ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಪಬ್ಲಿಕ್ ಟಿವಿ ಆಯೋಜಿಸಿರುವ ಮೂರು ದಿನಗಳ ಕಾಲ ನಡೆಯಲಿರುವ ವಿದ್ಯಾಪೀಠ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಕಾರ್ಯಕ್ರಮದಿಂದ ಎಲ್ಲರಿಗೂ ಲಾಭ ಆಗಬೇಕು ಹಾಗೂ ಒಳ್ಳೆಯದಾಗಬಹುದು ಎಂದು ಬಯಸುತ್ತೇನೆ. ಲಾಭ ಆಗುವ ಮೊದಲು ಒಳ್ಳೆಯ ದಾರಿ ಕಾಣಿಸಲಿ ಎಂದು ಹೇಳುತ್ತೇನೆ. ಏಕೆಂದರೆ ಒಳ್ಳೆಯ ದಾರಿ ಕಾಣಿಸಿದರೆ ಲಾಭ ಆಗುತ್ತದೆ. ಬಹಳ ಮಕ್ಕಳಿಗೆ ಹಾಗೂ ತಂದೆ-ತಾಯಿಗೆ ಆ ಒಳ್ಳೆಯ ದಾರಿ ಕಾಣಿಸಿದರೆ ಆ ದಿನ ನನಗೆ ತುಂಬಾ ಖುಷಿ ಆಗುತ್ತದೆ. ಮಕ್ಕಳು ಅವರಿಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲಿ. ಪೋಷಕರು ಇದರ ಬಗ್ಗೆ ಚಿಂತಿಸಬೇಡಿ ಎಂದರು.
Advertisement
Advertisement
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೇವಾ ವಿಶ್ವವಿದ್ಯಾಲಯದ ಕುಲಪತಿ ಶ್ಯಾಮರಾಜು, ಗಾರ್ಡನ್ ಸಿಟಿ ವಿವಿಯ ಕುಲಪತಿ ಡಾ. ವಿ.ಜಿ ಜೋಸೆಫ್, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ ಮುಖ್ಯಸ್ಥ ಡಿ.ಕೆ ಮೋಹನ್, ಗೀತಂ ವಿವಿಯ ಡೈರೆಕ್ಟರ್ ಆಫ್ ಅಡ್ಮಿಶನ್ ವಂಶಿ ದತ್ಲ ಹಾಗೂ ಶ್ರೀ ವೆಂಕಟೇಶ್ವರ್ ಕಾಲೇಜ್ ಆಫ್ ಎಂಜಿನಿಯರಿಂಗ್‍ನ ಕಾರ್ಯದರ್ಶಿ ಶಶಿಧರ್ ಅತಿಥಿಯಾಗಿ ಆಗಮಿಸಿದ್ದರು.
Advertisement
ಈ ಕಾರ್ಯಕ್ರಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃರ್ತಿ ಪರ ಕೋರ್ಸಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಸಿಇಟಿ, ನೀಟ್ ಮತ್ತು ಔದ್ಯೋಗಿಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನುರಿತ ಶಿಕ್ಷಣ ತಜ್ಞರು ಹಾಗೂ ಆರ್ಥಿಕ ಸಲಹೆಗಾರರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ.
Advertisement
ಈ ಹಿಂದಿನ ಎರಡು ಕಾರ್ಯಕ್ರಮ 2 ದಿನಗಳ ಕಾಲ ನಡೆದಿತ್ತು. ಎರಡು ದಿನಕ್ಕೆ ಭಾರೀ ಸ್ಪಂದನೆ ಸಿಕ್ಕಿದ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ವಿದ್ಯಾಪೀಠ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಯಾವೆಲ್ಲ ಸ್ಪರ್ಧೆ?
ಇಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಚರ್ಚಾ ಸ್ಪರ್ಧೆಯ ಮೊದಲ ಸುತ್ತು ನಡೆಯಲಿದೆ. ಶನಿವಾರ ಮಧ್ಯಾಹ್ನ 2 ರಿಂದ 3:30ರವರೆಗೆ ಪೇಟಿಂಗ್ ಸ್ಪರ್ಧೆ ನಡೆಯಲಿದೆ. ಈ ಅವಧಿಯಲ್ಲೇ ಕ್ವಿಜ್ ಲಿಖಿತ ಪರೀಕ್ಷೆ ಸಹ ನಡೆಯಲಿದೆ. ಶನಿವಾರವೇ ಚರ್ಚಾ ಸ್ಪರ್ಧೆಯ ಅಂತಿಮ ಸುತ್ತು ಮಧ್ಯಾಹ್ನ 3:30 ರಿಂದ 5 ಗಂಟೆಯವರೆಗೆ ನಡೆಯಲಿದೆ.
ಭಾನುವಾರ ಮಧ್ಯಾಹ್ನ 2:30 ರಿಂದ 3:30ರವರೆಗೆ ಕ್ವಿಜ್ ಫೈನಲ್ ನಡೆಯಲಿದ್ದು, 3:30 ರಿಂದ 4:30ರವರೆಗೆ ಗಾಯನ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಗುತ್ತದೆ.
11 ಮತ್ತು 12 ರಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಪ್ರದರ್ಶನ ಮಾಡಲಿದ್ದಾರೆ. ಈ ಎಲ್ಲ ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು, 17 ರಿಂದ 22 ವರ್ಷ ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು.
ಬೆಂಗಳೂರು ನಗರದಲ್ಲಿರುವ ಅರಮನೆ ಮೈದಾನದಲ್ಲಿ ಮೇ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಮೂರನೇ ವರ್ಷದ ವಿದ್ಯಾಪೀಠ ಕಾರ್ಯಕ್ರಮ ನಡೆಯಲಿದೆ.