ಬೆಂಗಳೂರು: ಇದೇ ಶನಿವಾರ ಹಾಗೂ ಭಾನುವಾರ ಪಬ್ಲಿಕ್ ಟಿವಿಯ (PUBLIC TV) ಎಜ್ಯುಕೇಷನ್ ಎಕ್ಸ್‌ಪೋ (Education Expo) ಬೆಂಗಳೂರಿನ (Bengaluru) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.
ಇದು ಪಬ್ಲಿಕ್ ಟಿವಿ ಆಯೋಜಿಸುತ್ತಿರುವ 8ನೇ ಆವೃತ್ತಿಯ ಶೈಕ್ಷಣಿಕ ಮೇಳವಾಗಿದೆ. ಈ ವಿದ್ಯಾಪೀಠದಲ್ಲಿ (Vidhyapeeta) ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಲಿದ್ದು, ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಫ್ರೀ ಎಂಟ್ರಿ ಇರಲಿದ್ದು, ಈ ಶೈಕ್ಷಣಿಕ ಮೇಳವೂ ಹಲವು ವಿಶೇಷತೆಗಳನ್ನು ಹೊಂದಿದೆ. ಎಕ್ಸ್‌ಪೋದ ಮೊದಲ ದಿನ ಬೆಳಗ್ಗೆ 9ರಿಂದ 10.30ರವರೆಗೆ ರಿಜಿಸ್ಟ್ರೇಷನ್ ಆದ ಒಬ್ಬ ವಿದ್ಯಾರ್ಥಿಗೆ ಲಕ್ಕಿಡಿಪ್ ಮೂಲಕ ಸಮಾರಂಭದ ನಂತರ ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲುವ ಅವಕಾಶವಿದೆ.
ಜೊತೆಗೆ ಎರಡು ದಿನವೂ ಮೇಳದಲ್ಲಿ ರಿಜಿಸ್ಟ್ರೇಷನ್ ಮಾಡಿದ ವಿದ್ಯಾರ್ಥಿಗಳಿಗೆ ಒಂದು ಗಂಟೆಗೊಮ್ಮೆ ಲಕ್ಕಿಡಿಪ್ ಮೂಲಕ ಸ್ಪಾಟ್‌ನಲ್ಲೇ ಬೈಸಿಕಲ್ ಬಹುಮಾನವಾಗಿ ಸಿಗಲಿದೆ. ಅಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ರಿಜಿಸ್ಟ್ರೇಷನ್ ಮಾಡಿದರೇ ಸಪ್ರೈಸ್ ಗಿಫ್ಟ್ ಸಿಗಲಿದೆ.
ಈ ಎಕ್ಸ್ಪೋದಲ್ಲಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದ್ದು, ತಪ್ಪದೇ ಪಬ್ಲಿಕ್ ಟಿವಿ ಎಜ್ಯುಕೇಷನ್ ಎಕ್ಸ್‌ಪೋಗೆ ಭೇಟಿ ನೀಡಿ.