ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸಿರುವ ಮೂರನೇ ವರ್ಷದ ವಿದ್ಯಾಪೀಠ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಶುಕ್ರವಾರ ಚರ್ಚಾ ಸ್ಪರ್ಧೆ ನಡೆಯಲಿದೆ.
ನಾಳೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಚರ್ಚಾ ಸ್ಪರ್ಧೆಯ ಮೊದಲ ಸುತ್ತು ನಡೆಯಲಿದೆ. ಶನಿವಾರ ಮಧ್ಯಾಹ್ನ 2 ರಿಂದ 3:30ರವರೆಗೆ ಪೇಟಿಂಗ್ ಸ್ಪರ್ಧೆ ನಡೆಯಲಿದೆ. ಈ ಅವಧಿಯಲ್ಲೇ ಕ್ವಿಜ್ ಲಿಖಿತ ಪರೀಕ್ಷೆ ಸಹ ನಡೆಯಲಿದೆ. ಶನಿವಾರವೇ ಚರ್ಚಾ ಸ್ಪರ್ಧೆಯ ಅಂತಿಮ ಸುತ್ತು ಮಧ್ಯಾಹ್ನ 3:30 ರಿಂದ 5 ಗಂಟೆಯವರೆಗೆ ನಡೆಯಲಿದೆ.
Advertisement
Advertisement
ಭಾನುವಾರ ಮಧ್ಯಾಹ್ನ 2:30 ರಿಂದ 3:30ರವರೆಗೆ ಕ್ವಿಜ್ ಫೈನಲ್ ನಡೆಯಲಿದ್ದು, 3:30 ರಿಂದ 4:30ರವರೆಗೆ ಗಾಯನ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಗುತ್ತದೆ.
Advertisement
11 ಮತ್ತು 12 ರಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಪ್ರದರ್ಶನ ಮಾಡಲಿದ್ದಾರೆ. ಈ ಎಲ್ಲ ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು, 17 ರಿಂದ 22 ವರ್ಷ ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. 95389 77753 (ಅಕ್ಷಯ್), 99000 30944 (ನಿತಿನ್) ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿದು ಹೆಸರನ್ನು ನೊಂದಾಯಿಸಿಕೊಳ್ಳಬಹುದು.
Advertisement
ಬೆಂಗಳೂರು ನಗರದಲ್ಲಿರುವ ಅರಮನೆ ಮೈದಾನದಲ್ಲಿ ಮೇ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಮೂರನೇ ವರ್ಷದ ವಿದ್ಯಾಪೀಠ ಕಾರ್ಯಕ್ರಮ ನಡೆಯಲಿದೆ. ಈ ಹಿಂದಿನ ಎರಡು ಕಾರ್ಯಕ್ರಮ 2 ದಿನಗಳ ಕಾಲ ನಡೆದಿತ್ತು. ಎರಡು ದಿನಕ್ಕೆ ಭಾರೀ ಸ್ಪಂದನೆ ಸಿಕ್ಕಿದ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ವಿದ್ಯಾಪೀಠ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಯಾರೆಲ್ಲ ಭಾಗವಹಿಸುತ್ತಾರೆ?
ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್, ಆರ್ಕಿಟೆಕ್ಚರ್, ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್, ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಸಮೂಹ ಸಂವಹನ, ಎಂಬಿಎ ಇನ್‍ಸ್ಟಿಟ್ಯೂಷನ್, ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು.
ಯಾರೆಲ್ಲ ಆಗಮಿಸಬಹುದು?
ಕೌನ್ಸೆಲರ್ ಗಳು, ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪಿಯುಸಿ ವಿದ್ಯಾರ್ಥಿಗಳು, ಪದವಿ ಓದುತ್ತಿರುವ ವಿದ್ಯರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.
ದಿನಾಂಕ : ಮೇ 10, 11, 12
ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ