ʻಪಬ್ಲಿಕ್ ಟಿವಿʼ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ

Public TV
3 Min Read
Public TV Education

– ಹಲವು ಕೋರ್ಸ್‌ಗಳ ಬಗ್ಗೆ ಮಾಹಿತಿ, ಗೊಂದಲಗಳಿಗೆ ಪರಿಹಾರ ಕಂಡುಕೊಂಡ ವಿದ್ಯಾರ್ಥಿಗಳು, ಪೋಷಕರು

ಬೆಂಗಳೂರು: ʻಪಬ್ಲಿಕ್ ಟಿವಿʼ (Public TV) ಪ್ರಸ್ತುತ ಪಡಿಸುವ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಎರಡನೇ ದಿನವಾದ ಭಾನುವಾರವೂ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಪೋಷಕರು ಮೇಳಕ್ಕೆ ಭೇಟಿ ನೀಡಿ, ಡಿಗ್ರಿ ನಂತರ ಮುಂದೇನು? ಅನ್ನೋ ಗೊಂದಲಗಳಿಗೆ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ.

Public TV Education Expo 2

ʻಪಬ್ಲಿಕ್ ಟಿವಿʼ ಪ್ರಸ್ತುತಪಡಿಸುವ 3ನೇ ಆವೃತ್ತಿಯ, ವಿದ್ಯಾಮಂದಿರ ಮೆಗಾ ಪಿಜಿ ಶೈಕ್ಷಣಿಕ ಮೇಳಕ್ಕೆ (Vidhya Mandira PG Education Expo) ಭಾನುವಾರ ಅದ್ಧೂರಿ ತೆರೆ ಬಿದ್ದಿದೆ. ಮೊದಲ ದಿನದ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಆರಂಭವಾದ ಶೈಕ್ಷಣಿಕ ಮೇಳದಲ್ಲಿ 2ನೇ ದಿನವೂ ಸಾವಿರಾರು ವಿದ್ಯಾರ್ಥಿಗಳು (Bengaluru Students) ಭಾಗಿಯಾಗಿದ್ದರು. ಡಿಗ್ರಿ ಬಳಿಕ ಮುಂದೇನು..? ಯಾವ ಕೋರ್ಸ್ ಭವಿಷ್ಯವನ್ನ ರೂಪಿಸುತ್ತೆ? ಅನ್ನೋ ಹಲವು ಗೊಂದಲಗಳಿಗೆ ಪೋಷಕರು, ವಿದ್ಯಾರ್ಥಿಗಳು ಪರಿಹಾರ ಕಂಡುಕೊಂಡರು. ತಮಗಿಷ್ಟದ ಕೋರ್ಸ್‌ಗಳ ಬಗ್ಗೆ ತಿಳಿದುಕೊಂಡು, ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ಪಡೆದರು. ಇದನ್ನೂ ಓದಿ: ಮೈಸೂರು ದಸರಾ 2024| ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು

Public TV Education Expo 3

ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ಆವೃತ್ತಿಯ ಪಿಜಿ ಶೈಕ್ಷಣಿಕ ಮೇಳದಲ್ಲಿ 42ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗಿಯಾಗಿದ್ದವು. 2ನೇ ದಿನದ ಶೈಕ್ಷಣಿಕ ಮೇಳವು ಬೆಳಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆ ವೇಳೆಗೆ ಮುಕ್ತಾಯಗೊಂಡಿತು. ಭಾನುವಾರ ರಜಾದಿನದ ಹಿನ್ನೆಲೆ ವಿದ್ಯಾರ್ಥಿಗಳು, ಪೋಷಕರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ತಮಗೆ ಯಾವ ಕಾಲೇಜು ಸೂಕ್ತ? ಕೋರ್ಸ್, ಪ್ರವೇಶ ಶುಲ್ಕ ಹೇಗೆ? ಕೋರ್ಸ್ ಬಳಿಕ ಉದ್ಯೋಗಕಾವಕಾಶ ಹೇಗೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪಡೆದರು. ಪೋಷಕರು ಸಹ ತಮ್ಮ ಮಕ್ಕಳಿಗೆ ಯಾವ ಶಿಕ್ಷಣ ಸಂಸ್ಥೆಗಳು ಸೂಕ್ತ? ಅನ್ನೋ ಬಗ್ಗೆ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್

Public TV Education Expo 4

ಅದೃಷ್ಟಶಾಲಿಗಳಿಗೆ ಲಕ್ಕಿ ಡಿಪ್‌:
ಇದೇ ವೇಳೆ ಶೈಕ್ಷಣಿಕ ಮೇಳದಲ್ಲಿ ಭಾಗಿಯಾದ 14 ಅದೃಷ್ಟಶಾಲಿಗಳಿಗೆ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಚಿನ್ನದ ನಾಣ್ಯವಿರುವ ಗಿಫ್ಟ್‌ ಓಚರ್‌ಗಳನ್ನ ನೀಡಲಾಯಿತು. ಇ‌ನ್ನೂ ಮೇಳದಲ್ಲಿ ಭಾಗಿಯಾದ ಪೋಷಕರು ಕೂಡ ಮೇಳದ ಬಗ್ಗೆ ಸಂತಸ ಹಂಚಿಕೊಂಡರು. ಸಾಮಾನ್ಯವಾಗಿ ಡಿಗ್ರಿ ಬಳಿಕ ಸ್ನಾತಕೋತ್ತರ ಪದವಿಗಳಿಗೆ ಮಕ್ಕಳನ್ನ ಸೇರಿಸಲು ಹತ್ತಾರು ಕಾಲೇಜಗಳನ್ನ ಪೋಷಕರು ಸುತ್ತಬೇಕಾದ ಪರಿಸ್ಥಿತಿ ಇರ್ತಾ ಇತ್ತು. ಆದ್ರೆ ʻಪಬ್ಲಿಕ್ ಟಿವಿʼ ಈ ಕಷ್ಟವನ್ನ ತಪ್ಪಿಸಿ ಒಂದೇ ವೇದಿಕೆ ಅಡಿ ನೂರಾರು ಆಯ್ಕೆಗಳನ್ನ ನೀಡಿದೆ. ನಿಜಕ್ಕೂ ಇದು ಅದ್ಭುತ ಕಾರ್ಯಕ್ರಮ ಅಂತ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

publictv vidhyamandir scaled

ಇನ್ನೂ ಎರಡು ದಿನಗಳ ಮೇಳದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದ ಅನುಕೂಲವನ್ನ‌ ಪಡೆದುಕೊಂಡ್ರು. ಮೇಳದಲ್ಲಿ ಭಾಗಿಯಾದ ವಿದ್ಯಾಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇನ್ನೂ ಕಾರ್ಯಕ್ರಮದ ಆಯೋಜನೆ, ಜನರ ಪ್ರತಿಕ್ರಿಯೆಗೆ ಮೇಳದಲ್ಲಿ ಭಾಗಿಯಾದ ವಿದ್ಯಾಸಂಸ್ಥೆಗಳು ಕೂಡ ಹರ್ಷ ವ್ಯಕ್ತಪಡಿಸಿ, ಈ ರೀತಿಯ ಕಾರ್ಯಕ್ರಮ ಪೋಷಕರ ಒತ್ತಡ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನೂಕೂಲ ಆಗಲಿದೆ. ಕಾರ್ಯಕ್ರಮ ಆಯೋಜನೆ ಮಾಡಿದ ʻಪಬ್ಲಿಕ್ ಟಿವಿʼಗೆ ಧನ್ಯವಾದ ಅರ್ಪಿಸಿದರು.

PublicTV VidhyaMandir 2

ಒಟ್ಟಾರೆ ಎರಡು ದಿನದ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಕಾರ್ಯಕ್ರಮದ ಮೂಲಕ ಸಾವಿರಾರು ಪೋಷಕರು,‌ ವಿದ್ಯಾರ್ಥಿಗಳ‌ ಭವಿಷ್ಯದ ಕನಸಿನ ಗಿಡಕ್ಕೆ ನೀರೆರೆಯುವ ಪ್ರಯತ್ನ ಮಾಡಿದೆ.

Share This Article