– ಬೇಡಿಕೆ ತಗ್ಗಿದ್ದಕ್ಕೆ ಸಿಬ್ಬಂದಿ ಕಳ್ಳಾಟ
– ಪಬ್ಲಿಕ್ ಟಿವಿಯಿಂದ ಬಿಗ್ ಎಕ್ಸ್‌ಪೋಸ್
ಬೆಂಗಳೂರು: ಹಸಿದವರ ಪಾಲಿನ ಅನ್ನಪೂರ್ಣೇ. ಬಡವರ ಪಾಲಿನ ಫೈವ್ ಸ್ಟಾರ್ ಹೋಟೆಲ್ ಅಂತಲೇ ಒಂದು ಕಾಲದಲ್ಲಿ ಇಂದಿರಾ ಕ್ಯಾಂಟೀನ್ ಫೇಮಸ್ ಆಗಿತ್ತು. ಆದರೆ ಕೋವಿಡ್ ನಂತರದ ದಿನಗಳಲ್ಲಿ ಕೆಲ ಇಂದಿರಾ ಕ್ಯಾಂಟೀನ್‍ಗೆ ಬೇಡಿಕೆ ಕುಸಿದಿದೆ. ಹೀಗಾಗಿ ಕ್ಯಾಂಟೀನ್ ಸಿಬ್ಬಂದಿ ತಮ್ಮ ಕೆಲಸ ಉಳಿಸಿಕೊಂಡು ಜೇಬು ತುಂಬಿಸಿಕೊಳ್ಳಲು ಅಡ್ಡ ದಾರಿಯಲ್ಲಿ ಹೊರಟಿದ್ದಾರೆ. ಕ್ಯಾಂಟೀನ್‍ನಲ್ಲಿ ಸೇಲ್ ಆದ ಊಟ, ತಿಂಡಿಯನ್ನು ಖಾಸಗಿ ಹೋಟೆಲ್‍ಗಳಿಗೆ ಮಾರಾಟ ಮಾಡುತ್ತಿದ್ದಾರೆ.
Advertisement
ಇಂದಿರಾ ಕ್ಯಾಂಟೀನ್‍ನಲ್ಲಿ ರಿಯಾಯಿತಿ ದರದಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ – ರಾತ್ರಿ ಊಟ ನೀಡಲಾಗುತ್ತದೆ. ಈ ಹಿಂದೆ ಕೊರೊನಾ ಇದ್ದಾಗ ಉಚಿತ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೀಗ ಈ ಬೇಡಿಕೆ ಪ್ರಮಾಣ ಕುಸಿದಿದೆ. ತಮ್ಮ ಕೆಲಸ ಉಳಿಸಿಕೊಂಡು ಜೇಬು ತುಂಬಿಸಿಕೊಳ್ಳಲು ಹಲವು ಕ್ಯಾಂಟೀನ್‍ಗಳು ಅಡ್ಡ ದಾರಿಯಲ್ಲಿ ವ್ಯಾಪಾರಕ್ಕೆ ಮುಂದಾಗಿವೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ
Advertisement
Advertisement
ಊಟ ಸೇಲ್ ಆಗದ ಕಾರಣಕ್ಕೆ ಕೆಲ ಇಂದಿರಾ ಕ್ಯಾಂಟೀನ್ ಮಾಲೀಕರು ಹೋಟೆಲ್‍ಗಳಿಗೆ ಊಟ ಪೂರೈಕೆ ಮಾಡಲು ನಿಂತು ಬಿಟ್ಟಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಇಂದಿರಾ ಕ್ಯಾಂಟೀನ್‍ನಲ್ಲಿ ನಮ್ಮ ಪ್ರತಿನಿಧಿ ನಿಮ್ಮ ಕ್ಯಾಂಟೀನ್‍ನಲ್ಲಿ ಹೇಗಿದ್ದರೂ ಊಟ ಸೇಲ್ ಆಗುತ್ತಿಲ್ಲ. ಹಾಗಾಗಿ ನೀವು ನಮ್ಮ ಹೋಟೆಲ್‍ಗೆ ಊಟ ಪೂರೈಸಿ ಅಂತ ಕೇಳಿದ್ದೆ ತಡಾ, ಸಿಬ್ಬಂದಿ ಊಟವನ್ನು ತುಂಬಿ, ತುಂಬಿ ಕೊಟ್ಟಿದ್ದಾರೆ. ಇದನ್ನೂ ಓದಿ: ಇಂದಿನಿಂದ ಶಾಲೆ ಆರಂಭ – ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ
Advertisement
`ಇಂದಿರಾ ಕ್ಯಾಂಟೀನ್ ರಹಸ್ಯ’
ಸ್ಥಳ: ಹೆಬ್ಬಾಳ ಫ್ಲೈಓವರ್ (ವಾರ್ಡ್ ನಂ.22 – ವಿಶ್ವನಾಥ ನಾಗೇನಹಳ್ಳಿ)
ಪ್ರತಿನಿಧಿ – ಸರ್ ಊಟ ಬೇಕು..!
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಎಷ್ಟು ಬೇಕು?
ಪ್ರತಿನಿಧಿ – ನಮಗೆ ಬೇರೆ ಕಡೆ ಮಾರೋದಕ್ಕೆ.. ಹೋಟೆಲ್‍ಗೆ ಬೇಕು
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಆಯ್ತು ಹೆಂಗ್ ತಗೊಂಡ್ ಹೋಗ್ತೀರಾ? ಡಬ್ಬಿ ತಗೊಂಡ್ ಬನ್ನಿ
ಪ್ರತಿನಿಧಿ – ಡಬ್ಬಿ ತಂದಿದ್ದೀವಿ… ಲಾಸ್ಟ್ ಟೈಮ್ ಹೇಳಿದ್ರಿ ಡಬ್ಬ ಬೇಕು ಅಂತ.. ನಾವ್ ಒಂದ್ ಮೂರ್ ಕಡೆ ನೋಡಿಕೊಂಡಿದ್ದೀವಿ.. ನಿತ್ಯ ಇಂದಿರಾದಿಂದಲೇ ಪರ್ಸೆಲ್ ತಗೋತೀವಿ.
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಆಗಲೀ ಹೇಳಿ.. ಈಗೆಷ್ಟು ಬೇಕು.. 20 ಊಟ ದಬ್ರಿಗೆ ತೆಗೆಯಿರಿ.
`ಇಂದಿರಾ ಕ್ಯಾಂಟೀನ್ ರಹಸ್ಯ’
ಸ್ಥಳ – ಶಿವಾಜಿನಗರ (ವಾರ್ಡ್ ನಂಬರ್ ನಂ 92 ಶಿವಾಜಿನಗರ)
ಪ್ರತಿನಿಧಿ – 20 ತಿಂಡಿ ಬೇಕು..!
ಮಾರ್ಷಲ್ – ಖಾಲಿ ಆಗಿದೆ.. ಲಾಸ್ಟ್ ಟೈಮ್ ಬಂದಿದ್ರಿ
ಪ್ರತಿನಿಧಿ – ಹೌದು , ಬೇರೆ ಅಂಗಡಿ ನೋಡಿಕೊಂಡಿದ್ದಿವಿ
ಮಾರ್ಷಲ್ – ಯಾಕೆ.. ಇಲ್ಲೇ ಸಿಗುತ್ತಿತ್ತು.. ಟೈಮ್‍ಗೆ ಮಧ್ಯಾಹ್ನ ಬನ್ನಿ.. ಕೊಡ್ತೀವಿ. ನೀವು ಡೈಲಿ ಬಂದರೆ ಸಿಗುತ್ತೆ.. ಬಿಟ್ಟು, ಬಿಟ್ಟು ಬಂದರೆ ಕೊಡುವುದು ಕಷ್ಟ.
`ಇಂದಿರಾ ಕ್ಯಾಂಟೀನ್ ರಹಸ್ಯ’
ಸ್ಥಳ – ಶಿವಾಜಿನಗರ (ವಾರ್ಡ್ ನಂಬರ್ ನಂ 92 ಶಿವಾಜಿನಗರ)
ಪ್ರತಿನಿಧಿ – ಸರ್ ಈಗ ಊಟ 20 ಕೊಡಿ
ಮಾರ್ಷಲ್ – ತಗೊಳ್ಳಿ… ಪಾತ್ರೆ ತೆಗೆಯಿರಿ
ಪ್ರತಿನಿಧಿ – ನಮಗೆ ಮೂರು ಟೈಮ್ ಬೇಕು.. ಹೋಟೆಲ್‍ನಲ್ಲಿ ಮಾರ್ತಿವಿ
ಮಾರ್ಷಲ್ – ನೀವು ಫಿಕ್ಸ್ ಆಗಿ ಬರಬೇಕು.. ನಮ್ ಸೂಪರ್ ವೈಸರ್‍ಗೆ ಮಾಹಿತಿ ಕೊಡಬೇಕಿದೆ
ಪ್ರತಿನಿಧಿ – ಚೀಟಿ.. ಅದುವೇ ಟೋಕನ್ ಬೇಕಿತ್ತು..
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಇಲ್ಲ.. ಬನ್ನಿ.. ಡೈಲಿ ಬರ್ತಿರಾ ಅಲ್ವಾ?
ಪ್ರತಿನಿಧಿ – ನಾವ್ ಮೂರು – ನಾಲ್ಕ್ ಕಡೆ ನೋಡಿಕೊಂಡಿದ್ದೀವಿ… ಇದೇ ನಮ್ ಕೆಲಸ.. ಕೊರೋನಾ ಲಾಸ್ ಕಂಟ್ರೋಲ್‍ಗೆ ಬೇರೆ ದಾರಿ ಕಾಣಲಿಲ್ಲ..
`ಇಂದಿರಾ ಕ್ಯಾಂಟೀನ್ ರಹಸ್ಯ’
ಸ್ಥಳ – ಡಾಲರ್ಸ್ ಕಾಲೋನಿ (ವಾರ್ಡ್ – 18 , ರಾಧಕೃಷ್ಣ ದೇವಸ್ಥಾನ)
ಪ್ರತಿನಿಧಿ – ಲಾಸ್ಟ್ ಟೈಮ್ ಹೋಟೆಲ್‍ಗೆ ತಿಂಡಿ ಬೇಕು ಅಂತ ಬಂದ್ವಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಅಯ್ಯೋ ಬರ್ತೀರಾ.. ಅಮೇಲೆ ಕಾಣಿಸುವುದಿಲ್ಲ
ಪ್ರತಿನಿಧಿ – ಇವತ್ತು 15 ತಿಂಡಿ ಬೇಕು
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಏನ್ ತಂದಿದ್ದೀರಾ.. ಕವರಾ.? ಬಾಕ್ಸಾ.?
ಪ್ರತಿನಿಧಿ – ಈ ಸಲ ಬಾಕ್ಸ್ ತಂದಿದೀವಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಕೊಡ್ತೀವಿ
ಪ್ರತಿನಿಧಿ – ನಮ್ ಹೋಟೆಲ್‍ಗೆ ಬೇಕು
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಎಲ್ಲಿಗಾದ್ರೂ ತಗೊಂಡ್ ಹೋಗಿ ನಮಗೆ ಬ್ಯುಸಿನೆಸ್ ಬೇಕು.. ಅಷ್ಟೆ..
`ಇಂದಿರಾ ಕ್ಯಾಂಟೀನ್ ರಹಸ್ಯ’
ಸ್ಥಳ – ವಿಶ್ವನಾಥ್ ನಾಗೇನಹಳ್ಳಿ ಟು ಸಿಬಿಐ ಕ್ರಾಸ್
ಪ್ರತಿನಿಧಿ – ಸರ್ ಫೋನ್ ಮಾಡಿಸಿದಲ್ವ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಹು… ಪಾರ್ಸೆಲ್‍ಗೆ ಏನ್ ತಂದಿದ್ದೀರಾ..?
ಪ್ರತಿನಿಧಿ – ಬಾಕ್ಸ್ ತಂದಿದ್ದೀನಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಸರ್ ಎಷ್ಟು ಬೇಕು?
ಪ್ರತಿನಿಧಿ – 15 ತಿಂಡಿ ಕೊಡಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಬೇಗ ಬಾಕ್ಸ್ ತನ್ನಿ
ಪ್ರತಿನಿಧಿ – ಅಣ್ಣಾ ನಮಗೆ ಡೈಲಿ ಬೇಕು.. ಸ್ವಲ್ಪ ಜಾಸ್ತಿ ದುಡ್ ಬೇಕಾದರೂ ತಗೊಳ್ಳಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಜಾಸ್ತಿ ದುಡ್ ಬೇಡ.. ನಮ್ ಸೂಪರ್ ವೈಸರ್ ಹತ್ರ ಮಾತನಾಡಿ ಸಾಕು..
ಹಣ ಪಡೆದು ಚೀಟಿ ಕೊಡುವ ಸಿಬ್ಬಂದಿ ಪ್ರತಿನಿತ್ಯ ಬರುತ್ತೀರಾ ಅಲ್ವಾ ಅಂತ ಮತ್ತೆ, ಮತ್ತೆ ಕನ್ಫರ್ಮ್ ಮಾಡಿಕೊಳ್ಳುತ್ತಾರೆ. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ ಸೇರಿ ಹಲವೆಡೆ ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುತ್ತಿದೆ. ಮತ್ತೆ ಕೆಲವೆಡೆ ಗ್ರಾಹಕರಿಲ್ಲದೇ ಖಾಲಿಯಾಗಿದೆ. ಸದ್ಯ ಈ ಹಗರಣ ಕುರಿತಂತೆ ಬೆಂಗಳೂರು ಉಸ್ತುವಾರಿಗಳಾದ ಮಾನ್ಯ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.