– ಶೈಕ್ಷಣಿಕ ಮೇಳಕ್ಕೆ ಹರಿದು ಬಂತು ವಿದ್ಯಾರ್ಥಿ, ಪೋಷಕರ ಸಮೂಹ
ಬೆಂಗಳೂರು: `ಪಬ್ಲಿಕ್ ಟಿವಿ’ ಪ್ರಸ್ತುತ ವಿದ್ಯಾಪೀಠ (Vidyapeeta) 8ನೇ ಆವೃತ್ತಿಯ ಎಜುಕೇಶನ್ ಎಕ್ಸ್‌ಪೋ (Education Expo) ಉತ್ತಮ ಪ್ರತಿಕ್ರಿಯೆಯೊಂದಿಗೆ ಶುರುವಾಗಿದೆ. ಮೊದಲ ದಿನವೇ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಜ್ಞಾನಾರ್ಜನೆ ಪಡೆದುಕೊಂಡರು. ಅಷ್ಟೇ ಅಲ್ಲ, ಲ್ಯಾಪ್ ಟಾಪ್, ಬೈಸಿಕಲ್ ಬಂಪರ್ ಬಹುಮಾನವನ್ನು ಬಾಚಿಕೊಂಡರು.
`ಪಬ್ಲಿಕ್ ಟಿವಿ’ (PUBLiC TV) ಹೆಮ್ಮೆಯ ಪ್ರಸ್ತುತಿ ವಿದ್ಯಾಪೀಠ 8ನೇ ಆವೃತಿ ಭರ್ಜರಿಯಾಗಿ ಪ್ರಾರಂಭವಾಗಿದೆ. ಮೊದಲ ದಿನವೇ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು 4.5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಜ್ಞಾನಾರ್ಜನೆ ಪಡೆದುಕೊಂಡರು. 120ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಬಂದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ದಾರಿ ದೀಪವಾದವು. ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಎಕ್ಸ್‌ಪೋಗೆ ಆಗಮಿಸಿದ್ದು ವಿಶೇಷವಾಗಿತ್ತು.
ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ ಅವರು ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾರ್ಡನ್ ಸಿಟಿ ಯೂನಿವರ್ಸಿಟಿ ಚಾನ್ಸಲರ್ ಡಾ.ವಿ.ಜೆ.ಜೋಸೆಫ್, ರಾಮಯ್ಯ ಯೂನಿವರ್ಸಿಟಿ ಅಪ್ಲೈಡ್ ಸೈನ್ಸ್ ವಿಸಿ ಡಾ.ಕುಲದೀಪ್ ಕುಮಾರ್ ರೈನಾ, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಷನ್ ಚೇರ್ಮನ್ ಡಾ.ಡಿಕೆ ಮೋಹನ್, ರೇವಾ ವಿವಿಯ ಚಾನ್ಸಲರ್ ಡಾ.ಪಿ ಶ್ಯಾಮರಾಜ್ ಉದ್ಘಾಟನೆ ಮಾಡಿದರು. ಬಳಿಕ ವಿದ್ಯಾಪೀಠ ಕಾರ್ಯಕ್ರಮದ ಗುರಿಯ ಬಗ್ಗೆ ರಂಗನಾಥ್ ಮಾತನಾಡಿದರು. ಗಣ್ಯರು ವಿದ್ಯಾಪೀಠ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ದಿನದ ಎಕ್ಸ್‌ಪೋನಲ್ಲಿ ಸಿಇಟಿ, ಕಾಮೆಡ್-ಕೆ ಕುರಿತು ಉಪನ್ಯಾಸ ನಡೆಯಿತು. ಸಿಇಟಿ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಹೆಚ್ ಪ್ರಸನ್ನ ಮತ್ತು ಕಾಮೆಡ್-ಕೆ ಪ್ರಕ್ರಿಯೆ ಬಗ್ಗೆ ಡಾ.ಕುಮಾರ್ ಅವರು ಮಾಹಿತಿ ನೀಡಿದರು. ಡಾ.ಯುವರಾಜು ಬಿ.ಎನ್ ಸೈಬರ್ ಸೆಕ್ಯೂರಿಟಿ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾಪೀಠ ಕಾರ್ಯಕ್ರಮದಲ್ಲಿ ಕಾಲೇಜುಗಳ ಮಾಹಿತಿ ಜೊತೆ ಬಂಪರ್ ಗಿಫ್ಟ್ ಕೂಡಾ ವಿದ್ಯಾರ್ಥಿಗಳ ಪಾಲಾಯಿತು. ಜೀನಿ ಪ್ರಾಯೋಜಕತ್ವದಲ್ಲಿ ಪ್ರತಿ ಒಂದು ಗಂಟೆಗೆ ಒಂದು ಬೈಸಿಕಲ್ ಮತ್ತು ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯದ ಕಡೆಯಿಂದ ಎರಡು ದಿನಗಳಲ್ಲಿ 3 ಲ್ಯಾಪ್‌ಟಾಪ್ ಬಂಪರ್ ಗಿಫ್ಟ್ ಕೊಡಲಾಗುತ್ತಿದೆ. ಮೊದಲ ದಿನ 6 ವಿದ್ಯಾರ್ಥಿಗಳು ಬಂಪರ್ ಬೈಸಿಕಲ್ ಪಡೆದರೇ, ಇಬ್ಬರು ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಪಡೆದು ಅದೃಷ್ಟವಂತರಾದರು. ಚಿಕ್ಕಬಳ್ಳಾಪುರದ ಪ್ರಣವ್ ಯಾದವ್, ಮಧು ಶ್ರೀ, ಲ್ಯಾಪ್‌ಟಾಪ್ ಗೆದ್ದರೇ, ಹರ್ಷ, ಹೇಮಂತ್, ವರ್ಷಾ, ಮಿಥಿನ್, ಅನನ್ಯ ಮತ್ತು ಅನನ್ಯ ಎ ರಾಜ್ ಎಂಬ ವಿದ್ಯಾರ್ಥಿಗಳು ಬೈಸಿಕಲ್ ಪಡೆದು ಅದೃಷ್ಟಶಾಲಿಗಳಾದರು.
ಇದೇ ವೇಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ತಾಯಂದಿರು, ತಂದೆಯರಿಗೂ ಫನ್ ಗೇಮ್ ಆಡಿಸಲಾಯಿತು. ಫನ್‌ಗೇಮ್‌ನಲ್ಲಿ ಪೋಷಕರು, ವಿದ್ಯಾರ್ಥಿಗಳು ಸಂತೋಷದಿಂದ ಭಾಗವಹಿಸಿ ವಿಶೇಷ ಬಹುಮಾನವನ್ನು ಗೆದ್ದರು.
ನಾಳೆ ಕೂಡಾ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಕ್ಸ್‌ಪೋ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಹ್ಯಾಂಡ್‌ರೈಟಿಂಗ್ ಎಕ್ಸ್‌ಪರ್ಟ್ ಆಗಿರುವ ರಫೀಉಲ್ಲಾ ಬೇಗ್‌ರಿಂದ ಸ್ಪೆಷಲ್ ಸೆಮಿನಾರ್ ಮತ್ತು ಎಐ ಕುರಿತು ಡಾ. ಸಂಜಯ್ ಆರ್ ಚಿಟ್ನೀಸ್ ಅವರಿಂದ ಉಪನ್ಯಾಸ ಕೂಡಾ ನಡೆಯಲಿದೆ. ಇದಲ್ಲದೇ ಬೈಸಿಕಲ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಪ್ರವೇಶ ಉಚಿತವಿರಲಿದ್ದು, ಮಿಸ್ ಮಾಡದೇ ಬನ್ನಿ. ಇದನ್ನೂ ಓದಿ: Photo Gallery: ‘ಪಬ್ಲಿಕ್ ಟಿವಿ’ಯ ಮೆಗಾ ಶೈಕ್ಷಣಿಕ ಮೇಳಕ್ಕೆ ಬನ್ನಿ..