– ಹಲವು ಕೋರ್ಸ್‌ಗಳ ಬಗ್ಗೆ ಮಾಹಿತಿ, ಗೊಂದಲಗಳಿಗೆ ಪರಿಹಾರ ಕಂಡುಕೊಂಡ ವಿದ್ಯಾರ್ಥಿಗಳು, ಪೋಷಕರು
– ನಾಳೆಯೂ ಇದೆ ಶೈಕ್ಷಣಿಕ ಮೇಳ; ಬನ್ನಿ ಸದುಪಯೋಗಪಡಿಸಿಕೊಳ್ಳಿ..
ಬೆಂಗಳೂರು: ‘ಪಬ್ಲಿಕ್ ಟಿವಿ’ಯು AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ಪ್ರಸ್ತುತಪಡಿಸುತ್ತಿರುವ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ (PublicTV VidhyaMandir Education Expo) ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಪೋಷಕರು ಡಿಗ್ರಿ ನಂತರ ಮುಂದೇನು ಎನ್ನುವ ಗೊಂದಲಗಳಿಗೆ ಸೂಕ್ತ ಪರಿಹಾರ ಕಂಡುಕೊಂಡರು.
Advertisement
ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಈ ಶೈಕ್ಷಣಿಕ ಮೇಳ ನಡೆಯಲಿದೆ. 42ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗಿಯಾಗಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ತನಕ ಈ ಎಜ್ಯೂಕೇಶನ್ ಎಕ್ಸ್ ಪೋ ನಡೆಯಲಿದೆ. ಇದನ್ನೂ ಓದಿ: ಸರ್ಕಾರಗಳು ತರ್ಲೆ ಮಾಡೋದು ಕಡಿಮೆ ಮಾಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಚೆನ್ನಾಗಿರುತ್ತೆ: ರಂಗನಾಥ್
Advertisement
Advertisement
ಮೊದಲ ದಿನವಾದ ಇಂದು ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ಈ ಮೇಳಕ್ಕೆ ಆಗಮಿಸಿ ಮುಂದಿನ ಶೈಕ್ಷಣಿಕ ಬದುಕಿನ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಪ್ರತಿ ಮಳಿಗೆಗಳಿಗೂ ತೆರಳಿ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್‌ಗಳ ಬಗ್ಗೆ ತಿಳಿದುಕೊಂಡುರು. ಯಾವ ಕೋರ್ಸ್ ಮಾಡಿದರೆ, ಯಾವ ಉದ್ಯೋಗ ಅವಕಾಶಗಳು ಸಿಗಲಿವೆ ಎಂಬ ಬಗ್ಗೆಯೂ ತಿಳಿದುಕೊಂಡರು.
Advertisement
ಈ ಕಾರ್ಯಕ್ರಮಕ್ಕೆ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ದೀಪ ಬೆಳಗಿಸುವ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಶ್ಯಾಮರಾಜು, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಚಾಲನೆ – ಬನ್ನಿ PG ಕಾಲೇಜ್, ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ
ಈ ಮೇಳದಲ್ಲಿ ಭಾಗಿಯಾದ ಶೈಕ್ಷಣಿಕ ಸಂಸ್ಥೆಗಳು ಕೂಡ ಖುಷಿಯಾಗಿವೆ. ವಿದ್ಯಾರ್ಥಿಗಳು, ಪೋಷಕರು ಆಯಾ ಶೈಕ್ಷಣಿಕ ಸಂಸ್ಥೆಗಳ ವಿಶೇಷತೆ, ಉದ್ಯೋಗವಕಾಶಗಳು ಹಾಗೂ ಇತರೆ ವಿಷಯಗಳ ಬಗ್ಗೆ ಒಂದೆ ಸೂರಿನಡಿ ತಿಳಿದುಕೊಳ್ಳಲು ಈ ಮೇಳ ಸಹಾಯಕಾರಿಯಾಗಿದೆ. ಶೈಕ್ಷಣಿಕ ಮೇಳ ನಾಳೆ ಕೂಡ ಇರಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಬಹುದು.
ಲಕ್ಕಿ ಡ್ರಾ ಮೂಲಕ ಪ್ರತಿ ಒಂದು ಗಂಟೆಗೊಮ್ಮೆ ವಿಜೇತರಿಗೆ ಆಕರ್ಷಕ ಬಹುಮಾನ ನೀಡುವ ಕಾರ್ಯಕ್ರಮವೂ ಇತ್ತು. ಹಲವಾರು ವಿದ್ಯಾರ್ಥಿಗಳು ಲಕ್ಕಿ ಡ್ರಾ ವಿಜೇತರಾಗಿ ಬಹುಮಾನ ಪಡೆದು ಖುಷಿಪಟ್ಟರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ
ಶೈಕ್ಷಣಿಕ ಮೇಳಕ್ಕೆ ಆಗಮಿಸಿದ್ದ ನಿಶಾಂತ್, ನಾನು ಪಿಜಿಸಿಇಟಿ ಪರೀಕ್ಷೆ ಬರೆದಿದ್ದೇನೆ. ಮುಂದಿನ ಶೈಕ್ಷಣಿಕ ಬದುಕಿಗೆ ಸೂಕ್ತವಾದ ಕಾಲೇಜುಗಳ ಬಗ್ಗೆ ತಿಳಿದುಕೊಳ್ಳಲು ಬಂದಿದ್ದೆ. ಶೈಕ್ಷಣಿಕ ಸಂಸ್ಥೆಗಳು ಒಂದೇ ಸೂರಿನಡಿ ಸೇರಿದ್ದು, ನಮಗೆ ಕಾಲೇಜು ಮತ್ತು ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು. ‘ಪಬ್ಲಿಕ್ ಟಿವಿ’ ಇದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು ವಿದ್ಯಾರ್ಥಿಗಳಿಗೆ ಅನುಕೂಲಕರವಾಯಿತು. ಇಂತಹ ಮೇಳಗಳಾದರೆ, ಒಂದೊಂದು ಶಿಕ್ಷಣ ಸಂಸ್ಥೆಗೂ ಅಲೆಯುವ ಪರಿಸ್ಥಿತಿ ಇರಲ್ಲ. ನಮಗಂತೂ ಇದರಿಂದ ತುಂಬಾ ಉಪಯೋಗ ಆಯಿತು ಎಂದು ಖುಷಿ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿನಿ ಮೇಘನಾ ಮಾತನಾಡಿ, ನಾನು ಬಿ.ಕಾಂ ವ್ಯಾಸಂಗ ಪೂರ್ಣಗೊಳಿಸಿದ್ದೇನೆ. ಈ ಶೈಕ್ಷಣಿಕ ಮೇಳ ನಮಗೆಲ್ಲ ಸುವರ್ಣಾವಕಾಶದಂತೆ. ನಾನು ಮುಳಬಾಗಿಲಿನಿಂದ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.