ಬೆಂಗಳೂರು: ಬೆಂಗಳೂರು ಪ್ರೆಸ್‌ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ ಪಬ್ಲಿಕ್ ಟಿವಿಯ ಮೇರಿ ಆಯ್ಕೆಯಾಗಿದ್ದಾರೆ.
ಮೇರಿ ಅವರಿಗೆ ಪತ್ರಿಕಾರಂಗದಲ್ಲಿ 20 ವರ್ಷಕ್ಕೂ ಹೆಚ್ಚು ಅನುಭವವಿದೆ. ಪಬ್ಲಿಕ್ ಟಿವಿಯಲ್ಲಿ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ 31 ರಂದು ಸಿಎಂ ಸಿದ್ದರಾಮಯ್ಯ ಪ್ರೆಸ್ ಕ್ಲಬ್ ಆವರಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪ್ರಶಸ್ತಿಗೆ ಭಾಜನರಾದ ಮೇರಿಗೆ ಪಬ್ಲಿಕ್ ಟಿವಿ ಬಳಗದಿಂದ ಅಭಿನಂದನೆ ಸಲ್ಲಿಸಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದವರು:
ಮೃತ್ಯುಂಜಯ ಎನ್.ಹೆಚ್, ನಂಜುಂಡೇಗೌಡ ಹೆಚ್.ಜೆ, ಲೋಚನೇಶ್ ಹುಗಾರ್, ಗುರುಮೂರ್ತಿ ಎಂ.ಎನ್, ನಂಜುಂಡಪ್ಪ ವಿ., ನಾಗರಾಜ ಎಂ., ನವೀನ್ ಕುಮಾರ್ ಅಮ್ಮೆಂಬಳ, ಅರವಿಂದ್ ಎಸ್, ರಾಮಚಂದ್ರ ಬಿ.ಎಸ್, ಬಸವರಾಜ್ ಬಿ, ಶಿವರುದ್ರಪ್ಪ ಡಿ.ಎಸ್, ಶ್ರೀನಾಥ ಬಿ.ವಿ, ಮಲ್ಲಿಕಾ ಚರಣ್‌ವಾಡಿ ಕೆ, ಮುನಿರಾಮೇಗೌಡ (ರವಿ), ಮುರಳಿ ಕುಮಾರ್ ಕೆ, ಸುಭಾಶ್‌ಚಂದ್ರ ಎನ್.ಎಸ್, ಶ್ರೀನಿವಾಸಮೂರ್ತಿ ಟಿ.ಸಿ, ರಮೇಶ್ ಕುಮಾರ್ ನಾಯ್ಕ್, ವಾಸು ಮೂರ್ತಿ ಸಿ, ಸಂತೋಷ್ ಕುಮಾರ್ ಆರ್.ಬಿ, ವೆಂಕಟೇಶ್ ಎಂ. ರಾವ್, ಆನಂದ್ ಪಿ. ಬೈದನಮನೆ, ಕೀರ್ತಿ ಪ್ರಸಾದ್ ಎಂ., ಮಂಜುನಾಥ ಆರ್. (ಕೆರೆ ಮಂಜು), ಜೆಕ್ರಿಯಾ ಕೆ.ಎಂ, ಅನಿಲ್ ಕುಮಾರ್ ರಾಜೇ ಅರಸ್ ಎ.ಸಿ, ಆಂತೋನಿ ಎ. ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ, ಮಾರುತಿ ಹೆಚ್.

