ಬೆಂಗಳೂರು: ಸರ್ಕಾರಗಳು ತರ್ಲೆ ಮಾಡುವುದು ಕಡಿಮೆ ಮಾಡಿದರೆ ನಮ್ಮ ಶಿಕ್ಷಣ ವ್ಯವಸ್ಥೆ (Education System) ಇನ್ನೂ ಚೆನ್ನಾಗಿರುತ್ತದೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (HR Ranganath) ಹೇಳಿದ್ದಾರೆ.
ಪಬ್ಲಿಕ್ ಟಿವಿ’ (PUBLiC TV) ಪ್ರಸ್ತುತ ಪಡಿಸುತ್ತಿರುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ನಡೆಯುತ್ತಿರುವ ವಿದ್ಯಾಮಂದಿರ (Vidhya Mandira) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ನಾತಕೋತ್ತರ ಪದವಿ ವಿಚಾರ ಬಂದಾಗ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವುದು ಕಠಿಣವಾಗುತ್ತಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಆ ವ್ಯವಸ್ಥೆ ಭಾರತಕ್ಕೆ ಮರಳಬೇಕಿದೆ. ಅದಕ್ಕೆ ಬೇಕಾದ ತಯಾರಿಗಳನ್ನ ನಮ್ಮಲ್ಲಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್
Advertisement
Advertisement
ರೇವಾ ಯೂನಿವರ್ಸಿಟಿಯ ಚಾನ್ಸಲರ್ ಡಾ. ಪಿ ಶ್ಯಾಮರಾಜು (Dr. P. Shyama Raju) ಮಾತನಾಡಿ, ಡಿಗ್ರಿ ಮಾಡಿದ ನಂತರ ಮುಂದೇನು ಮಾಡಬೇಕು ಅನ್ನೋ ಗೊಂದಲಕ್ಕೆ ಈ ಶೈಕ್ಷಣಿಕ ಮೇಳದಲ್ಲಿ ಪರಿಹಾರ ಸಿಗಲಿದೆ. ಐಟಿ ರಿಲೆಟೆಡ್ ಕೋರ್ಸ್ ಗಳಿಗೆ ಮುಂದಿನ ದಿನಗಳಲ್ಲಿ ಭವಿಷ್ಯವಿದೆ. ಪಿಜಿ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಮಾಡಲೇಬೇಕು. ಪೈಪೋಟಿ ಇದ್ದಾಗ ಗುಣಮಟ್ಟ ಬೆಳೆಯುತ್ತದೆ ಎಂದರು.
Advertisement
ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ (Ashwath Narayan) ಮಾತನಾಡಿ, ಒಂದೇ ಸೂರಿನಡಿ ಈ ರೀತಿಯ ಶೈಕ್ಷಣಿಕ ಮೇಳಾ ತುಂಬಾ ಸಹಾಯಕಾರಿಯಾಗಲಿದೆ. ಉದ್ಯೋಗ, ವಿದ್ಯಾರ್ಥಿ ವೇತನ ಸೇರಿ ಇತರೆ ವಿಷ್ಯಗಳನ್ನ ತಿಳಿಸಲು ಈ ಮೇಳಾ ಸಹಾಯವಾಗಲಿದೆ. ಶಿಕ್ಷಣವೇ ನಮ್ಮ ಐಡೆಂಟಿಟಿ ಎಂದು ಹೇಳಿದರು. ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್ ಫ್ಯಾನ್ಸ್‌ಗೆ ಕಿಚ್ಚನ ಖಡಕ್ ರಿಪ್ಲೈ
Advertisement
ವಿದ್ಯಾಮಂದಿರ ಕಾರ್ಯಕ್ರಮ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜನೆಗೊಂಡಿದೆ. ಇಂದು ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಜುಕೇಷನ್ ಎಕ್ಸ್‌ಪೋ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬಹುದು. ಡಿಗ್ರಿ ಕೋರ್ಸ್ ಬಳಿಕ ಮುಂದೇನು ಎಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ಪಬ್ಲಿಕ್ ಟಿವಿ ವಿದ್ಯಾಮಂದಿರ ಎಜುಕೇಶನ್ ಎಕ್ಸ್‌ಪೋ ಪರಿಹಾರ ನೀಡಲಿದೆ.
ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಂಡಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.