– ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್
– ಎಕ್ಸ್‌ಪೋ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಭಾಗಿ
– ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಬೆಂಗಳೂರು: ಪದವಿ ಮುಗಿತು, ಮುಂದೆ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು, ಮಾಸ್ಟರ್ಸ್ ಅನ್ನು ಯಾವ ಕಾಲೇಜಿನಲ್ಲಿ ಮಾಡಿದರೆ ಕೆಲಸಕ್ಕೆ ಒಳ್ಳೆಯದು, ಯಾವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ಉತ್ತಮ.. ಹೀಗೆ ಅನೇಕ ಪ್ರಶ್ನೆಗಳು ಈಗ ಪದವಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮೂಡುವುದು ಸಹಜ. ಅತಂಹ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಉತ್ತರ ಕೊಡಿಸುವುದಕ್ಕಾಗಿಯೇ ‘ಪಬ್ಲಿಕ್ ಟಿವಿ’ ಸ್ನಾತಕೋತರ ಪದವಿ ಶೈಕ್ಷಣಿಕ ಮೇಳವನ್ನ ಆಯೋಜನೆ ಮಾಡಿತ್ತು. ಎರಡು ದಿನಗಳ ಈ ಎಕ್ಸ್‌ಪೋಗೆ ಇಂದು (ಭಾನುವಾರ) ತೆರೆಬಿದ್ದಿದೆ.
Advertisement
ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗಾಗಿಯೇ ನಿಮ್ಮ ಪಬ್ಲಿಕ್ ಟಿವಿ, Ad6 ಸಹಯೋಗದೊಂದಿಗೆ ಎರಡು ದಿನಗಳ ಕಾಲ ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಶಾಲಾ ಮೈದಾನದಲ್ಲಿ ಮೆಗಾ ಎಜುಕೇಷನ್ ಎಕ್ಸ್‌ಪೋ (Education Expo) ಆಯೋಜನೆ ಮಾಡಿತ್ತು. ಒಂದೇ ಸೂರಿನಡಿ ರಾಜ್ಯದ ಪ್ರಸಿದ್ಧ 40 ಕ್ಕೂ ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಭಾಗಿಯಾಗಿದ್ದವು.
Advertisement
Advertisement
ನಿನ್ನೆ (ಶನಿವಾರ) ಬೆಳಗ್ಗೆ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ ವಿದ್ಯಾಮಂದಿರಕ್ಕೆ ಚಾಲನೆ ನೀಡಿದ್ದರು. ನಿನ್ನೆ ಸಂಜೆ 6 ರ ವರೆಗೆ ವಿದ್ಯಾರ್ಥಿಗಳು, ಪೋಷಕರು ವಿದ್ಯಾಮಂದಿರಕ್ಕೆ ಆಗಮಿಸಿ ತಮಲ್ಲಿದ್ದ ಅನೇಕ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಉತ್ತರ ಕಂಡೊಕೊಂಡಿದ್ದರು.
Advertisement
ಇಂದು ಭಾನುವಾರವಾಗಿದ್ದರಿಂದ ಬೆಳಗ್ಗೆ 9 ಗಂಟೆಯಿಂದಲೇ ಎಕ್ಸ್‌ಪೋ ಆರಂಭವಾಗಿತ್ತು. ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ತಮಗೆ ಬೇಕಾದ ಕಾಲೇಜಿನ ಮತ್ತು ಪಿಜಿ ಕೋರ್ಸ್‌ಗಳ ಮಾಹಿತಿಯನ್ನ ಪಡೆದುಕೊಂಡಿದ್ದರು. ಒಂದೇ ಜಾಗದಲ್ಲಿ ಇಷ್ಟೊಂದು ಕಾಲೇಜುಗಳು ಬಂದಿರೋದು ಬಹಳ ಉಪಯುಕ್ತವಾಗಿದೆ. ಯಾವ ಕೋರ್ಸ್ ಯಾವ ಕಾಲೇಜಿನಲ್ಲಿ ಮಾಡಬೇಕು ಎನ್ನುವುದನ್ನ ತಿಳಿದುಕೊಂಡೆವು. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಪಬ್ಲಿಕ್ ಟಿವಿ ಉತ್ತಮವಾದ ವೇದಿಕೆಯನ್ನ ಕಲ್ಪಸಿಕೊಟ್ಟಿದೆ ಎಂದು ವಿದ್ಯಾರ್ಥಿಗಳು ಖುಷಿ ಹಂಚಿಕೊಂಡರು.
ಸಂಜೆ ವಿದ್ಯಾಮಂದಿರದ ಸಮಾರೋಪ ಕಾರ್ಯಕ್ರಮಕ್ಕೆ ಮಲ್ಲೇಶ್ವರಂನ ಶಾಸಕ ಹಾಗೂ ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ್ ಆಗಮಿಸಿದ್ದರು. ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ ಭಾಗಿಯಾಗಿದ್ದ ವಿದ್ಯಾಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ವೇಳೆ ಮಾತನಾಡಿದ ಅವರು, ಪಬ್ಲಿಕ್ ಟಿವಿ ಉತ್ತಮವಾದ ಕಾರ್ಯಕ್ರಮವನ್ನ ಆಯೋಜನೆ ಮಾಡಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬೇಕು. ಭಾರತದಲ್ಲೇ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಮಲ್ಲೇಶ್ವರಂ ಕ್ಷೇತ್ರ ಹೆಸರುವಾಸಿಯಾಗಿದೆ. ಈ ವಿದ್ಯಾಮಂದಿರ ಕಾರ್ಯಕ್ರಮ ಅರ್ಥಪೂರ್ಣವಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಎರಡು ದಿನ ನಡೆದ ಪಬ್ಲಿಕ್ ಟಿವಿಯ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಆಗಮಿಸಿದ್ದರು. ಪಬ್ಲಿಕ್ ಟಿವಿಯ ವಿದ್ಯಾಮಂದಿರಕ್ಕೆ ಆಗಮಿಸದ್ದ ವಿದ್ಯಾರ್ಥಿಗಳಿಗೆ ಪಿಕ್ ಅಂಡ್ ಸ್ಪೀಕ್, ಚರ್ಚಾ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕ ಅಶ್ವಥ್ ನಾರಾಯಣ್ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ವಿದ್ಯಾಮಂದಿರದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದ Ad6 ಏಜೆನ್ಸಿಯನ್ನೂ ಗೌರವಿಸಿದರು.
ಎರಡು ದಿನ ನಡೆದ ಪಬ್ಲಿಕ್ ಟಿವಿಯ ವಿದ್ಯಾಮಂದಿರಕ್ಕೆ ಇಂದು ತೆರೆ ಬಿದ್ದಿದೆ. ಸಾವಿರಾರು ಮಕ್ಕಳು, ಪೋಷಕರು ವಿದ್ಯಾಮಂದಿರಕ್ಕೆ ಆಗಮಿಸಿ ತಮಗೆ ಬೇಕಾದ ಮಾಹಿತಿ ಪಡೆದುಕೊಂಡರು.
Web Stories