ಬೆಂಗಳೂರು: ಕಾಡುಗೋಡಿಯ ತಾಯಿ-ಮಗು ದುರಂತ ಅಂತ್ಯ ಫುಟ್‍ಪಾತ್‍ಗಳಲ್ಲಿ (FootPath) ಓಡಾಡೋದು ಎಷ್ಟು ಸೇಫ್ ಎನ್ನುವ ಪ್ರಶ್ನೆ ಎದ್ದಿತ್ತು. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ನಿಮ್ಮ ಪಬ್ಲಿಕ್ ಟಿವಿ ನಗರದ ಡೇಂಜರಸ್ ಟ್ರಾನ್ಸ್ ಫಾರ್ಮ್, ಡೇಂಜರಸ್ ವೈರ್ ಬಗ್ಗೆ ಮೆಗಾ ರಿಯಾಲಿಟಿ ಚೆಕ್ ಮಾಡಿತ್ತು. ಇದಕ್ಕೆ ದೊಡ್ಡ ಇಂಪ್ಯಾಕ್ಟ್ ಸಿಕ್ಕಿದ್ದು, ಸುದ್ದಿ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಸ್ಕಾಂ ಸ್ಪಂದಿಸಿದೆ.
Advertisement
ತಿಂಗಳುಗಟ್ಟಲೇ ಡೇಂಜರಸ್ ಸ್ಥಿತಿಯಲ್ಲಿದ್ದ ಟ್ರಾನ್ಸ್ ಫಾರಂಗೆ ಪುನರ್ ಜೀವ ಕೊಡುವ ಕೆಲಸವಾಗಿದೆ. ಇದಕ್ಕೆ ಕಾರಣವಾಗಿದ್ದು ನಿಮ್ಮ ಪಬ್ಲಿಕ್ ಟಿವಿ ವರದಿ. ಪಬ್ಲಿಕ್ಸ್‍ಗಾಗಿ ಪಬ್ಲಿಕ್ ಟಿವಿ ಡೇಂಜರಸ್ ಸ್ಪಾಟ್ ಎಕ್ಸ್ ಪೋಸ್ ಮಾಡಿತ್ತು. ನಗರದ ನಂದಿದುರ್ಗ ರೋಡ್, ಮಲ್ಲೇಶ್ವರ, ರಾಜಾಜಿನಗರ, ವಸಂತನಗರ ಸೇರಿ ಹಲವು ಕಡೆ ಡೇಂಜರಸ್ ವೈರ್ ರಿಯಾಲಿಟಿ ಚೆಕ್ ಮಾಡಿದ್ದ ಪಬ್ಲಿಕ್ ಟಿವಿ ವರದಿಯನ್ನ ಬೆಸ್ಕಾಂ ಅನುಸರಿಸಿ ದುರಸ್ಥಿ ಕೆಲಸ ಮಾಡಿದೆ. ಪಬ್ಲಿಕ್ ಟಿವಿ (PUBLiC TV) ತೋರಿಸಿದ ಪ್ರತಿಯೊಂದು ಡೇಂಜರಸ್ ಜಾಗಗಳಲ್ಲಿ ಎಕ್ಸ್ ಪ್ರೆಸ್ ವೇಗದಲ್ಲಿ ದುರಸ್ತಿ ಕಾರ್ಯ ಮಾಡಿ ಮುಗಿಸಿದೆ. ಪಬ್ಲಿಕ್ ಟಿವಿ ಸಮಾಜಮುಖಿ ಮೆಗಾ ರಿಯಾಲಿಟಿ ಚೆಕ್‍ಗೆ ಪಬ್ಲಿಕ್ಸ್ ಜೈಹೋ ಎಂದಿದ್ದಾರೆ.
Advertisement
Advertisement
ರಾಜಾಜಿನಗರ 6ನೇ ಬ್ಲಾಕ್‍ನ ಬಸ್‍ಸ್ಟಾಪ್ ಮುಂಭಾಗದ ವಿದ್ಯುತ್ ಕಂಬದಿಂದ ಕರೆಂಟ್ ಜೋತು ಬಿದ್ದಿತ್ತು. 4 ವೈರ್ ಗಳು ಜೋತು ಬಿದ್ದಿದ್ದು ಬಸ್‍ಗಳಿಗೆ ತಾಕುವ ರೀತಿಯಲ್ಲಿ ಇತ್ತು. ಪಬ್ಲಿಕ್ ಟಿವಿ ಮೆಗಾ ರಿಯಾಲಿಟಿ ಚೆಕ್ (Reality Check) ಮಾಡಿದ ಮೇಲೆ ವೈರ್ ಸರಿಪಡಿಸಿದೆ. ವಿದ್ಯುತ್ ವೈರ್ ಗಳ ಮೇಲೆ ಮರದ ಕೊಂಬೆ ಬಿದ್ರೆ ಕೆಳಗೆ ಬೀಳೋ ಸ್ಥಿತಿಯಲ್ಲಿತ್ತು. ಆದರೆ ಪಬ್ಲಿಕ್ ಟಿವಿ ವರದಿ ಬಳಿಕ ದುರಸ್ಥಿ ಕಾರ್ಯ ಮಾಡಲಾಗಿದೆ.
Advertisement
ನಗರದಲ್ಲಿನ ಅವ್ಯವಸ್ಥೆಯ ವಿಸ್ತೃತ ಸುದ್ದಿ ನಂತರ ಒಂದೇ ದಿನದಲ್ಲಿ ಸಂಪೂರ್ಣ ದುರಸ್ಥಿ ಕಾರ್ಯವನ್ನ ಬೆಸ್ಕಾಂ ಮುಗಿಸಿದೆ. ಇದು ಇಲ್ಲಿಗೆ ಮುಗಿಯದೇ ಎಲ್ಲಾ ಅವ್ಯವಸ್ಥೆಗಳನ್ನೂ ಸರಿಪಡಿಸಿ, ಮಾನಿಟರಿಂಗ್ ಮಾಡುವ ಕೆಲಸವನ್ನ ಬೆಸ್ಕಾಂ ನಿರಂತರವಾಗಿ ಮುನ್ನಡೆಸಬೇಕಿದೆ