– ತಾರೆಯರ ಕಲರವದೊಂದಿಗೆ ಮೆಗಾ ಎಕ್ಸ್‌ಪೋಗೆ ತೆರೆ
– ಕೊನೆಯ ದಿನವು ಸಾವಿರಾರು ಸಂಖ್ಯೆಯಲ್ಲಿ ಎಕ್ಸ್‌ಪೋಗೆ ಹರಿದು ಬಂತು ವಿದ್ಯಾರ್ಥಿ ಸಮೂಹ
ಬೆಂಗಳೂರು: ಪಬ್ಲಿಕ್ ಟಿವಿ (PublicTV) ಪ್ರಸ್ತುತಪಡಿಸಿದ ವಿದ್ಯಾಪೀಠ 7ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ (Vidhya Peeta Education Expo) ಯಶಸ್ವಿ ತೆರೆ ಬಿದ್ದಿದೆ. ಎರಡನೇ ದಿನ ಕೂಡ ಉತ್ತಮ ಜನ ಬೆಂಬಲ ಸಿಕ್ಕಿದ್ದು, ಎರಡನೇ ದಿನ ಸ್ಟಾರ್ ಕಲರವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ.
ಬೆಳಗ್ಗೆ 9 ಗಂಟೆಗೆ ಆರಂಭವಾದ ಎಕ್ಸ್‌ಪೋಗೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬರುವಿಕೆ ಆರಂಭವಾಯಿತು. ಸಮಯ ಕಳೆದು ಬಿಸಿಲು ಏರಿಕೆಯಾದರೂ, ಜನರ ಬರುವಿಕೆ ಮಾತ್ರ ಇಳಿಕೆ ಕಾಣಲೇ ಇಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಸ್ಟಾಲ್‌ಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಗಳನ್ನ ಪಡೆದುಕೊಂಡರು. ನಿನ್ನೆ ಮೊದಲ ದಿನ 4 ಸಾವಿರ, ಎರಡನೇ ದಿನ 6 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿ ಎಕ್ಸ್‌ಪೋ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು. ಅಷ್ಟೇ ಅಲ್ಲದೆ ಎಕ್ಸ್‌ಪೋದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಆಯೋಜಿಸಿದ್ದ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿ ರಂಜಿಸಿದರು. ಇದೇ ವೇಳೆ ಎಕ್ಸ್‌ಪೋ ಆಯೋಜನೆ ಸಂಬಂಧ ಪೋಷಕರು ಮಾತನಾಡಿ ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಎಜುಕೇಶನ್ ಎಕ್ಸ್‌ಪೋದಲ್ಲಿ ಹರ್ಷಿಕಾ ಪೂಣಚ್ಚ
ಎಕ್ಸ್‌ಪೋ ಕೊನೆಯ ದಿನದ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಕ್ಸ್‌ಪೋದ ಲಕ್ಕಿ ಡಿಪ್ ವಿನ್ನರ್‌ಗಳಿಗೆ ಈ ಇಬ್ಬರು ಕಲಾವಿದರು ಗಿಫ್ಟ್ ನೀಡಿ ಶುಭ ಕೋರಿದರು. ಬಳಿಕ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಪಬ್ಲಿಕ್ ಟಿವಿ ಅದ್ಬುತ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ನಮ್ಮ ವಿದ್ಯಾಭ್ಯಾಸದ ಸಂದರ್ಭಗಳಲ್ಲಿ ಈ ರೀತಿಯ ಅವಕಾಶಗಳು ಇರಲಿಲ್ಲ. ಈಗ ಇಂತಹ ಸದಾವಕಾಶವನ್ನ ವಿದ್ಯಾರ್ಥಿಗಳು ಬಳಸಿಕೊಂಡು, ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪಬ್ಲಿಕ್ ಟಿವಿ ಸಿಓಓ ಹರೀಶ್ ಕುಮಾರ್ ಅವರು ಕೂಡ ಸಂತಸ ವ್ಯಕ್ತಪಡಿಸಿದರು. ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಅದ್ಬುತವಾದಂತಹ ರೆಸ್ಪಾನ್ಸ್ ವ್ಯಕ್ತವಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ನಾನಾ ಭಾಗಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು. ಇದನ್ನೂ ಓದಿ: ಇಂದು ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಕೊನೆಯ ದಿನ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ