡಿ ಸೌಲಭ್ಯಗಳನ್ನು ಅಭ್ಯರ್ಥಿಗೆ ಎಲ್ಲಿಯವರೆಗೆ ನೀಡಲಾಗುವುದು?
ಯೋಜನೆಯಲ್ಲಿ ನೋಂದಾಯಿಸಿದ ನಂತರ 2 ವರ್ಷದ ವರೆಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಇದನ್ನೂ ಓದಿ: ಬಿಜೆಪಿಗರು ಜಮೀರ್ ವಿಮಾನದ ಬಗ್ಗೆ ಮಾತಾಡೋ ಬದಲು ಪ್ರಧಾನಿಗಳಿಂದ ಬರ ಪರಿಹಾರ ಕೊಡಿಸಲಿ: ರಾಮಲಿಂಗಾರೆಡ್ಡಿ
ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರಗಳನ್ನು NAD ಪೋರ್ಟಲ್‌ನಲ್ಲಿ ಇಂದೀಕರಿಸಿದ ಬಗ್ಗೆ ಹೇಗೆ ಪರಿಶೀಲಿಸಿಕೊಳ್ಳಬಹುದು?
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ NAD ಪೋರ್ಟಲ್ ಲಿಂಕ್‌ನ್ನು ಬಳಸಿಕೊಂಡು ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರಗಳು ಇಂದೀಕರಿಸಲಾಗಿದೆ ಎಂದು ತಿಳಿದುಕೊಳ್ಳಲು ಪದವಿ/ಡಿಪ್ಲೊಮಾ ಪತ್ರಗಳಲ್ಲಿರುವ ನೋಂದಣಿ ಸಂಖ್ಯೆಯನ್ನು ಲಾಗಿನ್ ಮಾಡಿ ಪರಿಶೀಲಿಸಿಕೊಳ್ಳಬಹುದು.
ವಿಶ್ವವಿದ್ಯಾನಿಲಯಗಳು ಮತ್ತು ಮಂಡಳಿಗಳು NAD ನಲ್ಲಿ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡದಿದ್ದ ಪಕ್ಷದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲವೇ?
ವಿಶ್ವವಿದ್ಯಾನಿಲಯಗಳು ಮತ್ತು ಮಂಡಳಿಗಳು NAD ನಲ್ಲಿ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಫ್‌ಲೋಡ್ ಮಾಡದಿದ್ದ ಪಕ್ಷದಲ್ಲಿ ಅಭ್ಯರ್ಥಿಗಳು ಮ್ಯಾನ್ಯುಲ್ (Manual) ಆಗಿ ಅಪ್‌ಲೋಡ್ ಮಾಡಬಹುದು. ನಂತರ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ಅಂತಹ ಅಭ್ಯರ್ಥಿಗಳ ದತ್ತಾಂಶವನ್ನು ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಿಗೆ ಇಂದೀಕರಿಸಲು ಕ್ರಮವಹಿಸುವಂತೆ ಕಳುಹಿಸಿಕೊಡಲಾಗುವುದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕಾದ ಇತರ ದಾಖಲೆಗಳು ಯಾವುವು?
ಅಭ್ಯರ್ಥಿಗಳು ಆಧಾರ್ ಸೀಡೆಡ್ ಬ್ಯಾಂಕ್ ಖಾತೆ, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ ಬಗ್ಗೆ ಮುಂಚಿತವಾಗಿ ಖಚಿತಪಡಿಸಿಕೊಳ್ಳತಕ್ಕದ್ದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಬೇಕಾದ ಘೋಷಣೆಗಳೇನು?
ಅಭ್ಯರ್ಥಿಗಳು ತಾನು ಕರ್ನಾಟಕ ರಹವಾಸಿಯೆಂದು, ಸರ್ಕಾರಿ/ಖಾಸಗಿ ಉದ್ಯೋಗದಲ್ಲಿಲ್ಲವೆಂದು, ಸ್ವ-ಉದ್ಯೋಗಿಯಲ್ಲವೆಂದು ಮತ್ತು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿಲ್ಲವೆಂದು ಅರ್ಜಿಯ ಪ್ರಾರಂಭದಲ್ಲಿಯೇ ಘೋಷಣೆ ಮಾಡಬೇಕಾಗುತ್ತದೆ.
ಅಭ್ಯರ್ಥಿಗಳು ಉದ್ಯೋಗ ದೊರಕಿದ ನಂತರ ಏನು ಮಾಡಬೇಕು?
ಅಭ್ಯರ್ಥಿಗಳು ಉದ್ಯೋಗ ದೊರಕಿದ ತಕ್ಷಣ ಪ್ರತಿ ತಿಂಗಳು 25 ನೇ ತಾರೀಖಿನೊಳಗೆ ಘೋಷಣೆ ಮಾಡುವ ಸಂದರ್ಭದಲ್ಲಿ ಉದ್ಯೋಗಿಯೆಂದು ಘೋಷಿಸಬೇಕು.
ಅಭ್ಯರ್ಥಿಗಳು ತಪ್ಪು ಘೋಷಣೆ ನೀಡಿದರೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ಕೈಗೊಳ್ಳುವ ಕ್ರಮಗಳೇನು?
ತಪ್ಪು ಘೋಷಣೆ ನೀಡಿದಲ್ಲಿ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್ ಪ್ರಕರಣ ತನಿಖೆ ಆಗಬೇಕು: ಜಿ.ಪರಮೇಶ್ವರ್
ಅಭ್ಯರ್ಥಿಗಳು ಈ ಯೋಜನೆಯಡಿ ನೋಂದಾಯಿಸಿದ ನಂತರ ಸಿಗುವ ಇತರೆ ಪ್ರಯೋಜನಗಳೇನು?
ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವು ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಜೋಡಣೆಯಾಗಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಧೀರ್ಘಾವಧಿ/ಅಲ್ಪಾವಧಿ ತರಬೇತಿಗಳನ್ನು ಪಡೆಯುವಲ್ಲಿ ಮತ್ತು ಈಗಾಗಲೇ ನೋಂದಾಯಿಸಿಕೊಂಡ ಉದ್ಯೋಗದಾತರು ಅಭ್ಯರ್ಥಿಗಳ ದತ್ತಾಂಶವನ್ನು ಬಳಸಿಕೊಂಡು ಉದ್ಯೋಗ ಹೊಂದಾಣಿಕೆ ಮಾಡುವರು.
ಯುವನಿಧಿ ಯೋಜನೆಯಡಿ ಪ್ರಯೋಜನ ಪಡೆಯಲು ಪ್ರತಿ ತಿಂಗಳು ನೋಂದಾಯಿಸಬೇಕೆ?
ಯುವನಿಧಿ ಯೋಜನೆಯಡಿ ಒಮ್ಮೆ ಮಾತ್ರ ನೋಂದಾಯಿಸಿಕೊಂಡು ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಉದ್ಯೋಗದ ಸ್ಥಿತಿಯ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳತಕ್ಕದ್ದು.
ಪ್ರತಿ ತಿಂಗಳು 25ನೇ ತಾರೀಖು ಅಥವಾ ಅದಕ್ಕಿಂತ ಮೊದಲು ನಿರುದ್ಯೋಗಿ ಆಗಿರುವ ಕುರಿತು ಘೋಷಣೆ ಮಾಡದಿದ್ದಲ್ಲಿ ಏನಾಗುತ್ತದೆ?
ಪ್ರತಿ ತಿಂಗಳು ಘೋಷಣೆ ಮಾಡದಿದ್ದಲ್ಲಿ 90 ದಿನಗಳ ನಂತರ ನಿಷ್ಕ್ರಿಯಗೊಳಿಸಲಾಗುವುದು.
ಯೋಜನೆಗೆ ನೋಂದಾಯಿಸುವಾಗ ಶುಲ್ಕ ಪಾವತಿಸಬೇಕೆ?
ಇಲ್ಲ. ಇದು ಉಚಿತ ಸೇವೆಯಾಗಿರುತ್ತದೆ.
ಈ ಯೋಜನೆಗೆ ನೋಂದಾಯಿಸಲು ಕೊನೆಯ ದಿನಾಂಕ ಯಾವಾಗ?
ಅಭ್ಯರ್ಥಿಗಳು ಪದವಿ/ಡಿಪ್ಲೊಮಾ 2023 ರಲ್ಲಿ ತೇರ್ಗಡೆಯಾದ ನಂತರದಿಂದ ಅರ್ಜಿ ಸಲ್ಲಿಸಲು 2 ವರ್ಷದವರೆಗೆ ಅರ್ಹರಿರುತ್ತಾರೆ.
ನೋಂದಣಿ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ?
ಅರ್ಜಿದಾರರು ಸಮರ್ಪಕವಾಗಿ ಅರ್ಜಿ ಸಲ್ಲಿಸಿದ ಅಂತಿಮ ಹಂತದಲ್ಲಿ ಸ್ವಯಂಚಾಲಿತವಾಗಿ ಸ್ವೀಕೃತಿಯು ಸೃಜಿಸುತ್ತದೆ. ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು.
ಎನ್.ಎ.ಡಿ (NAD- National Academic Depository) ಎಂದರೇನು?
ಎನ್.ಎ.ಡಿ ಎಂಬುದು ನಿರಂತರವಾಗಿ 24/7 ಆನ್‌ಲೈನ್ ಸೇವೆ ನೀಡುವ ಶೈಕ್ಷಣಿಕ ದತ್ತಾಂಶಗಳಾದ ಪ್ರಮಾಣ ಪತ್ರಗಳು, ಡಿಪ್ಲೊಮಾಗಳ, ಪದವಿಗಳ, ಅಂಕಪಟ್ಟಿಗಳ ಇತ್ಯಾದಿಗಳ ಮಾಹಿತಿ ಕಣಜವಾಗಿದ್ದು, ಶೈಕ್ಷಣಿಕ ಸಂಸ್ಧೆಗಳು/ ಮಂಡಳಿಗಳು/ ಅರ್ಹ ಮೌಲ್ಯಂಕನ ಸಂಸ್ಧೆಗಳು ಅಧಿಕೃತವಾಗಿ ಡಿಜಿಟಲೀಕರಣ ಮಾಡಿ ಶೇಖರಿಸಿರುವ ದತ್ತಾಂಶವಾಗಿರುತ್ತದೆ. NAD ಸಂಸ್ಧೆಯು ಅಭ್ಯರ್ಥಿಗಳಿಗೆ ಸರಳವಾಗಿ ಶೈಕ್ಷಣಿಕ ಮಾಹಿತಿಯು ಲಭಿಸುವಂತೆ ಮಾಡುವುದಲ್ಲದೇ ಮೌಲೀಕರಿಸಿ, ದತ್ತಾಂಶವನ್ನು ನೈಜ್ಯಗೊಳಿಸಿ ಸಂರಕ್ಷಿಸಿರುತ್ತದೆ.
ಯುವನಿಧಿ ಯೋಜನೆಗೆ NAD ಸಂಸ್ಧೆಯು ಹೇಗೆ ಸಂಬಂಧಿತವಾಗಿರುತ್ತದೆ?
ಕರ್ನಾಟಕ ರಾಜ್ಯದ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಒಂದೇ ಮೂಲದಲ್ಲಿ ನಿರಂತರವಾಗಿ ಶೈಕ್ಷಣಿಕವಾಗಿ ದತ್ತಾಂಶವನ್ನು ಒದಗಿಸುವ NAD ಸಂಸ್ಧೆಯು ಯುವನಿಧಿ ಯೋಜನೆಯ ಫಲಾನುಭವಿಗಳ ದಾಖಲಾತಿಗಳ/ಪ್ರಮಾಣ ಪತ್ರಗಳ ನೈಜತೆಗಳನ್ನು ಪರಿಶೀಲಿಸಲು ಅನುವು ಮಾಡುವ ಪ್ರಕ್ರಿಯೆಯಾಗಿರುತ್ತದೆ.
ಯುವನಿಧಿ ಯೋಜನೆಗೆ ಯಾವ ಯಾವ ಶೈಕ್ಷಣಿಕ ದಾಖಲಾತಿಗಳ ಅವಶ್ಯಕತೆಗಳು ಇರುತ್ತವೆ?
ಪದವೀಧರರಾಗಿದ್ದಲ್ಲಿ ಅವರ ಎಸ್‌ಎಸ್‌ಎಲ್‌ಸಿ/ಪಿಯುಸಿ ಮತ್ತು ಪದವಿ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಡಿಪ್ಲೊಮಾ ತೇರ್ಗಡೆಯಾಗಿದ್ದಲ್ಲಿ ಎಸ್‌ಎಸ್‌ಎಲ್‌ಸಿ/ಪಿಯುಸಿ ಮತ್ತು ಡಿಪ್ಲೊಮಾ ಶೈಕ್ಷಣಿಕ ಪ್ರಮಾಣ ಪತ್ರಗಳ ಅವಶ್ಯಕತೆ ಇರುತ್ತದೆ. ಇದನ್ನೂ ಓದಿ: ಕಾಂಗ್ರೆಸ್‍ನ ಮಾಜಿ ಶಾಸಕ ಸೇರಿ, 8 ಮಂದಿಯಿಂದ ಅತ್ಯಾಚಾರ – ಕೇಸ್ ದಾಖಲು
ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಎಂದರೇನು? (PDC)
ಅಭ್ಯರ್ಥಿಯು ಆಯಾ ವಿಶ್ವವಿದ್ಯಾನಿಲಯಗಳಿಂದ ಪದವಿ ತೇರ್ಗಡೆಯಾದ ನಂತರ ನೀಡುವ ತಾತ್ಕಾಲಿಕ ಪದವಿ ಪ್ರಮಾಣ ಪತ್ರವಾಗಿರುತ್ತದೆ. ಹಾಗೆಯೇ ಡಿಪ್ಲೊಮಾ ತೇರ್ಗಡೆಯಾದ ನಂತರವೂ ತಾತ್ಕಾಲಿಕ ಡಿಪ್ಲೊಮಾ ಪ್ರಮಾಣ ಪತ್ರವನ್ನು ಆಯಾ ಶೈಕ್ಷಣಿಕ ಸಂಸ್ಧೆಗಳು/ಮಂಡಳಿಗಳು ವಿತರಿಸುವ ಪ್ರಮಾಣ ಪತ್ರವಾಗಿರುತ್ತದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಶೈಕ್ಷಣಿಕ ಪ್ರಮಾಣ ಪತ್ರವನ್ನು ನಾನು ಪಡೆದಿರಬೇಕು?
ಅಭ್ಯರ್ಥಿಗಳು ಆಯಾ ವಿಶ್ವವಿದ್ಯಾನಿಲಯಗಳಿಂದ ನೀಡಿದ ಪದವಿ ಪ್ರಮಾಣ ಪತ್ರ ಹಾಗೂ ನೋಂದಣಿ ಸಂಖ್ಯೆ ಮತ್ತು ಡಿಪ್ಲೊಮಾ ಕಾಲೇಜು/ಮಂಡಳಿಯಿಂದ ನೀಡಿರುವಂತಹ ಪ್ರಮಾಣಪತ್ರ ಹಾಗೂ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಬೇಕಾಗಿರುತ್ತದೆ.
ವಿಶ್ವವಿದ್ಯಾನಿಲಯ ನೋಂದಣಿ ಸಂಖ್ಯೆ (University Registration Number) ಎಂದರೇನು?
ವಿಶ್ವವಿದ್ಯಾನಿಲಯ ನೋಂದಣಿ ಸಂಖ್ಯೆ ಎಂದರೆ ಆಯಾ ಅಭ್ಯರ್ಥಿಗಳು ಶೈಕ್ಷಣಿಕ ಸಂಸ್ಧೆಗೆ/ವಿಶ್ವವಿದ್ಯಾನಿಲಯಗಳ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆದ ನಂತರ ನೀಡುವ ವಿಶೇಷ ನೋಂದಣಿ ಸಂಖ್ಯೆಯಾಗಿರುತ್ತದೆ.
ಎಲ್ಲಿ ನನಗೆ ವಿಶ್ವವಿದ್ಯಾನಿಲಯದ ನೋಂದಣಿ ಸಂಖ್ಯೆ ಲಭಿಸುತ್ತದೆ?
ವಿಶ್ವವಿದ್ಯಾನಿಲಯಗಳು/ಶೈಕ್ಷಣಿಕ ಸಂಸ್ಧೆಗಳು/ಮಂಡಳಿಗಳು ಅಭ್ಯರ್ಥಿಗಳಿಗೆ ನೀಡುವ ಪದವಿ/ಡಿಪ್ಲೊಮಾ/ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳ ಮೇಲೆ ನಮೂದಿಸಿರುವ ಸಂಖ್ಯೆಯು ಲಭ್ಯವಿರುತ್ತದೆ.
NAD ಪೋರ್ಟಲ್‌ನಲ್ಲಿ ನನ್ನ ಪ್ರಮಾಣ ಪತ್ರಗಳು (ದಾಖಲೆಗಳು) ಲಭ್ಯವಿದೆಯೇ ಎಂಬುದನ್ನು ತಿಳಿಯುವುದು ಹೇಗೆ?
ಅರ್ಜಿದಾರರು NAD portal ಜಾಲತಾಣ https://nad.karnataka.gov.in ರಲ್ಲಿ ವಿಶ್ವವಿದ್ಯಾನಿಲಯಗಳು/ ಶೈಕ್ಷಣಿಕ ಸಂಸ್ಧೆಗಳು/ ಮಂಡಳಿಗಳು ಪ್ರವೇಶಾತಿ ಸಂದರ್ಭದಲ್ಲಿ ನೀಡುವ ಪದವಿ/ ಡಿಪ್ಲೊಮಾ/ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳ ಮೇಲೆ ನಮೂದಿಸಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ದತ್ತಾಂಶವು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದು.
ಒಂದು ವೇಳೆ ನನ್ನ ಪ್ರಮಾಣ ಪತ್ರಗಳು NAD portal ನಲ್ಲಿ ಲಭ್ಯವಿಲ್ಲದಿದ್ದಲ್ಲಿ ಏನು ಮಾಡಬೇಕು?
ಅಭ್ಯರ್ಥಿಗಳು ಅವರಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳಿಗೆ/ ಶೈಕ್ಷಣಿಕ ಸಂಸ್ಧೆಗಳಿಗೆ/ ಮಂಡಳಿಗೆ ಸಂಪರ್ಕಿಸಿ ಇಂದೀಕರಿಸುವಂತೆ ಕೋರುವುದು.
ನನಗೆ ವಿಶ್ವವಿದ್ಯಾನಿಲಯವು ಭೌತಿಕ ಪ್ರಮಾಣ ಪತ್ರಗಳನ್ನು/ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು ನೀಡದಿದ್ದಲ್ಲಿ ಎಲ್ಲಿ ಪಡೆಯಬಹುದು?
ಅಭ್ಯರ್ಥಿಗಳು ದಾಖಲೆಗಳನ್ನು ಪಡೆಯಲು DigiLocker portal ಜಾಲತಾಣ https://accounts.digilocker.gov.in/signup/smart_v2 ದಲ್ಲಿ ಲಾಗಿನ್ ಆಗಿ ಡಿಜಿಟೀಕರಿಸಿದ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಯುವನಿಧಿ ಯೋಜನೆಗೆ ನಾನು ಯಾವಾಗ ಅರ್ಜಿ ಸಲ್ಲಿಸಬೇಕು?
ಅರ್ಜಿದಾರರು ಅವರ ಪದವಿ/ ಡಿಪ್ಲೋಮಾ ತೇರ್ಗಡೆಯಾಗಿ ಫಲಿತಾಂಶ ಬಂದ ನಂತರ (2022-23 ಶೈಕ್ಷಣಿಕ ವರ್ಷ ಮತ್ತು 2023 ಫಲಿತಾಂಶ ತೇರ್ಗಡೆ ವರ್ಷ) ಅರ್ಜಿಸಲ್ಲಿಸಬಹುದು ಆದರೆ ಪದವಿ/ ಡಿಪ್ಲೊಮಾ ತೇರ್ಗಡೆಯಾದ 180 ದಿವಸಗಳ ನಂತರ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರು. ಇದನ್ನೂ ಓದಿ: ದೆಹಲಿಗೆ ಹೋಗಿರುವ ಕುರಿತು ಜಗದೀಶ್ ಶೆಟ್ಟರ್ ಸ್ಪಷ್ಟನೆ
ಯುವನಿಧಿ ಯೋಜನೆಯಲ್ಲಿ ನಾನು ಅರ್ಹನಾಗುವ ಮುಂಚೆ ಯಾವ ದಿನಾಂಕವನ್ನು ಲೆಕ್ಕಚಾರ ಮಾಡಿ 180 ದಿವಸಗಳೆಂದು ಪರಿಗಣಿಸಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹತೆ ಬರುತ್ತದೆ?
ಅಭ್ಯರ್ಥಿಗಳು ತಮ್ಮ ಪದವಿ/ ಡಿಪ್ಲೊಮಾ ಫಲಿತಾಂಶ ಪ್ರಕಟವಾದ ದಿನದಿಂದ 180 ದಿವಸಗಳವರೆಗೆ ಅಥವಾ ನಂತರವೂ ಅರ್ಜಿಸಲ್ಲಿಸಲು ಅರ್ಹರಿರುತ್ತಾರೆ. ಆದರೆ ಫಲಿತಾಂಶ ಪ್ರಕಟವಾಗಿ 180 ದಿವಸಗಳ ಅವಧಿಯನ್ನು ಪೂರೈಸಿದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಾಗುತ್ತಾರೆ.
ನನ್ನ ವಿಶ್ವವಿದ್ಯಾನಿಲಯವು ಇಲ್ಲಿಯವರೆಗೆ ಪದವಿ/ ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ನೀಡಿರುವುದಿಲ್ಲ. ನಾನು ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು DigiLocker portal ಖಾತೆಯಲ್ಲಿ ಪಡೆಯಬಹುದೇ?
ಹೌದು, ಅಭ್ಯರ್ಥಿಗಳು ಅವರುಗಳ ಪದವಿ/ ಡಿಪ್ಲೊಮಾ/ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು DigiLocker ಖಾತೆಯಲ್ಲಿ ಪಡೆಯಬಹುದು.
ಯುವನಿಧಿ ಯೋಜನೆಗೆ ಕೇವಲ ಕರ್ನಾಟಕದ ಶೈಕ್ಷಣಿಕ ಸಂಸ್ಧೆಗಳನ್ನು ಪರಿಗಣಿಸಲಾಗಿದಯೇ?
ಹೌದು, ಈ ಯೋಜನೆಯು ಕರ್ನಾಟಕದ ನಿರುದ್ಯೋಗ ಯುವಕ, ಯುವತಿಯರಿಗೆ ಸೀಮಿತಗೊಳಿಸಿರುವುದಲ್ಲದೇ ಯುವನಿಧಿ ಅರ್ಜಿ ನಮೂನೆಯಲ್ಲಿ ಕರ್ನಾಟಕದ ಶೈಕ್ಷಣಿಕ ಸಂಸ್ಧೆಗಳ ದತ್ತಾಂಶವನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ದಾಖಲಿಸಲಾಗಿರುತ್ತದೆ.
ನನ್ನ ಪದವಿ/ ಡಿಪ್ಲೊಮಾ/ ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ಫಲಿತಾಂಶ ಪ್ರಕಟಿತ ದಿನಾಂಕದ ಆಧಾರದನ್ವಯ 180 ದಿವಸಗಳೊಳಗೆ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ. ನಾನು ಕೂಡ ಅರ್ಹನೇ?
ಅರ್ಜಿದಾರರು ಯುವನಿಧಿ ಯೋಜನೆಯಲ್ಲಿ ಅರ್ಜಿಸಲ್ಲಿಸಲು 2 ವರ್ಷದವರೆವಿಗೂ ತಮ್ಮ ಪದವಿ/ ಡಿಪ್ಲೊಮಾ ಫಲಿತಾಂಶದ ನಂತರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಯಾವಾಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೋ ಹಾಗೂ ಅಂತಹವರಿಗೆ 2 ವರ್ಷಕ್ಕೆ ಸೀಮಿತವಾಗಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ.
ಯುವನಿಧಿ ಯೋಜನೆಗೆ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದೇ?
ಇಲ್ಲ, ಅರ್ಜಿದಾರರು 2022-23 ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾಗಿದ್ದಲ್ಲಿ ಮಾತ್ರ ಅರ್ಹರು.