ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತಿಯ ಮೂರನೇ ಆವೃತ್ತಿಯ ವಿದ್ಯಾಮಂದಿರ (Vidhya Mandira) ಶೈಕ್ಷಣಿಕ ಮೇಳಕ್ಕೆ (Education Expo) ಇಂದು ಚಾಲನೆ ಸಿಕ್ಕಿದೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವಥ್ ನಾರಾಯಣ್ ಮತ್ತು ರೇವಾ ಯೂನಿವರ್ಸಿಟಿಯ ಚಾನ್ಸಲರ್ ಡಾ. ಪಿ ಶ್ಯಾಮರಾಜು ಅವರು ಟೇಪ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನೆಯ ಬಳಿಕ ಅತಿಥಿಗಳ ಜೊತೆ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್ ಆರ್ ರಂಗನಾಥ್ (HR Ranganath) ಸ್ಟಾಲ್ ವೀಕ್ಷಣೆ ಮಾಡಿದರು.
ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ಪಡಿಸುತ್ತಿರುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ನಡೆಯುತ್ತಿರುವ ವಿದ್ಯಾಮಂದಿರ ಕಾರ್ಯಕ್ರಮ ಇಂದು ಮತ್ತು ನಾಳೆ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ. ಇದನ್ನೂಓದಿ:ಏರ್‌ಲಿಫ್ಟ್ ವೇಳೆ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ
ವಿದ್ಯಾ ಮಂದಿರದಲ್ಲಿ ರಾಜ್ಯದ ನಾನಾ ಭಾಗಗಳ 42ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.