– ಲಕ್ಕಿ ಡಿಪ್‌ನಲ್ಲಿ ಗೋಲ್ಡ್ ಕಾಯಿನ್ ಗೆದ್ದು ಖುಷಿ ಹಂಚಿಕೊಂಡ ವಿದ್ಯಾರ್ಥಿಗಳು
– ಕಾಲೇಜು, ಪಿಜಿ ಕೋರ್ಸ್‌ಗಳ ಬಗ್ಗೆ ಒಂದೇ ಸೂರಿನಡಿ ಮಾಹಿತಿ
ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುಪಡಿಸಿರುವ ವಿದ್ಯಾಮಂದಿರ (PublicTV VidhyaMandir) ಪಿಜಿ ಶೈಕ್ಷಣಿಕ ಮೇಳದ (Education Expo) ಮೂರನೇ ಆವೃತ್ತಿಯ ಕೊನೆಯ ದಿನವಾದ ಇಂದು ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಭಾನುವಾರ ರಜೆ ದಿನವಾದರೂ, ಉತ್ಸಾಹದಿಂದ ಭಾಗಿಯಾದ ಪೋಷಕರು ಮತ್ತು ವಿದ್ಯಾರ್ಥಿಗಳು ಮೇಳದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಆರಂಭವಾದ ಮೇಳದಲ್ಲಿ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಯ ʻವಿದ್ಯಾಮಂದಿರʼ ಪಿಜಿ ಶೈಕ್ಷಣಿಕ ಮೇಳ – ಇಂದು ಕೊನೇ ದಿನ, ಬನ್ನಿ ಸದುಪಯೋಗಪಡಿಸಿಕೊಳ್ಳಿ..
ನಿನ್ನೆಯಂತೆ ಇಂದು ಕೂಡ ಲಕ್ಕಿ ಡಿಪ್ ಸ್ಪರ್ಧೆ ಇತ್ತು. ವಿಜೇತ ವಿದ್ಯಾರ್ಥಿಗಳಿಗೆ ಗೋಲ್ಡ್ ಕಾಯಿನ್ ನೀಡಲಾಯಿತು. ಲಕ್ಕಿ ಡಿಪ್ ಮೂಲಕ ಪ್ರತಿ ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ.
ಶೈಕ್ಷಣಿಕ ಮೇಳದ ಬಗ್ಗೆ ಪೋಷಕರು ಮಾತನಾಡಿ, ಒಂದೇ ಕಡೆ ಇಷ್ಟೊಂದು ಆಯ್ಕೆ ಸಿಕ್ಕಿರೋದು ನಿಜಕ್ಕೂ ಸಂತೋಷ. ಇಷ್ಟೆಲ್ಲ ಕಾಲೇಜುಗಳನ್ನ ಒಂದೊಂದಾಗಿ ನೋಡಲು ಹೋದರೆ, ಸಮಯ, ಹಣ ಹೆಚ್ಚು ವ್ಯರ್ಥವಾಗುತ್ತೆ. ಆದರೆ ‘ಪಬ್ಲಿಕ್ ಟಿವಿ’ ಅದೆಲ್ಲ ಹೊರೆಯನ್ನು ಇಳಿಸುವ ಸಲುವಾಗಿ ಇಂತಹ ದೊಡ್ಡ ಆಯ್ಕೆಗಳನ್ನ ನಮ್ಮ ಮುಂದೆ ಇಟ್ಟಿದೆ. ಕಾಲೇಜುಗಳು ಕೂಡ ಕೋರ್ಸ್‌ಗಳು ಮತ್ತು ಉದ್ಯೋಗಾವಕಾಶಗಳ ಬಗ್ಗೆ ಗೊಂದಲ ನಿವಾರಣೆ ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ಇದೊಂದು ಅದ್ಭುತ ಅವಕಾಶ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಯ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳ – ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
ಮೇಳ ಸಂಜೆ 6 ಗಂಟೆವರೆಗೂ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಇದನ್ನೂ ಓದಿ: ಸರ್ಕಾರಗಳು ತರ್ಲೆ ಮಾಡೋದು ಕಡಿಮೆ ಮಾಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಚೆನ್ನಾಗಿರುತ್ತೆ: ರಂಗನಾಥ್