ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ತಮ್ಮ ಮಕ್ಕಳನ್ನ ಯಾವ ಕೋರ್ಸ್ ಗೆ ಸೇರಿಸಬೇಕು ಎಂಬ ಪೋಷಕರ ಗೊಂದಲ ನಿವಾರಣೆಗಾಗಿ ನಿಮ್ಮ ಪಬ್ಲಿಕ್ ಟಿವಿ ವಿದ್ಯಾಪೀಠ ಹೆಸರಿನಲ್ಲಿ ಶೈಕ್ಷಣಿಕ ಮೇಳವನ್ನ ಆಯೋಜನೆ ಮಾಡಿತ್ತು. ಕಳೆದೆರಡು ದಿನ ವಿದ್ಯಾಪೀಠಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿದ್ದಾರೆ.
Advertisement
ಈ ಶೈಕ್ಷಣಿಕ ಮೇಳ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದೇ ಕೊನೆಯ ದಿನ. ಇಂದು ಕೂಡ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ.
* ಬೆಳಗ್ಗೆ 10 ರಿಂದ 11 ಗಂಟೆ – ಮೋಟಿವೇಷನಲ್ ಸ್ಪೀಚ್
* ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆ – ಅಗಸ್ತ್ಯ ಫೌಂಡೇಶನ್ ಸಂಸ್ಥಾಪಕ ರಾಮ್ ಜಿ ರಾಘವನ್‍ರಿಂದ ಸೆಮಿನಾರ್
* ಮಧ್ಯಾಹ್ನ 12 ರಿಂದ ಮಧ್ಯಾಹ್ನ 1 ಗಂಟೆ – ಪ್ರಾಜೆಕ್ಟ್ ವರ್ಕ್ ಗಳ ಪ್ರದರ್ಶನ
* ಮ.ಧ್ಯಾಹ್ನ 2 ರಿಂದ 3 ಗಂಟೆ – ರಸಪ್ರಶ್ನೆ ಫೈನಲ್
* ಮಧ್ಯಾಹ್ನ 3 ರಿಂದ 4 ಗಂಟೆ – ಗಾಯನ ಸ್ಪರ್ಧೆ
* ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ
Advertisement
Advertisement
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿಮ್ಮ ಪಬ್ಲಿಕ್ ಟಿವಿ ಶೈಕ್ಷಣಿಕ ಮೇಳವನ್ನು ಆಯೋಜನೆ ಮಾಡಿದ್ದು ಇವತ್ತು ಭಾನುವಾರ ಕೂಡ ಆಗಿರೋದ್ರಿಂದ ಎರಡು ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಪೋಷಕರು ಭಾಗವಹಿಸುವ ನಿರೀಕ್ಷೆ ಇದೆ. ಹಲವಾರು ಶಿಕ್ಷಣ ಸಂಸ್ಥೆಗಳ ಸ್ಟಾಲ್ ಮತ್ತು ಕಾರ್ಯಗಾರಗಳು ಇರುತ್ತವೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಭೇಟಿ ಕೊಟ್ಟು ಮಕ್ಕಳ ಭವಿಷ್ಯಕ್ಕೆ ಬೆಳಕಾಗಬೇಕು ಎಂಬುದು ನಿಮ್ಮ ಪಬ್ಲಿಕ್ ಟಿವಿಯ ಆಶಯ.