Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Explainer | Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

Explainer

Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

Public TV
Last updated: June 22, 2025 6:43 pm
Public TV
Share
5 Min Read
SHARE

– ಬ್ಲ್ಯಾಕ್‌ಬಾಕ್ಸ್‌ ಕಿತ್ತಳೆ ಬಣ್ಣದಲ್ಲಿರುತ್ತೆ ಯಾಕೆ?
– ನದಿ, ಸಮುದ್ರದಲ್ಲಿ ಬಿದ್ದರೆ ಸಿಗುತ್ತಾ?

ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂ.12 ರಂದು ಸಂಭವಿಸಿದ ಏರ್‌ ಇಂಡಿಯಾ ಬೋಯಿಂಗ್‌ 787 ಡ್ರೀಮ್‌ಲೈನರ್‌ ವಿಮಾನ ಅಪಘಾತವು (Ahmedabad Plane Crash) ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು. ಭೀಕರ ಅಪಘಾತಕ್ಕೆ 270 ಮಂದಿ ಬಲಿಯಾದರು. ಈ ಘೋರ ವಿಮಾನ ದುರಂತದ ಬಳಿಕ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ‘ಬ್ಲ್ಯಾಕ್‌ಬಾಕ್ಸ್’ (Blackbox).‌ ಹುಡುಕಾಟದಲ್ಲಿದ್ದ 2 ಕಪ್ಪು ಪೆಟ್ಟಿಗೆಗಳು ಕೊನೆಗೂ ಸಿಕ್ಕಿವೆ. ಈಗ ಎಲ್ಲರ ಚಿತ್ತವೂ ಆ ಬಾಕ್ಸ್‌ಗಳ ಕಡೆ ನೆಟ್ಟಿದೆ.

ಅಷ್ಟಕ್ಕೂ ಏನಿದು ಬ್ಲ್ಯಾಕ್‌ಬಾಕ್ಸ್?‌ ವಿಮಾನಗಳಿಗೆ ಇದು ಏಕೆ ಮುಖ್ಯ? ಇವುಗಳ ಪ್ರಾಮುಖ್ಯತೆ ಏನು? ಅಹಮದಾಬಾದ್‌ ಏರ್‌ ಇಂಡಿಯಾ ದುರಂತದ ಹೊತ್ತಲ್ಲಿ ಇದರ ಬಗ್ಗೆ ಚರ್ಚೆ ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇಲ್ಲಿದೆ ನೋಡಿ ವಿವರ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

Air India Bird Hit Ahmedabad Plane Crash

ಏನಿದು ಬ್ಲ್ಯಾಕ್‌ಬಾಕ್ಸ್‌?
ಬ್ಲ್ಯಾಕ್‌ಬಾಕ್ಸ್‌ ಎಂದರೆ, ವಿಮಾನ ಹಾರಾಟ ಸಂದರ್ಭದಲ್ಲಿನ ರೆಕಾರ್ಡರ್‌. ವಿಮಾನದಲ್ಲಿ ಫ್ಲೈಟ್‌ ಡೇಟಾ ರೆಕಾರ್ಡರ್‌ ಮತ್ತು ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ಎಂಬ ಸಾಧನಗಳಿರುತ್ತವೆ. ಇದು ಕಿತ್ತಳೆ ಬಣ್ಣದಲ್ಲಿರುತ್ತದೆ.

ಫ್ಲೈಟ್ ಡೇಟಾ ರೆಕಾರ್ಡರ್
ಅಪಘಾತಕ್ಕೂ ಮೊದಲು ವಿಮಾನದ ವೇಗ, ಎತ್ತರ, ಎಂಜಿನ್ ಕಾರ್ಯಕ್ಷಮತೆ, ಮಾರ್ಗನಕ್ಷೆ ಮತ್ತು ಹಾರಾಟ ನಿಯಂತ್ರಣ ಚಲನೆ ಸೇರಿದಂತೆ ಎಲ್ಲಾ ತಾಂತ್ರಿಕ ವಿವರವನ್ನು ಈ ಸಾಧನ ದಾಖಲಿಸುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ ಹಾಗೂ 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್
ಇದು ಪೈಲಟ್‌ಗಳ ನಡುವಿನ ಸಂಭಾಷಣೆಗಳು, ಅಲಾರಾಂಗಳು ಮತ್ತು ಸುತ್ತುವರಿದ ಶಬ್ದಗಳನ್ನು ಒಳಗೊಂಡಂತೆ ಕಾಕ್‌ಪಿಟ್‌ನಿಂದ ಆಡಿಯೊವನ್ನು ರೆಕಾರ್ಡ್ ಮಾಡುತ್ತದೆ. ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದಲ್ಲಿನ ಧ್ವನಿಯನ್ನು ದಾಖಲಿಸುತ್ತದೆ.

Ahmedabad Plane Crash 1 1

ಬ್ಲ್ಯಾಕ್‌ಬಾಕ್ಸ್‌ ಪರಿಚಯಿಸಿದ್ದು ಯಾವಾಗ?
1950 ರ ದಶಕದ ಆರಂಭದಲ್ಲಿ ಬ್ಲ್ಯಾಕ್‌ಬಾಕ್ಸ್‌ ಪರಿಚಯಿಸಲಾಯಿತು.

ಪರಿಚಯಿಸಿದ್ದು ಯಾರು?
ರೆಕಾರ್ಡ್ ಮಾಡುವ ಸಾಧ್ಯತೆಯ ಬಗ್ಗೆ ಡೇವಿಡ್ ವಾರೆನ್‌ಗೆ ಇದ್ದ ಆಸಕ್ತಿಯೇ ವಿಶ್ವದ ಮೊದಲ ಫ್ಲೈಟ್ ರೆಕಾರ್ಡರ್ ಅಥವಾ ‘ಬ್ಲ್ಯಾಕ್‌ಬಾಕ್ಸ್’ ಆವಿಷ್ಕಾರಕ್ಕೆ ಕಾರಣವಾಯಿತು. ಡೇವಿಡ್ ವಾರೆನ್ ಮೆಲ್ಬೋರ್ನ್‌ನಲ್ಲಿರುವ ಏರೋನಾಟಿಕಲ್ ರಿಸರ್ಚ್ ಲ್ಯಾಬೊರೇಟರಿ (ARL)ಯಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದರು.

1953: ಜನರಲ್ ಮಿಲ್ಸ್ ಮೊದಲ FDR (ಫ್ಲೈಟ್‌ ಡೇಟಾ ರೆಕಾರ್ಡರ್) ಅನ್ನು ಲಾಕ್‌ಹೀಡ್ ಏರ್‌ಕ್ರಾಫ್ಟ್ ಕಂಪನಿಗೆ ಮಾರಾಟ ಮಾಡಿದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

1954: ಆಸ್ಟ್ರೇಲಿಯಾದ ಡೇವಿಡ್ ರೊನಾಲ್ಡ್ ಡಿ ಮೇ ವಾರೆನ್ ವಿಮಾನ ಅಪಘಾತವನ್ನು ತನಿಖೆ ಮಾಡುವಾಗ ವಿಶ್ವದ ಮೊದಲ ಎಫ್‌ಡಿಆರ್ ಅನ್ನು ಕಂಡುಹಿಡಿದರು. 1953 ರಲ್ಲಿ, ಜೆಟ್ ಇಂಧನ ತಜ್ಞ ವಾರೆನ್, ವಿಶ್ವದ ಮೊದಲ ವಾಣಿಜ್ಯ ಜೆಟ್ ವಿಮಾನವಾದ ಡಿ ಹ್ಯಾವಿಲ್ಯಾಂಡ್ ಕಾಮೆಟ್ ಅಪಘಾತನಗಳನ್ನು ವಿಶ್ಲೇಷಿಸುವ ವಿಶೇಷ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದರು. ತರುವಾಯ, ವಿಮಾನ ಅಪಘಾತಗಳ ವಿಶ್ಲೇಷಣೆಯಲ್ಲಿ ರೆಕಾರ್ಡಿಂಗ್‌ಗಳು ಸಹಾಯಕವಾಗುವಂತೆ ಅವರು ಎಫ್‌ಡಿಆರ್ ಅನ್ನು ಕಂಡುಹಿಡಿದರು.

pm modi visits plane crash site ahmedabad

ಬ್ಲ್ಯಾಕ್‌ಬಾಕ್ಸ್‌ಗೆ ಕಿತ್ತಳೆ ಬಣ್ಣ ಯಾಕೆ?
ಅಪಘಾತದ ಸ್ಥಳಗಳಲ್ಲಿ ಸುಲಭವಾಗಿ ಪತ್ತೆಹಚ್ಚಲು FDR ಗಳನ್ನು ಪ್ರಕಾಶಮಾನವಾದ ಕಿತ್ತಳೆ ಅಥವಾ ಹಳದಿ ಬಣ್ಣದಿಂದ ರೂಪಿಸಲಾಗಿದೆ.

FDR ಮತ್ತು CVR ಹೇಗೆ ಕೆಲಸ ಮಾಡುತ್ತವೆ?
FDR ಮತ್ತು CVR ಎರಡೂ ಸಾಧನಗಳು ಯಾವಾಗಲೂ ಹಾರಾಟದ ಸಮಯದಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. FDR ತಾಂತ್ರಿಕ ಮತ್ತು ಕಾರ್ಯಕ್ಷಮತೆಯ ಮೆಟ್ರಿಕ್‌ಗಳನ್ನು ದಾಖಲಿಸುತ್ತದೆ, ಆದರೆ CVR ಕಾಕ್‌ಪಿಟ್ ಒಳಗೆ ಧ್ವನಿಯನ್ನು ದಾಖಲಿಸುತ್ತದೆ. ಅಪಘಾತದ ಸಂದರ್ಭದಲ್ಲಿ, ಅಪಘಾತಕ್ಕೆ ಕಾರಣವಾಗುವ ಕ್ಷಣಗಳಲ್ಲಿ ಯಾಂತ್ರಿಕವಾಗಿ ಮತ್ತು ಸಿಬ್ಬಂದಿ ನಡುವಿನ ಸಂಭಾಷಣೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಇದು ನೆರವಾಗುತ್ತದೆ.

ವಿಮಾನದಲ್ಲಿ ಎಲ್ಲಿ ಇಡುತ್ತಾರೆ?
5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಭದ್ರತೆಯ ದೃಷ್ಟಿಯಿಂದ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಇದು ಹೊಂದಿದೆ. ತೀವ್ರ ಶಾಖ, ಶೀತವನ್ನೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

ಹಿಂಭಾಗದಲ್ಲಿ ಯಾಕೆ?
ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

black box 2

ಬ್ಲ್ಯಾಕ್‌ಬಾಕ್ಸ್‌ ರೂಪಿಸಿದ್ದೇಕೆ?
1953-54ರ ಅವಧಿಯಲ್ಲಿ ವಿಮಾನ ಅಪಘಾತಗಳು ಹೆಚ್ಚುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತಿವೆ ಎಂಬುದನ್ನು ಪತ್ತೆಹಚ್ಚಲು ಮತ್ತು ಮುಂದೆ ಅಪಘಾತಗಳನ್ನು ತಪ್ಪಿಸಲು ಬ್ಲ್ಯಾಕ್‌ಬಾಕ್ಸ್‌ ರೂಪಿಸಲಾಯಿತು.

1953ರ ವಿಮಾನ ದುರಂತ
1953ರ ಮೇ 2 ರಂದು BOAC ಫ್ಲೈಟ್ 783, ಗುಡುಗು ಸಹಿತ ತೀವ್ರ ಮಳೆಯ ನಡುವೆ 43 ಪ್ರಯಾಣಿಕರು ಮತ್ತು ಸಿಬ್ಬಂದಿ ಹೊತ್ತು ಕೋಲ್ಕತ್ತಾದಿಂದ ದೆಹಲಿಗೆ ಹೊರಟಿತು. ಟೇಕ್ ಆಫ್ ಆದ ಆರು ನಿಮಿಷಗಳ ನಂತರ 7,500 ಅಡಿ ಎತ್ತರಕ್ಕೆ ಏರುವಾಗ ವಿಮಾನದಲ್ಲಿಯೇ ಬಿರುಕು ಬಿಟ್ಟು ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

ವಿರೋಧ
ಆರಂಭದಲ್ಲಿ ಬ್ಲ್ಯಾಕ್‌ಬಾಕ್ಸ್ ಕಲ್ಪನೆಗೆ ಪ್ರತಿರೋಧ ವ್ಯಕ್ತವಾಗಿತ್ತು. ಸಿಬ್ಬಂದಿಯ ಮೇಲೆ ಕಣ್ಣಿಡಲು ಅದರಲ್ಲಿನ ರೆಕಾರ್ಡರ್‌ಗಳನ್ನು ಬಳಸಲಾಗುವುದು ಎಂದು ಪೈಲಟ್‌ಗಳು ದೂರಿದ್ದರು. ಆದಾಗ್ಯೂ, 1956 ರ ಹೊತ್ತಿಗೆ ವಾರೆನ್ ARL ಫ್ಲೈಟ್ ಮೆಮೊರಿ ಯುನಿಟ್ ಎಂಬ ಹೆಸರಿನ ಒಂದು ಮೂಲಮಾದರಿಯನ್ನು ರಚಿಸಿದರು. ಇದು ನಾಲ್ಕು ಗಂಟೆಗಳವರೆಗೆ ಧ್ವನಿ ಮತ್ತು ವಿಮಾನ ಹಾರಾಟದ ಸಂದರ್ಭದಲ್ಲಿನ ಡೇಟಾವನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿತು.

black box data cloud orig

ಮೊದಲು ಅಳವಡಿಸಿಕೊಂಡ ದೇಶ ಯಾವುದು?
1963 ರಲ್ಲಿ ಎರಡು ಭೀಕರ ವಿಮಾನ ಅಪಘಾತಗಳು ಸಂಭವಿಸಿದವು. ಆಗ ಆಸ್ಟ್ರೇಲಿಯಾ ವಿಮಾನಗಳಲ್ಲಿ ಫ್ಲೈಟ್ ರೆಕಾರ್ಡರ್‌ಗಳನ್ನು ಕಡ್ಡಾಯ ಮಾಡಿತು. ಕಾನೂನಾತ್ಮಕವಾಗಿ ಅದನ್ನು ಕಡ್ಡಾಯಗೊಳಿಸಿದ ಮೊದಲು ದೇಶವಾಗಿ ಹೊರಹೊಮ್ಮಿತು. ಕಡ್ಡಾಯ ಕಾನೂನು ಅವಶ್ಯಕತೆಯನ್ನಾಗಿ ಮಾಡಿದ ಮೊದಲ ದೇಶವಾಯಿತು.

ನದಿ, ಸಮುದ್ರದಲ್ಲಿ ಬಿದ್ದರೆ ಪತ್ತೆ ಹೇಗೆ?
ವಿಮಾನಗಳು ಜಲಮೂಲಗಳಲ್ಲಿ ಪತನಗೊಂಡ ಪ್ರಕರಣಗಳು ನಡೆದಿವೆ. ಕಪ್ಪು ಪೆಟ್ಟಿಗೆಗಳು ನೀರಿನ ಅಡಿಯಲ್ಲಿ ಇರುವ ಸಂದರ್ಭಗಳಲ್ಲಿ ಪತ್ತೆಹಚ್ಚಲು, ಅವುಗಳಿಗೆ 30 ದಿನಗಳವರೆಗೆ ಅಲ್ಟ್ರಾಸೌಂಡ್ ಸಂಕೇತಗಳನ್ನು ಕಳುಹಿಸುವ ಬೀಕನ್ ಅಳವಡಿಸಲಾಗಿರುತ್ತದೆ.

TAGGED:Ahmedabad Plane Crashblack boxBlackboxgujaratಅಹಮದಾಬಾದ್‌ ವಿಮಾನ ದುರಂತಗುಜರಾತ್ಬ್ಲ್ಯಾಕ್‌ಬಾಕ್ಸ್‌
Share This Article
Facebook Whatsapp Whatsapp Telegram

Cinema news

Wild Life Safari
ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
Cinema Latest Sandalwood Top Stories
kicchana chappale ashwini gowda dhruvanth
Bigg Boss ಸೀಸನ್‌ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್‌
Cinema Latest Top Stories TV Shows
Monalisa Bhosle
ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್‌ ಕದ್ದ ಮೊನಾಲಿಸಾ!
Bollywood Cinema Latest National Top Stories
Niveditha Gowda
ಕಡಲ ಅಲೆಯಲ್ಲಿ ಗುಲಾಬಿ ದಳದಂತೆ ತೇಲಿದ ನಿವೇದಿತಾ!
Cinema Latest Sandalwood Top Stories

You Might Also Like

chitradurga accident
Chitradurga

ಚಿತ್ರದುರ್ಗ| ಕಾರು-ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿ; ನಾಲ್ವರು ದುರ್ಮರಣ

Public TV
By Public TV
3 hours ago
Harmanpreet Kaur Nat Sciver Brunt
Cricket

ಬ್ರಂಟ್‌-ಹರ್ಮನ್‌ಪ್ರೀತ್‌ ಸ್ಫೋಟಕ ಫಿಫ್ಟಿ ಆಟ; ಡೆಲ್ಲಿ ವಿರುದ್ಧ ಮುಂಬೈಗೆ 50 ರನ್‌ಗಳ ಭರ್ಜರಿ ಜಯ

Public TV
By Public TV
4 hours ago
Karwar Suicide
Crime

ಪ್ರೀತಿ ಹೆಸರಲ್ಲಿ JDS ಮುಖಂಡೆ ಪುತ್ರನಿಂದ ಕಿರುಕುಳ – ಯುವತಿ ಆತ್ಮಹತ್ಯೆ

Public TV
By Public TV
4 hours ago
Mississippi shooting
Latest

ಅಮೆರಿಕದ ಮಿಸಿಸಿಪ್ಪಿಯಲ್ಲಿ ಸರಣಿ ಗುಂಡಿನ ದಾಳಿಗೆ 6 ಮಂದಿ ಬಲಿ

Public TV
By Public TV
4 hours ago
BENGALURU WEATHER
Bengaluru City

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 24 ಗಂಟೆ ಶೀತಗಾಳಿ ಎಚ್ಚರಿಕೆ

Public TV
By Public TV
5 hours ago
gadag Lakkundi
Districts

ಐತಿಹಾಸಿಕ ಲಕ್ಕುಂಡಿಯಲ್ಲಿ ಅಂದಾಜು 1 ಕೆ.ಜಿ ಚಿನ್ನಾಭರಣಗಳ ನಿಧಿ ಪತ್ತೆ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?