– ಅರಮನೆ ಮೈದಾನದಲ್ಲಿ 3 ದಿನ ಎಜುಕೇಷನ್ ಫೆಸ್ಟ್
– ಪೋಷಕರೇ, ಮಕ್ಕಳೇ ಬನ್ನಿ ಪಾಲ್ಗೊಳ್ಳಿ
ಬೆಂಗಳೂರು: ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಯಾವ ಕಾಲೇಜಿನಲ್ಲಿ ಶುಲ್ಕ ಎಷ್ಟಿರುತ್ತದೆ? ಇತ್ಯಾದಿ ಗೊಂದಲ ಪೋಷಕರಿಗೆ ಇದ್ದೆ ಇರುತ್ತದೆ. ಈ ಗೊಂದಲ ನಿವಾರಣೆಗಾಗಿ ನಿಮ್ಮ ಪಬ್ಲಿಕ್ ಟಿವಿ ಬೃಹತ್ ಶೈಕ್ಷಣಿಕ ಮೇಳವನ್ನು ಆಯೋಜನೆ ಮಾಡಿದೆ.
‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷ ವಾಕ್ಯವನ್ನು ಹೊಂದಿರುವ ವಿದ್ಯಾಪೀಠ ಕಾರ್ಯಕ್ರಮ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಇಂದಿನಿಂದ ಆರಂಭವಾಗಲಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮ ಶುಕ್ರವಾರದಿಂದ ಭಾನುವಾರದವರೆಗೆ ನಡೆಯಲಿದೆ.
Advertisement
Advertisement
ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿ ಪರ ಕೋರ್ಸ್ ಗಳ ಬಗ್ಗೆ ಒಂದೇ ಸೂರಿನಡಿ ಮಾಹಿತಿ ಸಿಗಲಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಲ್ಲದೇ, ಕಾಮರ್ಸ್, ಮ್ಯಾನೇಜ್‍ಮೆಂಟ್, ಅನಿಮೇಷನ್, ಮಾಧ್ಯಮ ಲೋಕಕ್ಕೆ ಬರುವ ವಿದ್ಯಾರ್ಥಿಗಳಿಗೂ ಮಾಹಿತಿ ಸಿಗುತ್ತೆ.
Advertisement
ಸಿಇಟಿ, ನೀಟ್ ಮತ್ತು ಔದ್ಯೋಗಿಕ ಕೋರ್ಸ್ ಗಳ ಬಗ್ಗೆ ಮಾಹಿತಿ ಸಿಗಲಿದ್ದು, 60ಕ್ಕೂ ಹೆಚ್ಚು ಪ್ರಖ್ಯಾತಿ ಪಡೆದಿರುವ ಕಾಲೇಜ್‍ಗಳು ಭಾಗವಹಿಸಲಿವೆ. ನುರಿತ ಶಿಕ್ಷಣ ತಜ್ಞರು, ಆರ್ಥಿಕ ಸಲಹೆಗಾರರು ಮಾಹಿತಿ ನೀಡಲಿದ್ದಾರೆ.
Advertisement
ಯಾರೆಲ್ಲ ಭಾಗವಹಿಸುತ್ತಾರೆ?
– ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್
– ಆರ್ಕಿಟೆಕ್ಚರ್
– ಕಾಮರ್ಸ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು
– ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು
– ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್
– ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
– ಸಮೂಹ ಸಂವಹನ
– ಎಂಬಿಎ ಇನ್‍ಸ್ಟಿಟ್ಯೂಷನ್
– ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು
ಯಾರೆಲ್ಲ ಆಗಮಿಸಬಹುದು?
– ಕೌನ್ಸೆಲರ್ ಗಳು
– ಶಿಕ್ಷಣ ತಜ್ಞರು
– ಹಣಕಾಸು ಸಲಹೆಗಾರರು
– ಪೋಷಕರು
– ಪಿಯುಸಿ ವಿದ್ಯಾರ್ಥಿಗಳು
– ಪದವಿ ಓದುತ್ತಿರುವ ವಿದ್ಯರ್ಥಿಗಳು
– ಉದ್ಯೋಗದಲ್ಲಿರುವ ಉದ್ಯೋಗಿಗಳು
ಸ್ಪರ್ಧೆಯ ಸಮಯ:
ಇಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಚರ್ಚಾ ಸ್ಪರ್ಧೆಯ ಮೊದಲ ಸುತ್ತು ನಡೆಯಲಿದೆ. ಶನಿವಾರ ಮಧ್ಯಾಹ್ನ 2 ರಿಂದ 3:30ರವರೆಗೆ ಪೇಟಿಂಗ್ ಸ್ಪರ್ಧೆ ನಡೆಯಲಿದೆ. ಈ ಅವಧಿಯಲ್ಲೇ ಕ್ವಿಜ್ ಲಿಖಿತ ಪರೀಕ್ಷೆ ಸಹ ನಡೆಯಲಿದೆ. ಶನಿವಾರವೇ ಚರ್ಚಾ ಸ್ಪರ್ಧೆಯ ಅಂತಿಮ ಸುತ್ತು ಮಧ್ಯಾಹ್ನ 3:30 ರಿಂದ 5 ಗಂಟೆಯವರೆಗೆ ನಡೆಯಲಿದೆ. ಭಾನುವಾರ ಮಧ್ಯಾಹ್ನ 2:30 ರಿಂದ 3:30ರವರೆಗೆ ಕ್ವಿಜ್ ಫೈನಲ್ ನಡೆಯಲಿದ್ದು, 3:30 ರಿಂದ 4:30ರವರೆಗೆ ಗಾಯನ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ನೇಳೆ ಮತ್ತು ನಾಡಿದ್ದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಪ್ರದರ್ಶನ ಮಾಡಲಿದ್ದಾರೆ.
ದಿನಾಂಕ : ಮೇ 10, 11, 12
ಸ್ಥಳ : ಗಾಯತ್ರಿ ವಿಹಾರ್, ಅರಮನೆ ಮೈದಾನ, ಬೆಂಗಳೂರು
ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆಯವರೆಗೆ