ಬೆಂಗಳೂರು: ಶನಿವಾರ, ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಬ್ಲಿಕ್ ಟಿವಿ (PUBLiC TV) ವಿದ್ಯಾಪೀಠ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸೆಮಿನಾರ್‌ಗಳು (Seminar) ನಡೆಯಲಿದ್ದು ವಿದ್ಯಾರ್ಥಿಗಳು (Students) ಮತ್ತು ಪೋಷಕರು (Parennts) ಭಾಗವಹಿಸಿ ತಮ್ಮ ಅನುಮಾನಗಳನ್ನು ಬಗೆ ಹರಿಸಿಕೊಳ್ಳಬಹುದು.
ಯಾರು ಭಾಗವಹಿಸುತ್ತಾರೆ?
ಸಿಇಟಿ (CET) ಕುರಿತು ಸಮಗ್ರ ಮಾಹಿತಿ ಹಾಗೂ ಉಪನ್ಯಾಸ – ಹೆಚ್ ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕಾಮೆಡ್ ಕೆ (Comed K) ಕುರಿತು ಸಮಗ್ರ ಮಾಹಿತಿ ಹಾಗೂ ಉಪನ್ಯಾಸ: ಡಾ.ಎಸ್.ಕುಮಾರ್, ಕಾಮೆಡ್ ಕೆ ಕಾರ್ಯನಿರ್ವಹಕ ಕಾರ್ಯದರ್ಶಿ
ಸ್ಮಾರ್ಟ್ ಸ್ಟಡೀಸ್, ಇನ್‌ಫಾರ್ಮ್ಡ್ ಪೇರೆಂಟ್ಸ್, ಸೇಫ್ ಸಿಸ್ಟಂ ಸೈಬರ್ ಸೆಕ್ಯೂರಿಟಿ ಅವಾರ್ನೆಸ್ ಇನ್ ಎಜುಕೇಶನ್ – ಡಾ. ಯುವರಾಜು ಬಿಎನ್. ಪ್ರಾಂಶುಪಾಲರು, ಎಎಂಸಿ ಎಂಜಿನಿಯರಿಂಗ್ ಕಾಲೇಜು.
ಲ್ಯಾಪ್‌ಟಾಪ್ ಗೆಲ್ಲಿ
ಮೊದಲ ದಿನ ಬೆಳಗ್ಗೆ 9 ರಿಂದ 10:30 ರವರೆಗೆ ನೋಂದಣಿ ಮಾಡಿಸಿಕೊಂಡ ಒಬ್ಬ ವಿದ್ಯಾರ್ಥಿಗೆ ಲಕ್ಕಿ ಡಿಪ್ ಮೂಲಕ ಸಮಾರಂಭದ ನಂತರ ಸ್ಪಾಟ್‍ನಲ್ಲೇ ಲ್ಯಾಪ್ ಟಾಪ್ ಗೆಲ್ಲುವ ಅವಕಾಶವಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಈ ಶೈಕ್ಷಣಿಕ ಮೇಳ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶ ಇರಲಿದೆ. ಈ ಶೈಕ್ಷಣಿಕ ಮೇಳದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕೆಸೆಟ್, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ.
ಜೊತೆಗೆ 2 ದಿನವೂ ಮೇಳದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ 1 ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬೈಸಿಕಲ್ ಗಿಫ್ಟ್ ಸಿಗಲಿದೆ. ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ನೋಂದಣಿ ಮಾಡಿದರೆ ಸಪ್ರೈಸ್ ಗಿಫ್ಟ್ ಸಹ ಸಿಗಲಿದೆ.