– 110 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ
– ಲಕ್ಕಿಡಿಪ್ ವಿಜೇತರಿಗೆ ಗೋಲ್ಡ್ ಕಾಯಿನ್, ಬಂಪರ್ ಗಿಫ್ಟ್ ಆಗಿ ಸೈಕಲ್
– ಮೊದಲ ಮತದಾರರಿಗೆ ವಿಶೇಷ ಉಡುಗೊರೆ
ಬೆಂಗಳೂರು: ಪಬ್ಲಿಕ್ ಟಿವಿಯ (Public TV) ಹೆಮ್ಮೆಯ ಪ್ರಸ್ತುತಿ 7ನೇ ಆವೃತ್ತಿಯ ವಿದ್ಯಾಪೀಠ ಎಜುಕೇಶನ್ ಎಕ್ಸ್‌ಪೋ (Vidhyapeeta Education Expo) ಇಂದಿನಿಂದ ಶುರುವಾಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
3.5 ರಿಂದ 4 ಸಾವಿರ ವಿದ್ಯಾರ್ಥಿಗಳು ಪೋಷಕರೊಂದಿಗೆ ಧಾವಿಸಿ ಶೈಕ್ಷಣಿಕ ಮೇಳದ ಪ್ರಯೋಜನ ಪಡೆದುಕೊಂಡರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್, ಬಿಜಿಎಸ್ ಮತ್ತು ಎಸ್‌ಬಿಜೆ ಗ್ರೂಪ್ ಎಂಡಿ ಪ್ರಕಾಶ್‌ನಾಥ್ ಸ್ವಾಮೀಜಿ, ಗಾರ್ಡನ್ ಸಿಟಿ ಯೂನಿವರ್ಸಿಟಿ ವಿ.ಸಿ ಜೋಸೆಫ್, ರಾಮಯ್ಯ ಯುನಿವರ್ಸಿಟಿ ವಿ.ಸಿ ಕುಲದೀಪ್ ರೈನಾ, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಡಿಕೆ ಮೋಹನ್, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ ಸಿಇಓ ರಾಜೀವ್ ಗೌಡ ವಿದ್ಯಾಪೀಠಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾಪೀಠ ಕಾರ್ಯಕ್ರಮದ ಗುರಿಯ ಬಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (HR Ranganath) ಮಾತನಾಡಿದರು. ಗಣ್ಯರು ಕೂಡ ವಿದ್ಯಾಪೀಠ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್.ಆರ್ ರಂಗನಾಥ್
ಕಾಮೆಡ್-ಕೆ, ಸಿಇಟಿ ಬಗೆಗಿನ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆ, ಗೊಂದಲಗಳಿಗೆ ಪರಿಹಾರ ಸಿಕ್ಕಿತು. 110 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಸ್ಲೋ ಸೈಕಲ್ ರೇಸ್, ಡಿಬೇಟ್ ಕಾಂಪಿಟೇಷನ್ ಹೀಗೆ ಹಲವು ಸ್ಪರ್ಧೆ ನಡೆಯಿತು. ಪ್ರತಿ ಒಂದು ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ವಿಜೇತರನ್ನು ಆಯ್ಕೆ ಮಾಡಿ ಜೀನಿ ಮಿಲೆಟ್ಸ್ ಕಡೆಯಿಂದ ಗೋಲ್ಡ್ ಕಾಯಿನ್ ಗಿಫ್ಟ್ ನೀಡಲಾಯಿತು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಚಾಲನೆ
ಬಂಪರ್ ಗಿಫ್ಟ್ ಆಗಿ ಸೈಕಲ್ ಸೇರಿ ಹಲವು ಆಕರ್ಷಕ ಬಹುಮಾನಗಳು ವಿದ್ಯಾಪೀಠದ ಆಕರ್ಷಣೆ ಆಗಿತ್ತು. ಮೊದಲ ಬಾರಿಯ ಮತದಾರರಿಗೆ ಆಡ್ ಜಲ್ ಕಡೆಯಿಂದ ವಿಶೇಷ ಗಿಫ್ಟ್ ನೀಡಲಾಯಿತು. ನಾಳೆಯೂ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯಾಪೀಠ ಎಜುಕೇಶನ್ ಎಕ್ಸ್‌ಪೋ ನಡೆಯಲಿದ್ದು, ವಿದ್ಯಾರ್ಥಿಗಳು ತಪ್ಪದೇ ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ. ಇದನ್ನೂ ಓದಿ: ಇಂದು ವಿದ್ಯಾಪೀಠಕ್ಕೆ ಚಾಲನೆ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ