ಕೊಪ್ಪಳ: ಸರ್ಕಾರಿ ಕೆಲಸ ಪಡೆಯೋದು ತುಂಬಾ ಕಷ್ಟ ಅಂತಾರೆ. ಆದ್ರೆ ಕೊಪ್ಪಳದ ಅಂಧ ವ್ಯಕ್ತಿ ಪ್ರಭುರಾಜ್ ಮಾತ್ರ ಒಂದೇ ವರ್ಷದಲ್ಲಿ 3 ಪರೀಕ್ಷೆಗಳಲ್ಲಿ ಪಾಸಾಗಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ.
ಕೊಪ್ಪಳದ ಭಾಗ್ಯನಗರದ ನಿವಾಸಿಯಾಗಿರೋ ಪ್ರಭುರಾಜ್ ಎತ್ತಿನಮನಿ ಅವರು ಹುಟ್ಟಿನಿಂದಲೇ ಶೇಕಡ 80ರಷ್ಟು ಅಂಧತ್ವ ಹೊಂದಿದ್ದಾರೆ. ಆದ್ರೂ ಅವರು ಸಾಧನೆಯ ಛಲ ಬಿಡಲಿಲ್ಲ. ನಿರಂತರ ಅಧ್ಯಯನದ ಮೂಲಕ ಡಿ.ಎಡ್ ಓದಿರೋ ಪ್ರಭುರಾಜ್, 2013ರಲ್ಲಿ ನಡೆದ ಟಿಇಟಿ, ಎಫ್‍ಡಿಎ, ಎಸ್‍ಡಿಎ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇದೀಗ ಕೊಪ್ಪಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಪ್ರಭುರಾಜ್ ಅವರ ಎಲ್ಲಾ ಪರೀಕ್ಷೆಗಳಲ್ಲಿ ಅಕ್ಕನ ಮಗಳು ಮಧುಶ್ರೀ ಸಹಾಯಕ್ಕೆ ನಿಂತರೆ, ಸಂಬಂಧಿ ಪ್ರಶಾಂತ್ ಎಂಬವರು ಸ್ಪರ್ಧಾತ್ಮಕ ಪರೀಕ್ಷೆ ಕಟ್ಟೋಕೆ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರಭುರಾಜ್ ಅವರಿಗೆ ಮದುವೆ ಆಗಿತ್ತು. ಆದ್ರೆ ಅಂಧ ಅಂತ ಪತ್ನಿ ಬಿಟ್ಟು ಹೋಗಿದ್ದಾರೆ.
Advertisement
ಕಣ್ಣಿದ್ದವರೂ ಪರೀಕ್ಷೆಗಳಲ್ಲಿ ಪಾಸಾಗಲು ಕಷ್ಟಪಡುವಂತಿರುವಾಗ, ಒಂದಲ್ಲ ಎರಡಲ್ಲ ಮೂರು ಹುದ್ದೆಗೆ ಆಯ್ಕೆಯಾಗಿರೋ ಪ್ರಭುರಾಜ್ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
Advertisement
https://www.youtube.com/watch?v=U09j4aZCkKs