ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್ ಪೋಗೆ ಇಂದು ಕೊನೆಯ ದಿನ. ಇಂದು ಕೂಡಾ ಅನೇಕ ವಿಶೇಷ ಕಾರ್ಯಕ್ರಮಗಳು, ಉಪನ್ಯಾಸಗಳು, ಮಾಹಿತಿಗಳು ಎಕ್ಸ್ ಪೋದಲ್ಲಿ ಇರಲಿದೆ. 80ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಒಂದೇ ಸೂರಿನಡಿ ಸಿಗಲಿವೆ.
Advertisement
ಬೆಳಗ್ಗೆ 10:30 ರಿಂದ 12 ಗಂಟೆವರೆಗೆ ಡಾ. ರಫೀವುಲ್ಲಾ ಬೇಗ್, Handwriting and Memory Expert ಅವರಿಂದ ‘Accelerate Your Career With Super Power Memory’ ಉಪನ್ಯಾಸ ಇರಲಿದೆ. ಮಧ್ಯಾಹ್ನ 12:00 ರಿಂದ 1 ಗಂಟೆವರೆಗೆ ಡಾ. ಸುಜಾತ ರಾಥೋಡ್ ರಿಂದ ನೀಟ್ ಕುರಿತು ಸೆಮಿನಾರ್ ಇರಲಿದೆ. ಮಧ್ಯಾಹ್ನ 02:30 ರಿಂದ 04:00ವರೆಗೆ Global Education Forum- Insights From NEX GEN Educationalist ಕುರಿತು ಉಪನ್ಯಾಸ ಕಾರ್ಯಕ್ರಮ ಇರಲಿದೆ.
Advertisement
ಶೈಕ್ಷಣಿಕ ಮಾಹಿತಿಗಳ ಜೊತೆಗೆ ಆಕರ್ಷಕ ಬಂಪರ್ ಬಹುಮಾನಗಳು ಇರಲಿದ್ದು, ವಿದ್ಯಾರ್ಥಿಗಳು 3 ಎಲೆಕ್ಟ್ರಿಕ್ ಬೈಕ್‌ಗಳನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಅವಕಾಶ ಇರಲಿದೆ. ಇದರೊಂದಿಗೆ 10 ಸೈಕಲ್‌ಗಳನ್ನು ಲಕ್ಕಿ ವಿದ್ಯಾರ್ಥಿಗಳು ಗೆಲ್ಲಲು ಅವಕಾಶ ಇದೆ.
Advertisement
Advertisement
ಇಷ್ಟೇ ಅಲ್ಲದೆ, ಸ್ಲೋ ಸೈಕ್ಲಿಂಗ್ ಕಾಂಪಿಟೇಷನ್, ಕ್ವಿಜ್ ಕಾರ್ಯಕ್ರಮ ಸೇರಿದಂತೆ ಫನ್ ಗೇಮ್ಸ್ ಇರಲಿವೆ. ಪ್ರತಿ ಅರ್ಧ ಗಂಟೆಗೆ ಒಮ್ಮೆ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಮೂಲಕ ವಿಶೇಷ ಆಕರ್ಷಕ ಬಹುಮಾನ ಸಿಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ಎಕ್ಸ್ ಪೋ ನಡೆಯಲಿದ್ದು, ಪ್ರವೇಶ ಉಚಿತ ಇರಲಿದೆ.